ಸತ್ಯ ಬೇಕೆಂದು ಜಗವೆಲ್ಲಾ ಸುತ್ತಿದೆ
ನಡುವೆ ಜನರಿಲ್ಲದೆ ಮನದಲ್ಲೇ ಸತ್ತಿದೆ
ನ್ಯಾಯ ಬೇಕೆಂದು ಮನೆ ಮೆನಯ ತಟ್ಟಿದೆ
ಹೊರ ಬರ ಬಿಡದ ಜನ ಬಾಗಿಲೆಲ್ಲ ಮುಚ್ಚಿದೆ
ದೇವರು ಬೇಕೆಂದು ಬೀದಿ ಬೀದಿ ಅಲೆದೆ
ಎಲ್ಲೆಲ್ಲೂ ಜನರೆ, ಹುಸಿ ಸುತ್ತಾಡಿ ಬರಿದೆ
ನೀತಿ ಬೇಕೆಂದು ಮನ ಮನ ಬೇಡಿದೆ ಬಿಕ್ಷೆ
ಕೊಡದ ಜನರಿಂದ ಸಿಕ್ಕಿತಯ್ಯೋ ತಕ್ಕ ಶಿಕ್ಷೆ
ಪ್ರೀತಿ ಬೇಕೆಂದು ನಿನ್ನನರಸಿ ಬಂದೆನಲ್ಲೆ
ನೀ ಮನಕೆ ಸವಿ ಗಂಗೆ ನವ ಚೇತನವಲ್ಲೆ
*****


















