ಮಾದಾಯಿ

ಹಸಿರು ಸೀರೆಯುಟ್ಟು….
ಭೂಮಡಿಲ… ಮುತ್ತಿಟ್ಟು
ಜಲ-ತಾರೆಗಳ ಅಪ್ಪಿ
ಹರಿದ್ವರ್ಣದ ಆಲಿಂಗನ
ನಿತ್ಯ ಕಾನನಗೋಡೆ ಮಾದಾಯಿ ಮಡಿಲು

ಏರು ತಗ್ಗುಗಳ…
ಬೆಟ್ಟಗಳ ನಡುವಲಿ
ಜುಳು… ಜುಳು… ಸುಮಧುರ
ನಿಸರ್ಗ ನಿನಾದ ಸಂಗೀತ ಚೆಲ್ಲುತ
ಬಳಲಿದ ದಾಹಕೆ ತಂಪೆರೆಯುತಿಹದು

ಗಿರಿ-ಕಾನನಗಳ…
ಜೀವನಾಡಿಯಾಗಿ
ಗಿಲ್ಲ… ಗಿಲ್ಲ ಗೆಜ್ಜೆ ನಾದದಲಿ
ಹೆಜ್ಜೆಯಲಿ ಆಡುತ
ಹಾಡುತ ಹರಿಸುತಿಹಳು
ಮಹಾತಾಯಿ… ಮಾದಾಯಿ

ಗಡಿ-ನಾಡು… ಭೇದವೆಣಿಸದೆ
ದುಡಿವ ಕೈಗಳಿಗೆ ಜೀವಧಾರೆಯಾಗಿ
ಬಹುಜನರ ಒಡಲು ತುಂಬಿಹಳು

ಮಲಪ್ರಭೆಯ ವಾತ್ಸಲ್ಯದಡಿ…
ನೆರಳಾಗಿ… ಎಲ್ಲೆ ಮೀರಿ…
ಅಪ್ಪುಗೆಯಲಿ ಐಕ್ಯವಾಗಿಹಳು

ವೈವಿಧ್ಯದ ಭಾಷೆ-ವೇಷಗಳ
ಬದುಕು-ಕನಸು ಬೇರಾದರೂ
ಒಡ ಹುಟ್ಟಿದವರೆನ್ನುತ ಸಾರುತಲಿ

ಜಗಕ್ಕೆ ಸಾಕ್ಷಿಯಾಗಿಹಳು ಮಾದಾಯಿ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಷ್ಯ ಬರೆಯುವುದೆಂತು
Next post ಪ್ರೀತಿಯ ತಾಜಮಹಲ್

ಸಣ್ಣ ಕತೆ

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…