ಹುಟ್ಟಿನ ಕಾರಣ ತಿಳಿಯದೇ
ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ
ಅನಂತದಲ್ಲಿ ವಿಲೀನವಾಗುವುದಷ್ಟೇ
ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ
ನೆನಪು – ಮೂಲಭೂತವಾಗಿ ಇರುವುದು
ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು
ಅನಂತ ದಿಕ್ಕುಗಳು.  ಹೌದು, ಮೂಡಣ,
ಪಡುವಣ ಎಲ್ಲಾ ಭ್ರಮೆಗಳು.

ಮೂಡಣ, ಪಡುವಣ
ಅರಿಯದಿರುವುದು ಸತ್ಯಕ್ಕೆ ಹೆಚ್ಚು
ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ
ಎಲ್ಲಿಂದ ಬರುತ್ತಾನೆಂದು ಯಾರಿಗೂ
ಗೊತ್ತಿಲ್ಲ.  ಸಾಕಾರವೇ ನಿರಾಕಾರ,
ನಿರಾಕಾರವೇ ಸಾಕಾರ-ಬುದ್ಧನ
ಬೋಧನೆ ಎಲ್ಲಾ ಅಂಶಗಳನ್ನೂ
ಒಳಗೊಂಡಿದೆ.  ಸ್ಥಾವರ, ಜಂಗಮ
ಎಲ್ಲವೂ ಒಂದೇ.  ಆದರೆ ಎಲ್ಲವೂ
ಶೂನ್ಯ.

ಮನುಷ್ಯನು ಜೀವಿಯೂ
ಅಲ್ಲ.  ನಿರ್ಜೀವಿಯೂ ಅಲ್ಲ.  ಆತ
ಜನಿಸಿಯೂ ಇಲ್ಲ.  ಗತಿಸಿಯೂ ಇಲ್ಲ.  ಆ
ದಿನ ಭತ್ತದ ಕುಯಿಲು ಮಾಡುತ್ತಿದ್ದಾಗ
ಯುವಜನರಿಗೆ ಹೇಳಿದೆ – ವಸಂತದಲ್ಲಿ
ನಾಟಿ ಮಾಡಿದಾಗ ಭತ್ತ
ಮೊಳಕೆಯೊಡೆದು ಜನ್ಮ ಪಡೆಯಿತು.
ಈಗ ಹಣ್ಣಾಗಿದೆ.  ಸತ್ತಂತೆ ಕಾಣುತ್ತಿದೆ.  ಈ
ಹುಟ್ಟುಸಾವಿನ ಆಟ ನಿರಂತರ….

*****
(ಮೂಲ- ಮಸನೊಬ ಫುಕವೊಕ)

 

Latest posts by ಬಂದಗದ್ದೆ ರಾಧಾಕೃಷ್ಣ (see all)