ಪಾ

ಯುದ್ಧ ಬಾಂಬು ಭಯೋತ್ಪಾದನೆಗಳು
ಕೇವಲ ದೊಡ್ಡದೊಡ್ಡವರಿಗಷ್ಟೇ ಅಲ್ಲ !!!
ಕಂಪ್ಯೂಟರ್ ಮುಂದೆ ಕುಳಿತು
ಬಾಂಬು ಹಾಕಿ ವಿಮಾನ ಹೊಡೆದುರುಳಿಸಿ
ಹೆಣಗಳೆನಿಸುವ ಸಂಭ್ರಮ
ಮುಗ್ಧ ಮಕ್ಕಳಿಗೂ ಕೂಡಾ
ಪಾಠ ತಪ್ಪುತಿದೆ ಮೇಷ್ಟುಗಳೆಲ್ಲಿ?

ಒಳನೀತಿ

ಪ್ರಾಚ್ಯ ಯುದ್ಧ ಭೂಮಿ
ಜೀವಿಗಳ ಅಂಗಾಂಗಗಳೆಲ್ಲ ಛಿದ್ದ ಛಿದ್ರ
ಸದಾ ಹೆಸರು ಸಂಶೋಧಕ
ಅಂಗಾಂಗ ಜೋಡನೆಗೆ ಅಮೆರಿಕ
ಒಂದೆಡೆ ಕತ್ತರಿಸುವುದು
ಮತ್ತೊಂದೆಡೆ ತ್ಯಾಪಿ ಹಚ್ಚುತ್ತಲೇ ಇರುವುದು

ವರ್ತಮಾನ

ಸದಾ ವರ್ತಮಾನದಲ್ಲಿಯೇ
ಇರಬೇಕೆಂದರೆ ನಾವುಗಳೆಲ್ಲ…..
ಒಂದಷ್ಟು ಬೊಗಸೆ ತುಂಬಿದ ಪ್ರೀತಿ
ಹಂಚಿಕೊಂಡರಾಯ್ತು
*****
ಪುಸ್ತಕ: ಇರುವಿಕೆ

ಲತಾ ಗುತ್ತಿ
Latest posts by ಲತಾ ಗುತ್ತಿ (see all)