ಆ ಬಿಳಿಹೂಗಳ ಚಿಲುಮೆಯಲಿ ಶ್ವೇತ ಸುಂದರಿ, ನಿನ್ನ ಜೀವದ ಉಸಿರು ಹೊಗೆಯಾಡುತ್ತಿರುತ್ತದೆ. ನಿನ್ನ ಸ್ತನಗಳ ಉಬ್ಬರ ಗುಡ್ಡಗಾಡಿನ ಹಿಮದ ಗಾಳಿಯಲೆಗಳನ್ನು ಹಿಂಗಿಸಿಕೊಳ್ಳಲಾರದೇ? ಕೆಂಪುರಕ್ತ ಕಕ್ಕುವ ಗೂಳಿಗಳೆದುರು ನಿನ್ನ ನೆನಪು ಶಿಖರದಂತೆ ಬೆಳೆಯತೊಡಗ...
ಅಹಿಂದ ರ್‍ಯಾಲಿ ನಡೆಸಿ ಗೋಡ್ರ ಶಾಪಕ್ಕೆ ಗುರಿಯಾದ ಸಿದ್ರಾಮು ಮಾದೇವು ಜಾರ್ಕಿಹೊಳಿ ಅಧಿಕಾರದ ವಜನ್ ಕಳ್ಕೊಂಡು ವನವಾಸ್ದಗವರೆ. ವನವಾಸ ಅಂಬೋದು ಹದಿನಾಕು ವರ್ಸವೋ ನಾಕು ವರ್ಸವೋ ಮುಂದಿನ ಚುನಾವಣೆ ಹೊತ್ಗೇ ಮುಗಿತದೋ ಮೈಲಾರಲಿಂಗನೇ ಬಲ್ಲ. ಆದ್ರೂವೆ ...
ಜೀವನದ ನೆನಹುಗಳ ಮನದಿ ಮೆಲುಕಾಡಿಸಲು ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು || ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ ವಚನವೊಂದರಲಿ ಕಂಡುಬರುತಿದೆ ಕಲ್ಪ || ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ...
ಜಾರತ ಕರ್ಮವು ತೀರಿದ ಬಳಿಕ ಆರಿಲ್ಲದೋಯಿತು ಐಸುರ ಕೊಳಕ ||ಪ|| ಮಾರನೋಮಿಗೆ ಕೂಡಿ ಬಂದಿತು ಆರಿಗ್ಹೇಳಲಿ ತೀರಲರಿಯದು ಮೂರು ಪುರವನು ನಾಶಮಾಡಿತು ಘೋರತರದಲಾವಿಯ ಹಬ್ಬ ||೧|| ಶುದ್ದಚಂದ್ರನ ಕಿರಣವು ಸೋಂಕಿ ಎದ್ದು ಭೂಮಿಗೆ ...
ಓಡೋಡುತ್ತಲೇ ಬಂದರೂ ಬಸ್‌ಸ್ಟಾಪಿಗೆ ಬರುವಷ್ಟರಲ್ಲಿಯೇ ಬಸ್ಸು ಹೊರಟು ಬಿಟ್ಟಿತ್ತು. ಬಾಗಿಲಿನುದ್ದಕ್ಕೂ ನೇತಾಡುತ್ತಿದ್ದವರನ್ನು ಕಂಡೇ ಬಸ್ಸು ಹತ್ತುವ ಧೈರ್ಯ ಬರಲಿಲ್ಲ. ವಾಚು ನೋಡಿಕೊಂಡಳು. ಗಂಟೆ ಆಗಲೇ ೧೦ ತೋರಿಸುತ್ತಿತ್ತು. ಇನ್ನರ್ಧ ಗಂಟೆಯಲ್ಲ...
ಐಸುರ ಮೋರುಮ ದಸರೆಕ ||ಪ.|| ವಾಸುಮತಿಯು ಆಡಿದವು ಅಲಾವಿಯ ಮಹಾಶಕ್ತಿ ಪೂಜಿಸ್ಯಾಡುತ ||ಅ.ಪ|| ಜಾರತ ಕರ್ಮದ ವಾರಕ್ಕ ಸಾರುತಿಹುದು ಸರ್ವರಿಗೆ ವಿಲಾಸದಿ ಮೂರು ತಾರಕಿ ಕಿರಣದೊಳಗೆ ||೧|| ಭ...
ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ ಜುಳುಜುಳು ಕಳಕಳದೊಯ್ಯಾರ ನಡಿಗೆ ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ ನೋವರಿಯದೇಕಾಂತದಾನಂದ ತೀರದಲಿ ಸಂತೋಷಸಾಗರಲೀನ ಪ್ರಶಾಂತ ಕಾನನ ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ ನೆಲ-ಮುಗಿಲು ಮರ ತ...
ಯಾಕೆ ಹರಿಯುತಿದೆ ಈ ನದಿ ಹೀಗೆ ದಡಗಳನ್ನೆ ದೂಡಿ ತನ್ನನು ಕಾಯುವ ಎಲ್ಲೆಗಳನ್ನೇ ಇಲ್ಲದಂತೆ ಮಾಡಿ ಹೀಗೆ ಹಾಯುವುದೇ ಮಲ್ಲಿಗೆ ಕಂಪು ಗಡಿಗಳನ್ನು ಮೀರಿ ತನ್ನಿರುವನ್ನೇ ಬಯಲುಗೊಳಿಸುವುದೆ ಬನದ ಆಚೆ ಸಾರಿ ಯಾರು ನುಡಿಸುವರು ಎಲ್ಲೋ ದೂರದಿ ಮತ್ತೆ ಮತ್ತೆ...
ಗೆಸ್ ಮಾಡ್ದಂಗೆ ಆತ್ ನೋಡ್ರಿ. ಗೋಡ್ರನ ಎಗೆನೆಸ್ಟ್ ಮಾಡ್ಕೊಂಡೋರ ಆಯಸ್ಸಾರ ಲೆಸ್ ಆಯ್ತದೆ ಇಲ್ಲ ಪವರ್ರಾನ ಮಿಸ್ ಆಯ್ತದೆ. ಆಹಿಂದ ಸಮಾವೇಸ ಮಾಡಿ ಬೀಗ್ತಿದ್ದ ಸಿದ್ರಾಮುದೀಗ ತ್ರಿಸಂಕು ಸ್ಥಿತಿ. ಆವಯ್ಯ ಕುಂಟಿಕ್ಯಂಡು ಓಡಾಡಾದು ನೋಡಿದ್ರಂತೂ ಕಳ್ಳು ...
ಮೋಡಿಕಾರ ಮುತ್ತಯ್ಯನ ಚೀಲದಿ ಅಯ್ದೆಂದರೆ ಅಯ್ದೇ ಒಡವೆಗಳು ಹುಲ್ಲು ಕಡ್ಡಿಗಳ ಕಟ್ಟೊಂದಿಹುದು ಇನಿತರಿಂದಲೆ ಬೆರಗಿನಾಟವನು ಹೂಡಿಹನು ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು ರತ್ನ ವಜ್ರಾದಿಗಳ ತಾಮ್ರ ತವರಿದ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






