ಅಕ್ಕಿ ಆರಿಸುವಾಗ
ಚಿಕ್ಕದೊಂದು ಕನಸು
ಬೆಳ್ಳಿ ಚುಕ್ಕಿ ಹಕ್ಕಿ ಹಾಗೆ
ಬಾನು ತಾನು ತೂಗಿ ಹಾಡೋ ಮನಸು ||

ಬೆಳ್ಳಿ ಮೋಡ ಚಿತ್ತಾರ ಮಿಂಚಲ್ಲಿ
ಕಪ್ಪು ಹರಳು ಕರಗಿ ಆಡುವ ಸಂಚು
ಅಕ್ಕಿ ಚುಕ್ಕಿ ಹಕ್ಕಿ ಮನಸಿನಾಗೆ
ಅಂದ ಚೆಂದ ತುಂಬಿದ ಸೊಗಸು ||

ಚಿನ್ನದ ರನ್ನದ ತೊಟ್ಟಿಲಲ್ಲಿ
ಬಣ್ಣ ಬಣ್ಣದ ಹೂವು ಚೆಲ್ಲಿ
ನಲ್ಲ ನಲ್ಲೆ ಮೆಲ್ಲ ಮೆಲ್ಲನೆ ಕೂಡಿ
ನಡೆವ ಹಂಸ ಸಿಂಗಾರ ಮೆರಗು ||

ಮೂಡುವ ಚಂದಿರ ಬೆಳ್ಳನೆ
ಸುಂದರ ಆಡಿಪಾಡಿ ನಲಿವ
ಕಂದನ ಲಾಲಿ ಮಂದಾರ ಬೀರಿ
ಸಖ ತಾರೆಯರ ನರ್ತನ ಸೊಬಗು ||

ಮುಂಜಾವ ಸಿಂಚನ ಬಾಗಿನ
ಭಾವ ಸಿರಿಯಲಿ ಮನವು
ಹಕ್ಕಿ ಚುಕ್ಕಿ ಅಕ್ಕಿ ಆರಿಸುವಾಗ
ಬೆಳ್ಳಿ ತಾರೆ ನಾಚಿದ ಹರಳ ನೆನಪು ||
*****

Latest posts by ಹಂಸಾ ಆರ್‍ (see all)