Home / ಕವನ / ಕವಿತೆ / ಭೋಳ್ಯಾ

ಭೋಳ್ಯಾ

ಲೇ ಮೈತೊಳದ ಬಸವಣ್ಣ
ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ,
ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ
ಅವಂಗೆ ಬೂದಿ ಬಡಿಯ
ಮಾತೆತ್ತಿದ್ರೆ ತೋರಸ್ತಾನೆ ಮಸಣಾ,
ಉರೀಬೇಡ ನೀ ಆಗ್ತೀ ಹೆಣಾ!
ಅಂತಾ ಹೆದರಸ್ತಾನೆ

ಉಣ್ಣೋರುಣ್ಲಿ ತಿನ್ನೋರ್ತಿನ್ಲಿ ಅಂದ್ರೆ
ಬರ್ತಾತ ನಿನ್ನ ಕಪಾಲ ಕೈಯಾಗೆ ನಿಮ್ಮಪ್ನಂಗೆ
ಬೆಳ್ಳಗಿದ್ದದ್ದೆಲ್ಲಾ ಹಾಲಂತೀ,
ಥಳ್ಳೆಂದದ್ದೆಲ್ಲಾ ಬೆಳ್ಳೀ ಅಂತೀ
ತುಟಿ ಮಾತ್ನ ಹೊಟ್ಯಾಗಿನ ಮಾತಂತ ನಂಬ್ತೀ
ಎಳೇಮುದ್ದಂತ ಹಾವಿನ ಮರೀನ ಮುದ್ದಿಸ್ತೀ
ಬಣ್ಣಾ ನಂಬಿ ಹೂ ಮೂಸಾಕ್ಹೋಗ್ತಿ,

ಹಾಲು ಸುಣ್ಣದ ನೀರಾಗಿ, ಬೆಳ್ಳಿ ಉರಿಯೋ ಕೊಳ್ಯಾಗಿ
ಹೂವಿನ ಕೆಳಗಿನ ಮುಳ್ಳು ಚುಚ್ಚಿ,
ಹಾವು ಉರುಲಾಗಿ ಕಚ್ಚಿದಾಗ
ಲೇ ಭೋಳ್ಯಾ ಭೋರ್ಯಾಡಿ ಅಳ್ತೀ
ಮತ್ತೆ ಮಣ್ಣು ತೂರ್ಯಾಡಿ ಶಪಿಸ್ತೀ
ಕೊನಿಗೆ ನಿಮ್ಮಪ್ಪನ ಮನಿದಾರೀ ಹಿಡಕಂಡು
ಹೊಯ್ಕೊಂತ ಹೋಗ್ತೀ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...