ಹೊಂಬಿಸಿಲು ನಾಚೀತು ನನ್ನ ಚೆನ್ನೆಯ ಕೆನ್ನೆ- ಯಲ್ಲಿ ಮಿರುಗುವ ಕಾಂತಿಗೆ, ನಕ್ಷತ್ರ ನಮಿಸೀತು ನನ್ನ ದೇವಿಯ ಕಣ್ಣು ಸುತ್ತ ಹರಡುವ ಶಾಂತಿಗೆ ನನ್ನ ಹುಡುಗಿಯ ಪ್ರೇಮಕಿಂತಲೂ ವಿಸ್ತಾರ ಯಾವುದಿದೆ ಭೂಮಿಯೇ, ಬಾನೇ? ಅವಳ ಬಿಸಿತುಟಿಯಲ್ಲಿ ಶರಣಾಗಿ ಕರಗುತ...
ಪಾಠ ೧ ಯುದ್ಧ ಬಾಂಬು ಭಯೋತ್ಪಾದನೆಗಳು ಕೇವಲ ದೊಡ್ಡದೊಡ್ಡವರಿಗಷ್ಟೇ ಅಲ್ಲ !!! ಕಂಪ್ಯೂಟರ್ ಮುಂದೆ ಕುಳಿತು ಬಾಂಬು ಹಾಕಿ ವಿಮಾನ ಹೊಡೆದುರುಳಿಸಿ ಹೆಣಗಳೆನಿಸುವ ಸಂಭ್ರಮ ಮುಗ್ಧ ಮಕ್ಕಳಿಗೂ ಕೂಡಾ ಪಾಠ ತಪ್ಪುತಿದೆ ಮೇಷ್ಟುಗಳೆಲ್ಲಿ? ಒಳನೀತಿ ೨ ಪ್ರಾಚ...
ಅಯ್ಯಪ್ಪಸಾಮಿ ಕಾಲು ಟಚ್ ಮಾಡಿದ್ದು ಓನ್ಲಿ ಪಬ್ಲಿಸಿಟಿಗಂತ ಯಾರನ್ನ ಬೇಕಾದರೂ ಟಚ್ ಮಾಡ್ತಾರೆ ಟಚ್ ಮಾಡ್ಕಂತಾರ್ ಬಿಡ್ರಿ. ಆದೇನ್ ರೋಗವೋ ಒಂದೊಂದು ದೇವಸ್ಥಾನ್ದಾಗೂ ಇಚಿತ್ರ ಪದ್ಧತಿಗಳನ್ನ ಕರ್ಮಠ ಬ್ರಾಂಬ್ರು ಮಾಡ್ಕೊಂಡು ಬಂದವ್ರೆ. ಮಂತ್ರಾಲಯ ಉಡು...
ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ ಯಾವುದು ಪ್ರಬಲ ಯಾವುದು ನಿತ್ಯಸತ್ಯ ಎಂಬುದು ನನಗಿನ್ನೂ ಅನುಮಾನ ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ ನಿಂತ ಕೆಲವು ಕಡೆ ಹಳಸಿ ನಾತವಾಗಿ ಯಾರಿಗೂ...
ವರ್ಗ: ಬಾಲ ಚಿಲುಮೆ / ನಾಟಕ ಪುಸ್ತಕ: ಅಗಿಲಿನ ಮಗಳು ಲೇಖಕ: ಹೊಯಿಸಳ ಕೀಲಿಕರಣ: ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ ಪಾತ್ರಗಳು ಅಗಿಲಿನ ಮರ:-ಉದ್ದ ಅಂಗಿ ತೊಟ್ಟು, ತಲೆ ಕೆದರಿ ನಿಂತವರು ದೊಡ್ಡವರು ಯಾರಾರಾದರೂ ಸರಿ. ಗೊಗ್ಗರ ದನಿಯಲ್ಲಿ ಮಾ...
ಒಬ್ಬಳು ತನ್ನ ಎಂಟು ಮಕ್ಕಳನ್ನು ಬಸ್ಸಿನಲ್ಲಿ ಕುಳ್ಳರಿಸಿಕೊಂಡು ಪ್ರಯಾಣ ಮಾಡಿತ್ತಿದ್ದಳು. ಮಕ್ಕಳ ಚೇಷ್ಟೆಯನ್ನು ಸಹಿಸಲು ಕಷ್ಟ ಪಡುತ್ತಿದ್ದಳು. ಯಾರೋ ಪ್ರಯಾಣಿಕರೊಬ್ಬರು `ಏನಮ್ಮಾ ತಾಯಿ, ಅರ್ಧದಷ್ಟು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಬಾರದಿತ್ತ...
ನೀ ಯಾರೋ ನಾ ಯಾರೋ ಚೂರೂ ಅರಿಯದವರು ಕಂಡ ಕ್ಷಣವೆ ಆದವೇ ಜನ್ಮಾಂತರ ಗೆಳೆಯರು? ಕ್ಷಣ ಕ್ಷಣವೂ ಆಕರ್ಷಿಸಿ ಮನಮಿಡಿಯುವುದೇಕೆ? ಕಾಣದಿರಲು ಈ ಲೋಕ ಜಡ ಎನಿಸುವುದೇಕೆ? ಧ್ಯಾನ ಸ್ಮರಣೆ ಜಪಗಳಲ್ಲು ತೂರಿ ಬರುವುದೇಕೆ? ನಿನ್ನ ನಾನು ನನ್ನ ನೀನು ಹೀಗೆ ಕಾಡಬ...
ಅದೇ, ಆ ಹೂದೋಟದಲ್ಲಿ ನಿಂತ ನಿನ್ನ ಪ್ರತಿಮೆಯ ನೋಡಿ ಒಂದು ಎರಡು ಮೂರು ನಾಲ್ಕು ಸುತ್ತು ಹೊಡೆದು ಗಕ್ಕನೆ ನಿಂತಿತೊಂದು ಮಕಮಲ್ಲಿನ ಪಕ್ಷಿ ಕನ್ನಡದ ನೀರು ಕುಡಿದ, ಕಾಳು ತಿಂದ ಪಕ್ಷಿಯೇ ಇರಬೇಕದು ’ಕುವೆಂಪು’ ಎಂದಿತು ಎನಾಶ್ಚರ್ಯ! ಕುವೆಂಪುವಿನ ಹಸಿರ...
ಹೆಂಗಾತಪ್ಪಾ ಅಂದ್ರೆ ಕೊಮಾರಸ್ವಾಮಿ ಮಂತ್ರಿಮಂಡಲದ ವಿಸ್ತರಣೆ ಮಾಡಿ ಮೊದಲೇ ಉರಿತಿದ್ದ ಬೆಂಕಿಗೆ ತುಪ್ಪ ಹಾಕ್ದ ಅನ್ನಂಗಾಗೇತ್ ನೋಡ್ರಿ. ರೇವಣ್ಣನ್ನ ಮಂತ್ರಿ ಮಾಡಬೇಕಂತ ದೊಡ್ಡಗೋಡ್ರು ಯಾವಾಗ ಕಚ್ಚೆ ಕಟ್ಟಿಕ್ಯಂಡು ರಚ್ಚೆ ಹಿಡಿದ್ರೋ ತಡೆಯೋ ಗಂಡಾರ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...





