ಅಂಬಾಗಾರುತಿಯನ್ನು ರಂಬೇರು ಬೆಳಗಿರೆ

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ
ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||

ಕುಂಬಕುಚ ಜಗದಂಬೆ ನಿನ್ನ ಪಾದ
ನಂಬಿಕೊಂಡೆನು ನರಶರೀರದಿ
ಅಂಬುಕೇಶನ ರಾಣಿ ಶರಣರ
ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||

ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು
ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ
ಬ್ರಷ್ಟಮಹಿಷನ ಹೊಟ್ಟೆ ಬಗೆದು
ಬೆಟ್ಟ ಕೊಳ್ಳಕ ಇಳಿದ ರೇಣುಕಾ
ಸೃಷ್ಟಿಯೊಳು ಪಟ್ಟದ ಬ್ರಹ್ಮನ
ಶಿರವನ್ಹರಿಸಿದ ಪರಮಪಾರ್ವತಿಗೆ || ೦ ||

ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು
ರುಂಡಮಾಲೆಯ ಧರಿಸಿದ ಚಾಮುಂಡಿಗೆ
ಮಂಡಲದಿ ಮೆರೆವಂಥ ಭಂಡರ
ತುಂಡುಮಾಡಿದ ಅಖಂಡ ದೇವತೆ
ಕುಂತಳೇ ಶಿಶುನಾಳಧೀಶನ
ಕಂಡೆ ನಿನ್ನಯ ಪಾದನೇತ್ರದಿ || ೨ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ
Next post ಪಾಪದ ಮುದುಕ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…