
ಬಹೋಧವಾದೀತೆ ಆನಂದ ಬಹು ಚಂದಾ ಬಹೋಧವಾದೀತೆ ಆನಂದಾ ಸಾದರಜ್ಞಾನ ಚತುಷ್ಟಿಯ ಕೊನೆಯೊಳು ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ ||೧|| ವೀರಯೋಗಿವರ ಪಾರಪರಾತ್ಪರ ಮೀರಿದ ದಾರಿಯ ತೋರಿಸುವುದು ಬಹು ಚಂದಾ ಶಿಶುನಾಳದೀಶನ ಗೋವಿಂದಕುಮಾರಗೆ ಬಹು ಚಂದಾ ||೨|| ...
ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ ||ಪ|| ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ ಮಾಯಾ ನೂಕಿ ಬ್ರಹ್ಮಗುರುಪಾದಾಂಬುಜ ಸೋಂಕಿ ಸೌಖ್...
ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು; ಪರನಾದದೊಳಗಿದ್ದ ಮೇಲೆ ಮರುಳೆ ಬೋದವಾದಿಕರು ಬಹುತರದಿ ಬಗಳುವ ಜನರಪ- ವಾದಕಂಜುವದ್ಯಾಕಲೇ ಮರುಳೆ ||೧|| ಗುರುಕರುಣ ತೀರ್ಥ ಪ್ರಸಾದ ತುಂಬಿದ ಪಾತ್ರೆ ಕರಮುಟ್ಟಿ ಸವಿದು ಸುಖದಿ ಮೆರೆದು...
ಸರಿಗಾಣೆನು ಧರಣಿಯೊಳಗಮ್ಮ ಕರುಣೆ ಎಲ್ಲಮ್ಮ ||ಪ|| ಏನು ಹೇಳಲಿ ನಿನ್ನ ಕೌತುಕವ ನೀನಾದಿಯಲ್ಲಿ ತುಂಬಿ ತುಳುಕಿದಿ ಏಕೆಂಬ ಭಾವ ||ಅ.ಪ.|| ಪ್ರಥಮ ಕೃತಯುಗದಲ್ಲಿ ಪರಶಿವಗೆ ಸತಿಯಾಗಿ ನೀನು ನಿತ್ಯ ಮೆರೆದೆ ರಜತಗಿರಿಯೊಳಗೆ ಕೃತಕ ಮದುಕೈಟಭರ ಪ್ರಾಣ ಹತವ ...
ಎಲ್ಲೀ ಕಾಣೆ ಎಲ್ಲೀ ಕಾಣೆ ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ ||ಪ|| ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ ||ಅ.ಪ.|| ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ ಬೇವನುಡಿಸಿ ಮೋಜ ನೋಡಿದಿ ತಾಳ...
ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ ನೋಡಿಲಿಬೇಕು ಅಲ್ಲಮಪ್ರಭುವಿನ ಮೇಲಡಿ ದಟ್ಟಿನ ಚಳ್ಳುಗುರ್ಕೊಳ್ಳದ ಕಲ್ಲೊಳು ಜನಿಸಿ ಬಲು ಚಲುವೆ ಎನಿಸಿ ಕಲಿಯುಗದೊಳು ಮರೆದ ಸಲ್ಲಲಿತದಿ ಶರ್ವಾಣಿಯ ಜಾತ್ರೆಗೆ ||೧|| ಏಳುಕೊಳ್ಳ ಸರೋವರ ಒಂದು ಅಲ್ಲಿಳಿದಳೋ ಬಂದು...
ಪಾಲಿಸಯ್ಯಾ ಪಾರ್ವತಿಪತಿ ತ್ರಿಲೋಕದೋಳ್ ವಿರತಿ ||ಪ|| ಗಂಗಾಧರನ ಸ್ತುತಿ ಧ್ಯಾನಿಸುವ ಆತ್ಮಾಭಿರತಿ ಕರುಣಿ ಕೈಲಾಸಕಧಿಪತಿ ||೧|| ಗಿರಿಜಾರಮಣನ ಸ್ತುತಿ ಭಜಿಸಿ ಶಿವಯೋಗ ಸ್ಥಿತಿ ಸಿದ್ಧಶಿವಯೋಗಿ ಸುಮತಿ ||೨|| ಬೇಗನೆ ಹೊಂದಿಸು ಸದ್ಗತಿ ಶಿಶುನಾಳಧೀಶನ...
ಏನಿದು ಪೇಳು ಆತ್ಮಗೆ ಪರಮಾತ್ಮಗೆ ||ಪ|| ನಿನ್ನ ನಿಜವನು ತಿಳಿಯದೆ ಭವದೊಳು ಮುಳು ಮುಳುಗಿ ಶುಭ ಉಳಿಯದೆ ನೀ ||೧|| ಪರಮಸಾಗರ ಜೀವನ ಧರೆಗಾಳ್ದ ಈ ಘನ ಅರಿಯದವಗೆ ಬರೆ ಉಸುರಿದರೇನಿದು ಸುರ ಅಜ ಭವ ರುದ್ರಾದಿಗಳಿಗೆ ನೀ ||೨|| ಕುವಲಯರೂಪನಾತನು ಶಿವ ಪ್...
ಪಾಪ ರಹಿತ ಪರಮಾತ್ಮ ಸರ್ವೋತ್ತಮ ತಾಪಸಂಹರ ಪರಾತ್ಪರಾ ||ಪ|| ನೋಡಿ ಏನು ಭಜಿಸಲಿ ನಾನು ಕಾಡಿದರೆ ಸಿಗುವದು ಏನು ರೂಢಿಗೈವನೇ ಕಾಲಕೂಟವಿಷ ಕೇಡಿಗ ಶೇಷಾಭರಣ ||ಅ.ಪ.|| ಧನಿಕನೆಂದು ನಾನನ್ನುವೆನೆ ಮನಕೆ ಸಂಶಯವು ಬರುತಲಿದೆ ತಿರಿದುಣ್ಣುತ ನೀ ತಿರುಗುತಿ...
ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ ಮಾನವ ಜನ್ಮಕೆ ಬಂದು ಏನೇನು ತಿಳಿಯಲಿಲ್ಲೋ ಶಂಭೋಲಿಂಗಾ ||ಪ|| ಹಾವು ಹರಿದಾಡಿತು ಚೇಳು ಕುಣಿದಾಡಿತು ಶಂಭೋಲಿಂಗಾ ಹಾವು ಚೇಳಿನ ನುಂಗಿ ಕೋಳಿ ಕೂಗುವದು ಶಂಭೋಲಿಂಗಾ ||೧|| ಪಕ್ಕವಿಲ್ಲದ ಪಕ್ಷಿಗಗನದೊಳಾಡಿತು ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...













