ಹೊತ್ತಿಳಿವು, ಸಂಜೆಬೆಳ್ಳಿ ನನ್ನ ಕರೆದೊಂದು ಕೂಗು! ಇಲ್ಲದಿರಲೇನೇನು ಬಂದರಿನ ನರಳಾಟ, ನಾ ಕಡಲ ಸೇರುವಾಗ; ಹೊರಳಿ ನಿದ್ದೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ ತುಂಬುದೆರೆಯುಬ್ಬು ಹೊನಲು, ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು ಮರಳಿ ಮನೆಗೆಯ್ದುವಾಗ! ಕಣ್ಣುಬ್ಬು , ಸಂಜೆಗಂಟೆ, ಆ ಬಳಿಕ ಕಗ್ಗತ್ತಲೆ! ಇಲ್ಲದ...

ಅವಳು ಕಣ್ಣ ತೆರೆದಳು ಮೆಲ್ಲಗೆ ಮೂಲೆ ಮೂಲೆ ಮೈಮುರಿದೆದ್ದಳು ಹೊಂಗದಿರ ಪೊರಕೆಯಿಂದ ಸಂದು ಗೊಂದುಗಳ ಝಾಡಿಸಿ ಕತ್ತಲು ಕಸ ಗುಡಿಸಿದಳು ಮೂಡಲ ಬಾಗಿಲ ತೆರೆದು ಇರುಳ ಹೊದಿಕೆಯನೋಸರಿಸಿ ತನ್ನಿನಿಯನ ಮೈತಟ್ಟಿ ಎಬ್ಬಿಸಿದಳು ಕಣ್ಣ ತೆರೆಸಿದಳು ಗಾಳಿಯೂದಿನಕ...

ದರಿದ್ರ ನಾರಾಯಣ ಸಮಾವೇಸ ಅದ್ಯಾವ ಘಳಿಗಿನಾಗ ಗೋಡ್ರು ಮಾಡಿದ್ರೋ ಎಲ್ರಿಗೂ ಸಮಾವೇಸದ ರೋಗ ಬಡ್ಕೊಂಡು ಬಾರಿಸ್ಲಿಕತ್ತದೆ. ದಿಢೀರ್ ಅಂತ ದಲಿತರು, ಸಾಬರು, ಹಿಂದುಳಿದೋರ ಮ್ಯಾಗೆ ಎಲ್ಲಾ ರಾಜಕೀಯ ಪಕ್ಷದೋರ್ಗೂ ಪ್ರೀತಿ ಉಕ್ಕಿ ಬಾಯ್ನಾಗೆ ಬೆಲ್ಲ ಸುರಿಸ್...

ಅಲಿ ಸೂತ್ತರದಾಟಾ ಐಸುದದಿ ಅಲಾವಿ ಬಲುದಾಟಾ                         ||ಪ|| ಕಲಿಯೊಳಗ ಹೆಚ್ಚಾದಿತು ಕರ್ಮವು ಕೊಲಿಯುಕ್ಕಿ ಬರಬರಿತು ಭೂಮಿಗೆ ದುಷ್ಕಾಳದ ಮಾಟ ಐಸುರದಿ ಅಲಾವಿ ಬಲುದಾಟಾ                       ||ಅ.ಪ.|| ನೊಂದಿತು ಬಹುಮಂದಿ ಗ...

ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ! ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ, ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ. ಒಂದು ಸಣ್ಣ ಮಾತಿನಿರಿತ ತಾಳದಾಯ್ತೆ ಪ್ರೇಮ? ಜೀವವೆರಡು...

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ ಅಂಗ ಅಂಗದಲಿ ಆ ಅನಂಗನಾಡುವನು ಮಂಗನಾಟ ಉಬ್...

ವರನನ್ನು ಗೊತ್ತು ಮಾಡಿ ಮದುವೆ ಮಾಡಿದರು ಮಗಳಿಗೆ. ಪುರೋಹಿತರು ಲಗ್ನ ನಿಶ್ಚಿತವಾಗುವಾಗ ಈ ವರನಿಗೆ ೩೬ ಗುಣಗಳಲ್ಲಿ ೩೪ ಗುಣಗಳು ಉತ್ತಮವಾಗಿವೆ. ಇನ್ನು ಎರಡು ಏನು ಮಹಾ ಲೆಕ್ಕ? ಎಂದು ಮದುವೆ ಕುದುರಿಸಿದರು. ಲಗ್ನ ಸಮಾರಂಭವೆಲ್ಲಾ ಮುಗಿದ ಮೇಲೆ ಪುರೋ...

ಕರ್ಣಬಂದು ಕರ್ಬಲದಲಿ ಪಾರ್ಥಾ ವರ್ನಕಂಡು ಕದನಕ ನಿಂತ ಸು-       ||ಪ|| ವರ್ಣಪೀಠ ಮದೀನ ಶಾರದಿ ಪರ್ವ ಅಶ್ವನೇರಿದನೆಂತು             ||ಅ.ಪ.|| ಭಾಪುರೆ ಅರ್ಜುನ ತಪ್ಪಿಸಿ ಹರಿತ ವರ್ನ ಕೋಪ ತಿಳಿ ಕುರುಕ್ಷೇತ್ರದಲಿ ಭಾಪುರೆ ನಿನ್ನನು ಹುಡಕುತ ಬಂ...

ಗೋಕುಲಾಷ್ಟಮಿಯಂದು ಉಡುಪಿಯಲ್ಲಿ ಆಪಾಟಿ ಪೂಜೆ ಪುನಸ್ಕಾರ ಅಭಿಷೇಕಗಳನ್ನು ಮಾಡಿಸಿಕೊಂಡು ಹ್ಯಾಪಿಯಾಗಿರಬೇಕಾಗಿದ್ದ ಶ್ರೀಕೃಷ್ಣ ಪರಮಾತ್ಮನಂತ ಪರಮಾತ್ಮನೇ ಯಾಕೋ ಟೆನ್ಶನ್‌ನಲ್ಲಿದ್ದ. ಉಡುಪಿ ಯತಿಗಳು ಮತಿಗೆಟ್ಟವರಂತಾಡುತ್ತಾ ನನ್ನ ಮೂಲ ನೆಲೆಗೇ ಮೂರು...

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ಪುಸ್ತಕ: ಕೀಲಿಕರಣ: ಕಿಶೋರ್‍ ಚಂದ್ರ ವ್ಯಾಕರಣ ದೋಷ ತಿದ್ದುಪಡಿ:   ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ, ನಿನ್ನ ಶ್ರೀಚರಣಗಳ ಹಾದಿ ಬೆಳೆಸುವೆ ವನವ ಕನ್ನಯ್ಯ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...