ಒರೆಸಿಹೋಗುತ್ತವೆ

ಉಸಿರು ತುಂಬಿದ
ಕ್ಷಣದಿಂದ
ಯಾಚನೆಗೊಡ್ಡಿದ
ಅನಾಥ ಬೊಗಸೆ
ಬಿಕ್ಕಳಿಸುತ್ತಲೇ ಇದೆ

ಕೊಚ್ಚಿ ಬಂದ ಮಹಾಪೂರ
ತುಂಬಿಟ್ಟುಕೊಳಲಾಗದೇ
ಅದಕ್ಕೆ
ಬರಿದೇ ಮುಳುಗಿ
ಮೀಯುವ ಸಂಭ್ರಮ

ಉಕ್ಕುವ ನೀರಿನಲ್ಲೂ
ಕರಗಿಸುವ ಆರ್ದ್ರತೆ!
ಆ ಸೆಳೆತಕ್ಕೆ
ಪುಟ್ಟ ಬೊಗಸೆಯೇ ಕರಗಿ
ಉಕ್ಕೇರುವ ಪ್ರವಾಹದೊಡಲು ಸೇರಿ
ಅದರ ಪ್ರತಿ
ನೀರ ಹನಿಯ ಮೇಲೂ
ತನ್ನ ಯಾತನೆಯ
ಕಣ್ಣ ಹನಿಗಳ
ಸಹಿಯನೂರುತ್ತದೆ.

ಭೋರ್ಗರೆದ ಅಗಾಧ ನೀರು
ಮಗುವಿನಂತೆ ತಣ್ಣಗೆ
ಮಲಗಿ ನಿದ್ರಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪದ ಜನಪದ
Next post ಹೊಸ ಬಾಳು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…