ಮಂಗಲಂ ಮಹದೇವಿಗಾರುತಿ ಎತ್ತಿರೇ || ಪ ||

ಪಂಚ ಆರುತಿ ಪಿಡಿದು ಪ್ರಣಮವ ನುಡಿದು
ಮುಂಚೆ ಮಹೇಶ ಜಪಸಾರ ಜಯತು ಜಗನ್ನಾಥಗಾರುತಿ ಎತ್ತಿರೇ || ೧ ||

ಅಷ್ಟದಳಗಳೊಳು ಮುಟ್ಟಿಸಿಟ್ಟಂಥ ಜ್ಯೋತಿ
ನಿಷ್ಠೆ ತೈಲವ ತಂದು ನೀರ್‌ಜಲದಿ ನಿರಾಲಂಬಗಾರುತಿ ಎತ್ತಿರೇ || ೨ ||

ಸದಾವ ಕಾಲದಲಿ ಸದ್ಭಕ್ತಿಯಲಿ
ಸದರ ಸದ್ದುರು ಶಿಶುನಾಳಧೀಶನ ಪಾದಕೆರಗಿ ಆರುತಿ ಎತ್ತಿರೇ || ೩ ||
*****