ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ್ಟೇ ಏನು? ಎಲ್ಲಿಂದಲೋ ಬರುವುದು, ಬಂದ ಕೆಲವು ವರುಷ ಅಸಹಾಯವಾ...

ನಿನಗು ನನಗು ನೆಲ-ಮುಗಿಲಿನಂತರ ವೆಂದನಲ್ಲನ ಮೊಗದಲಿ….. ಮೊಗವಿಟ್ಟು ನುಡಿದಳು ಇನಿದು ದನಿಯಲಿ.. ನಿಜದ ಬದುಕಿದೆ ನೆಲದಲಿ ಭರದಿ ಸುರಿವಾ ಮಳೆಯಬ್ಬರ ಸುವ ಕೋಪದುರಿಯ ನೇಸರ….. ಗೊತ್ತು-ಗುರಿಯು ಇಲ್ಲದಲೆಯೋ….. ಬೀಸುಗಾಳಿಯ ಬರ್ಬ...

ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ ನಾ ಸತ್ತು ನೀನಾಗುವದಿನ್ನೆಂದಿಗೆ ||ಪ|| ನಾ ಬಂದು ನಾನಿನ್ನು ನಾನೇನು ಮಾಡಿದ್ದೆ ನಾ ಸುಳ್ಳು ನೀನಾಗುವದಿನ್ನೆಂದಿಗೆ ||ಅ.ಪ|| ನಾ ಬ್ರಹ್ಮ ನಾ ವಿಷ್ಣು ನಾ ರುದ್ರ ನೆಂಬಂತೆ ನಾನಾದಳಿಸುವದಿನ್ನೆಂದಿಗೆ ನಾ...

ನೀರೆಂಬುದು ಬಯಸಿದಾಗಲೆಲ್ಲ ಸಿಗುವ ಮಾಯಾ ವಸ್ತುವಲ್ಲ || ಬೇಕಾಬಿಟ್ಟಿ ಬಳಸಿದರೆ ಕುಡಿಯಲು ನೀರಿರದೆ ಮಣ್ಣಾಗಿ ಹೋಗುವೆ ಅಣ್ಣಾ || ನೀನು ಮಣ್ಣಾಗಿ ಹೋಗುವೆ ಅಣ್ಣಾ || ಭೂ ತಾಯಿಯ ಕೊರೆದು ಜಲದ ಕಣ್ಣ ಸೆಳೆದು ಒಣಭೂಮಿ ನೆನದರೇನಣ್ಣಾ || ಕೇಳು ಒಣಭೂಮಿ...

ನಿಜವೇ ಇದು ನಿಜವೇ ನಿಜವಲ್ಲಾ ಅಜ ಹರಿ ಸುರರಿಗಲ್ಲದ ಮಾತು ||ಪ|| ನರಜನ್ಮ ಸ್ಥಿರವೆಂದು ಧರೆಗೆ ಉದಿಸಿಬಂದು ಸಿರಿಯು ಸಂಪತ್ತು ಸೌಭಾಗ್ಯ ಲೋಲ್ಯಾಡುವದು ||೧|| ಅಂಗಲಿಂಗದ ಸಮರಸನರಿಯದೆ ಮಂಗನ ತೆರದಲ್ಲಿ ಪೂಜಿಸುವದು ||೨|| ವಸುಧಿಯೊಳು ಶಿಶುನಾಳಧೀಶನ...

ಬಿದಿರ ಮೆಳೆಗಳು ಹೂಬಿಟ್ಟು ಬಿದಿರಕ್ಕಿ ರಾಜಂದರಿಯನ್ನು ಕೊಡಲು ಶುರುಮಾಡಿದ್ದು ಮತ್ತು ಕಪಿಲಳ್ಳಿಯ ಇತಿಹಾಸದ ಪುಟಗಳಲ್ಲಿ ಏಕಮೇವಾದ್ವಿತೀಯನಾದ ಒಂಟಿ ಬ್ಯಾರಿಯ ಹೆಸರು ದಾಖಲಾದದ್ದು ಒಂದೇ ವರ್ಷದ ಅಪೂರ್ವ ಯೋಗಾಯೋಗವೆಂದು ಕಪಿಲಳ್ಳಿಯ ಜನರು ಹೇಳುತ್ತಿ...

ಸಾವಿರ ಪದ ಸರದಾರ ಸಾವು ಮುತ್ತಿತೇ ಧೀರಾ ಮೂಢ ಸಾವು.. ನಿನ್ನ ಅರಿಯದೆ.. ಅಟ್ಟಹಾಸದಿ ಒಯ್ಯುತಿಹನೆಂಬ ಭ್ರಮೆಯಲಿ ಒಪ್ಪಿಸುತಿಹದು ಅಹವಾಲ ಯಮನಿಗೆ ಇನ್ನ… ನಗುವಿನ ಚೆಲುವು ಇಂಪಾದ ಕೋಗಿಲೆ ಧ್ವನಿಯು ಜೀವ ತುಂಬಿ ಜನ್ಮ ನೀಡುತಿಹವು ಸಾವಿರ ಪದಗಳ...

ಬವಣೆಯ ಬದುಕು ಭರವಸೆಯಲಿ ಸವೆಸುತ್ತಾ ದುಡಿಮೆಯಲಿ ಕಾಲ ಕಳೆಯುತ್ತಾ ತಿನ್ನುವ ಅನ್ನವ ತೊರೆದು ಹೊರಟೆಯೇನಣ್ಣ ಆತ್ಮಹತ್ಯೆಗೆ ಆತುರಬೇಡ… ಅವಸರಬೇಡ ನಿನ್ನ ಒಡಲ ಕುಡಿಗಳಿಹರು ಆತಂಕಬೇಡ ನಾವಿರುವೆವು ನಿಮಗಾಗಿ ಹಸಿವೆ.. ಹರಿ ಹಾಯ್ದರೂ… ನಾ...

ಮೊದಲ ಮಾತನು ನುಡಿದವ ತಾ ಜಗಕೆ ಮೊದಲ ಕಬ್ಬಿಗ ಇಂಪು ಸ್ವರದಲಿ ಬೆಲ್ವಸದವ ತಾ ವಿಶ್ವ ವೈಣಿಕ ಕಾಯಕ ಮಾತ-ಮಾತಲಿ ಕಟ್ಟಿದ ಮಾಲೆಯು ಬಾನು-ಬುವಿಯ ಲೀಲೆಗೆ ಶೃತಿ-ಲಯ-ಸ್ವರದ ರಾಗ ಗೀತೆಯು ಅನುರಾಗ ಬೆರೆತಾ ಬಾಳಿಗೆ ಹಲವು ಭಾಷೆಗಳೊಲವ ದನಿಯಲಿ ಭಾವ ಸರಣಿಯ ...

ಬೀಳಬಾರದೋ ಕೆಸರಿನೊಳು ಜಾರಿ ಬೀಳಬಾರದೋ ಕೆಸರಿನೊಳು ಜಾರಿ ||ಪ|| ಬ್ರಹ್ಮನು ಬಿದ್ದಾ ರಾಮನು ಗೆದ್ದಾ ರುದ್ರ ಒದ್ದಾಡಿದ್ದ ಅದು ತಿಳಿದು ||೧|| ಸುರರೆಲ್ಲಾರು ಅರಲಿಗೆ ಮರುಳರು ಸ್ಥಿರವಲ್ಲ ಹರಿಹರರುಳಿದರು ||೨|| ಕಸ ಮಳಿಗಾಲದಿ ಶಿಶುನಾಳಗ್ರಾಮದಿ ಪ...

ನಭೋ… ಮಂಡಲದಿ.. ಮಿನುಗು-ತಾರೆಗಳನೇಕ.. ಸೂರ್ಯನ ಪ್ರಕಾಶ ಮೀರುತಲಿ ಕತ್ತಲೆಯೊಂದಿಗ್ಗೆ – ಹೋರಾಡುತ ಬೆಳಗು… ಮುನ್ನ ಕರಗುವವು ರಾಷ್ಟ್ರ… ಮಂಡಲದಿ… ಮಿಂಚಿದ ದೇಶಪ್ರೇಮಿಗಳನೇಕ ನೇತಾಜಿ, ಭಗತ್, ಚಂದ್ರಶೇಖರ ರಾಯಣ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....