ಕಾಣದೆ ನೀ ಬೊಗಳಬ್ಯಾಡ  ಕೋಣನಂಥ  ರಂಡೆ
ಜಾಣಜನರು ಕೂಡಿ ನಿಮ್ಮೋಣಿಯಲ್ಲ್ಹಾಯ್ದಿರಲು
ಕೋಣಿಬಾಗಿಲಲಿ  ನಿಂತು ಗೋಣತಿರುವುವ ಮುಂಡೆ                   ||೧||

ನೆಟ್ಟಗಿಲ್ಲ ಮೈಬಣ್ಣ ರೊಟ್ಟಿ  ಹಂಚಿನ ಕರದ
ತಟ್ಟದಲೆ ಬಿಟ್ಟು  ಮೋತಿಮ್ಯಾಲಿನ ಸೆರಗ ಜರದ
ಉಟ್ಟ ಸೀರಿ ನೀರಿಗೆಗಳು  ಕೆಳಗೆ ಬಿದ್ದಾವು ಜ್ವರದ
ಕೆಟ್ಟದೊಂದು ಕೂಸು ಬಗಲಾಗಿಟ್ಟು ಕೊಂಡು  ಮೆರೆದ
ಕಟ್ಟಗಡಕಿ  ಕೊಟ್ಟ ಗಂಡನ ಬಿಟ್ಟು   ಊರೊಳಗೊಬ್ಬ ನೆಂಟ –
ನಿಟ್ಟುಕೊಂಡು  ಎಷ್ಟು  ಪಂಟಪಟ್ಟುಕೊಳ್ಳುವಿ ?                   ||೨||

ಚಲುವನಲ್ಲ ಜೋಲುದುಟಿತೊದಲಗ  ನೀ ಬೆರೆತ
ಹಾಲವಕ್ಕಿಮಾರಿಯವಳು ನೀ ಯಾವ ದೊಡ್ಡ ಗರತೇ ?
ಕೂಲಿ ಹಂಜಿ ನೂತುಕೊಂಡು  ಶಾಲಿ ಕುಬ್ಬಸ ಮಾಡಿಕೊಂಡು
ಕಲ್ಲಾ -ಬಿಲ್ಲಿ  ಕವದಿ  ಹರಕೀ ಗುಲ್ಲಾ-ಗಂಟಿ  ನೀನಲ್ಲವೆ ?    ||೩||

*****