ಪಾಪಿಯ ಪಾಡು – ೫

ಪಾಪಿಯ ಪಾಡು – ೫

ಜೀನ್ ವಾಲ್ಜೀನನು ತನ್ನ ಊರಿಗೆ ಬಂದಕೂಡಲೇ ನೆಟ್ಟನೆ ಫಾಂಟೈನಳು ಮರಣಾವಸ್ಥೆಯಲ್ಲಿ ಮಲಗಿದ್ದ ಕೊಠಡಿಗೆ ಹೋದನು. ಜೇವರ್ಟನೂ ಹಿಂಬಾಲಿಸಿ ಬಂದಿದ್ದನು ; ಅವನನ್ನು ದಸ್ತಗಿರಿ ಮಾಡಿ ದನು, ಜೀನ್ ವಾಲ್ಜೀನನು, ತಾನು ಕೋಸೆಟ್ಟಳನ್ನು ಕರೆತರು ವುದಕ್ಕಾಗಿ ಹೋಗಿರುವುದಕ್ಕೂ ಮತ್ತು ತನ್ನ ಇತರ ಆಡಳಿತ ಗಳನು, ಕ್ರಮ ಪಡಿಸಿಕೊಳುವದಕ್ಕೂ ಸಹ ಮೂರು ದಿನಗಳ ಅವಧಿಯನ್ನು ಕೊಡಬೇಕೆಂದು ಜೇವರ್ಟನನ್ನು ಬಹಳವಾಗಿ ಬೇಡಿ ಕೊಂಡನು. ಆದರೆ ಜೇವರ್ಟನು ಮಹಾ ಕಠಿಣನಾಗಿ, ಆಗು ವುದೇ ಇಲ್ಲವೆಂದು ತಿರಸ್ಕರಿಸಿದನು. ಇವರಿಬ್ಬರಿಗೂ ನಡೆಯು ತಿದ್ದ ಈ ಚರ್ಚೆಯಿಂದ ಎದೆಯೊಡೆದು ಫಾಲಟೈನಳು ಇವರೆದು ರಲ್ಲಿಯೇ ಪ್ರಾಣವನ್ನು ಬಿಟ್ಟಳು. ಜೇವರ್ಟನು ಜೇನ್ ವಾಲ್ಜೀನ ನನ್ನು ನೆಟ್ಟಗೆ ಸೆರೆಮನೆಗೆ ಕರೆದುಕೊಂಡು ಹೋದನು.

ಜೀನ್ ವಾಲ್ಜೀನನಿಗೆ ತಾನು ಆವಶ್ಯಕವಾಗಿ ಗಮನಿಸ ಬೇಕಾಗಿದ್ದ ಕೆಲವು ವಿಷಯಗಳಿದ್ದುವು. ಹೇಗೊ ಸೆರೆಮನೆಯಿಂದ ತಪ್ಪಿಸಿಕೊಂಡು ಬಂದನು. ಅದೇ ದಿನ ಸಾಯಂಕಾಲ, ಅವನ ಮನೆಯ ಬಾಗಿಲು ಕಾಯುವ ಮುದುಕಿಯು, ಅವನು ಬಾಗಿಲಿಗೆ ಬಂದುದನ್ನು ಕಂಡು ಪರಮಾಶ್ಚರ್ಯಪಟ್ಟಳು.

ಅವಳು ಆಶ್ಚರ್ಯ ಪಟ್ಟುದನ್ನು ನೋಡಿ, ಆಗ ಅವನು, ‘ ನಾನು ಸೆರೆಮನೆಯ ಕಿಟಿಕಿಯ ಕಂಬಿಯೊಂದನ್ನು ಮುರಿದು, ಅದರೊಳಗಿಂದ ಮಾಳಿಗೆಯ ಮೇಲಕ್ಕೆ ಒಂದು, ಅಲ್ಲಿಂದ ಕೆಳಕ್ಕೆ ಧುಮ್ಮಿಕ್ಕಿ, ತಪ್ಪಿಸಿಕೊಂಡು ಓಡಿಬಂದೆನು,’ ಎಂದು ತನ್ನ ವಿಷಯ ವನ್ನು ವಿವರಿಸಿ ಹೇಳಿ, ‘ಈಗ ನಾನು ನನ್ನ ಕೊಠಡಿಗೆ ಹೋಗು ವೆನು. ಸಿಸ್ಟರ್ ಸಿಂಪ್ಲಿಸಳನ್ನು ನಾನು ನೋಡಬೇಕಾಗಿದೆ. ಆಕೆಯನ್ನು ಕರೆದುಕೊಂಡು ಬಾ ಹೋಗು,’ ಎಂದು ಹೇಳಿಕಳು ಹಿಸಿದನು. ಮುದುಕಿಯ ಅದರಂತೆ ಬೇಗನೆ ಹೋದಳು.

ಅವನು ತನ್ನ ಕೊಠಡಿಗೆ ಹೋಗಿ, ಉಡುಪುಗಳನ್ನಿಟ್ಟಿದ್ದ ಕಪಾಟದಿಂದ ಒಂದು ಅಂಗಿಯನ್ನು ತೆಗೆದು, ಅದನ್ನು ತುಂಡು ತುಂಡಾಗಿ ಹರಿದು, ಅದರಲ್ಲಿ ಬೆಳ್ಳಿಯ ಮೇಣದ ಬತ್ತಿಯನ್ನಿಡುವ ಕೊಳವೆಯನ್ನು ಸುತ್ತಿ ಕಟ್ಟಿದನು. ಇಷ್ಟಾದರೂ ಇವನಲ್ಲಿ ಆತುರವಾಗಲಿ ಕಾತರವಾಗಲಿ ಇರಲಿಲ್ಲ.

ಎರಡಾವೃತ್ತಿ ಮೆಲ್ಲನೆ ಬಾಗಿಲನ್ನು ತಟ್ಟಿದ ಶಬ್ದವು ಕೇಳಿ ಒಂತು. ಅವನು, ‘ ಒಳಗೆ ಬನ್ನಿ,’ ಎಂದನು.

ಸಿಸ್ಟರ್ ಸಿಂಪ್ಲಿಸಳು ಒಳಗೆ ಬಂದಳು.

ಮಾತನಾಡುವುದಕ್ಕೆ ಪ್ರಯತ್ನಿಸಿದರೂ, ಒಂದೆರಡು ಅರ್ಧ ವಿಲ್ಲದ ಮಾತುಗಳನ್ನು ಆಕೆ, ತಬ್ಬಿಬ್ಬಾಗಿ, ಆಡುವುದೇ ಕಷ್ಟವಾ ಯಿತು. ಕಡೆಗೆ ಬಹು ಪ್ರಯತ್ನದಿಂದ, ‘ ಗ್ರಾಮಾಧಿಕಾರಿ ಮಾನ್ ಸಿಯುರವರು ಇನ್ನೊಂದಾವೃತ್ತಿ ಈ ನಿರ್ಭಾಗ್ಯಳ ಮನೆಗೆ ಬಂದು ತಮ್ಮ ಕಡೆಯ ದರ್ಶನವನ್ನು ಕೊಡಲಾಗುವುದಿಲ್ಲವೇ ?’ ಎಂದಳು.

ಅದಕ್ಕೆ ಅವನು, ” ಇಲ್ಲ, ನನ್ನನ್ನು ಬೆನ್ನಟ್ಟಿ ಬಂದಿದ್ದಾರೆ. ನಾನು ನಿಮ್ಮ ಕೊಠಡಿಗೆ ಬಂದರೆ ಅಲ್ಲಿಯೇ ನನ್ನನ್ನು ಹಿಡಿದುಬಿಡು ವರು. ಇದರಿಂದ ನಿಮಗೆ ಬಹಳ ತೊಂದರೆಯಾಗುವುದು,’ ಎಂದನು.

ಇದನ್ನು ಹೇಳುವಷ್ಟರೊಳಗಾಗಿ ಮಹಡಿಯ ಮೇಲೆ ಗಟ್ಟಿ ಯಾದ ಶಬ್ದವು ಕೇಳಿಸಿತು. ಮೆಟ್ಟಲನ್ನು ಹತ್ತುವ ಗದ್ದಲವೂ, ಬಾಗಿಲು ಕಾಯುವ ಮುದುಕಿಯು ತನ್ನ ಶಕ್ತಿಯಿದ್ದಷ್ಟೂ ಗಟ್ಟಿಯಾಗಿ ಆರ್ತ ಧ್ವನಿಯಿಂದ ಕೂಗಿಕೊಳ್ಳುತ್ತಿದ್ದುದೂ ಕೇಳಿ ಸಿತು.

ಆ ಮುದುಕಿಯು, ‘ ಮಹಾ ಸ್ವಾಮಿ, ದೇವರ ಸಾಕ್ಷಿಯಾ ಗಿಯ ಪ್ರಮಾಣಮಾಡಿ ಹೇಳುತ್ತೇನೆ. ಈ ದಿನ ಹಗಲೆಲ್ಲ ನಾ ನಿಲ್ಲಿಯೇ ಕಾದಿದ್ದೇನೆ. ಕ್ಷಣ ಕಾಲವೂ ನಾನು ಈ ಬಾಗಿಲನ್ನು ಬಿಟ್ಟು ಹೋಗಲಿಲ್ಲ. ಹಗಲಿನಲ್ಲಾಗಲಿ, ಈ ಸಾಯಂಕಾಲದಲ್ಲಿಯಾಗಲಿ, ಯಾರೊಬ್ಬರೂ ಇಲ್ಲಿಗೆ ಬರಲೂ ಇಲ್ಲ; ಒಳಗೆ ಹೋಗ ಲೂ ಇಲ್ಲ’ ಎಂದು ಕೂಗಿಕೊಂಡಳು.

ಅದಕ್ಕೆ ಒಬ್ಬನು, ಆದರೆ ಈ ಕೊಠಡಿಯಲ್ಲಿ ದೀಪವಿರು ವುದಲ್ಲಾ!” ಎಂದನು. ಒಳಗಿದ್ದವರಿಗೆ ಇದು ಜೇನರ್ಟನ ಧ್ವನಿ ಯೆಂದು ಗೊತ್ತಾಯಿತು.

ಆ ಕೊಠಡಿಯ ಬಾಗಿಲನ್ನು ತೆರೆದಾಗ ಕದವು ಒಳಗಡೆಯ ಬಲ ಭಾಗದ ಗೋಡೆಯ ಮಲೆಗೆ ಅಡ್ಡಲಾಗಿ ಮುಚ್ಚಿಕೊಳ್ಳು ವಂತೆ ಇತ್ತು. ಜೀನ್ ವಾಲ್ಜೀನನು ದೀಪವನ್ನೂದಿ ತಾನು ಈ ಬಾಗಿಲ ಹಿಂದಣ ಮೂಲೆಯಲ್ಲಿ ಅವಿತುಕೊಂಡನು.

ಸಿಸ್ಟರ್‌ ಸಿಂಪ್ಲಿ ಸಳುಮೇಜಿನ ಮುಂದೆ ಮೊಣಕಾಲೂರಿ ದೇವರ ಪ್ರಾರ್ಥನೆ ಮಾಡಲು ಕುಳಿತಳು.

ಬಾಗಿಲು ತೆರೆಯಿತು.

ಜೇವರ್ಟನು ಒಳಗೆ ಬಂದನು. ಅನೇಕ ಜನರು ಪಿಸುಗುಟ್ಟುತ್ತಿರುವುದೂ ಮತ್ತು ಬಾಗಿಲ ಮುದುಕಿಯು, ಒಳಗೆ ಬರುವವರನ್ನು ತಡೆದು, ಕೂಗಿಕೊಳ್ಳುತ್ತಿ ದುದೂ ಸಹ ಕೊಠಡಿಯಲ್ಲಿರುವವರಿಗೆ ಚೆನ್ನಾಗಿ ಕೇಳಿ ಬಂತು. ಸಿಂಪ್ಲಿಸಳು ಕಣ್ಣನ್ನು ತೆರೆಯಲಿಲ್ಲ. ದೇವರ ಪ್ರಾರ್ಥನೆಯಲ್ಲಿಯೇ ಇದ್ದಳು. ಇನ್ನೊಂದು ಮೇಣದ ಬತ್ತಿಯು ಮಂಕಾಗಿ ಉರಿ ಯುತ್ತಿತ್ತು,

ಈ ಸ್ಥಿತಿಯನ್ನು ನೋಡಿ, ಜೇವರ್ಟನಿಗೆ, ಅಲ್ಲಿಂದ ಹೊರಟು ಹೋಗೋಣವೆಂಬ ಭಾವವು ಹುಟ್ಟಿತು.

ಆದರೆ ಕರ್ತವ್ಯವು ಅಲ್ಲಿಂದ ಹೊರಡದಂತೆ ಇವನನ್ನು, ಬಲಾತ್ಕರಿಸಿ ತಡೆಯಿತು. ಇದರಿಂದ, ಇಲ್ಲಿಯೇ ನಿಂತು ಆಕೆ ಯನ್ನು ಒಂದು ಪ್ರಶ್ನೆಯನ್ನಾದರೂ ಕೇಳಿಯೇ ಬಿಡೋಣ ವೆಂಬ ಎರಡನೆಯ ಆಲೋಚನೆಯು ಇವನ ಮನಸ್ಸಿನಲ್ಲಿ ಹುಟ್ಟಿತು.

ಸಿಸ್ಟರ್‌ ಸಿಂಪ್ಲಿಸಳು ತನ್ನ ಜನ್ಮಾವಧಿಯಾಗಿ ಸುಳ್ಳನ್ನು ಹೇಳಿದವಳೇ ಅಲ್ಲ, ಈ ವಿಚಾರವು ಜೇವರ್ಟನಿಗೆ ತಿಳಿದಿತ್ತು. ಇದ ಕ್ಕಾಗಿಯೇ ಅವನು ಈಕೆಯಲ್ಲಿ ಬಹಳ ಗೌರವವನ್ನಿಟ್ಟಿದ್ದನು.

‘ ಅಮ್ಮ ! ಈ ಕೊಠಡಿಯಲ್ಲಿ ನೀವು ಒಬ್ಬರೇ ಇರುವಿರಾ?’ ಎಂದನು.

ಈ ಸಮಯಕ್ಕೆ ಬಾಗಿಲು ಕಾಯುವ ಆ ಬಡ ಮುದುಕಿಗೆ ಕೈಕಾಲುಗಳು ಗಡಗಡನೆ ನಡುಗಿ ಅವಳು ಒಂದು ಕ್ಷಣ ಮಾತ್ರ ತಲ್ಲಣಿಸಿ ಹೋದಳು.

ಸಿಂಪ್ಲಿಸಳು ಕಣ್ಣೆತ್ತಿ ನೋಡಿ, ‘ಅಹುದು,’ ಎಂದು ಉತ್ತರ ಕೊಟ್ಟಳು.

ಅನಂತರ ಜೇವರ್ಟನು, ‘ ತಾಯಿಾ, ನಾನು ಮತ್ತೆ ಕೇಳುವೆ ನೆಂದುಬೇಸರ ಪಡಕೂಡದು, ನನ್ನನ್ನು ಕ್ಷಮಿಸಬೇಕು. ಇದು ನನ್ನ ಕರ್ತವ್ಯವು ಈ ದಿನ ಒಬ್ಬ ಪುರುಷನು ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಿರುವನು. ನಾವು ಅವನನ್ನು ಹುಡುಕು ತ್ತಿರುವೆವು. ಅವನ ಹೆಸರು ಜೀನ್ ವಾಲ್ಜೀನ್’ ಎಂದು. ಅವ ನನ್ನು ನೀವು ಈ ದಿನ ಸಾಯಂಕಾಲ ಇಲ್ಲಿ ನೋಡಲಿಲ್ಲವೇ ? ‘ ಎಂದು ಮತ್ತೆ ಕೇಳಿದನು.

ಸಿಂಪ್ಲಿಸಳು, ‘ಇಲ್ಲ,’ ಎಂದುತ್ತರ ಕೊಟ್ಟಳು.

ಆಕೆ ಸುಳ್ಳನ್ನು ಹೇಳಿದಳು. ಒಂದರ ಮೇಲೊಂದರಂತೆ ಎರಡು ಸುಳ್ಳುಗಳನ್ನು ಒಟ್ಟಿಗೆ, ಸ್ವಲ್ಪವೂ ಅನುಮಾನಿಸದೆ, ಸುಳ್ಳಿ ನಲ್ಲಿ ನಿಪುಣಳಂತೆ ಬೇಗನೆ ಹೇಳಿಬಿಟ್ಟಳು.

‘ತಾಯೀ, ಕ್ಷಮಿಸಬೇಕು,’ ಎಂದು ಹೇಳಿ ಜೀವರ್ಟನು ಗೌರವದಿಂದ ಬಾಗಿ ನಮಸ್ಕರಿಸಿ ಹೊರಟು ಹೋದನು.

ಸತ್ಯವಾದಿನಿಯಾಗಿದ್ದ ಸಿಂಪ್ಲಿಸಳ ಈ ದೃಢವಾದ ಉತ್ತರವು ಸತ್ಯವೆಂದು ಜೇವರ್ಟನ ಮನಸ್ಸಿನಲ್ಲಿ ನಿರ್ಧರವಾಯಿತು. ಇದ ರಿಂದ ಅಲ್ಲಿ ಆಗತಾನೇ ಆರಿಸಿ ಮೇಜಿನ ಮೇಲೆ ಹೊಗೆಯಾಡು ತ್ತಿದ್ದ ದೀಪದ ವಿಷಯವಾಗಿಯೂ ಅವನಿಗೆ ಅನುಮಾನವೂ ಬರಲಿಲ್ಲ. ಒಂದು ಗಂಟೆಯು ಕಳೆದ ಮೇಲೆ, ಅದೇ ರಾತಿ), ಕತ್ತಲೆ ಯಲ್ಲಿ, ಮರಗಳ ಕೆಳಗೆ ಒಬ್ಬ ಪುರುಷನು ಮಾ……ಸರ್‌……. ಮಾ……ಮನೆಯಿಂದ ಪ್ಯಾರಿಸ್ ನಗರದ ಕಡೆಗೆ ಬೇಗಬೇಗನೆ ಹೋಗುತ್ತಿದ್ದನು. ಇವನು ಯಾರು ? ಜೀನ್ ವಾಲ್ಜೀನನೆ ! ಇವನು ಒಂದು ಗಂಟನ್ನು ಹೊತ್ತುಕೊಂಡು ಹೋಗುತ್ತಿದ್ದ ನೆಂತಲೂ, ಮೇಲೆ ವಸ್ತ್ರವನ್ನು ಹೊದ್ದಿದ್ದನೆಂತಲೂ, ಇವನನ್ನು ಸಂಧಿಸಿದ ಇಬ್ಬರು ಮೂವರು ಬಂಡಿಹೊಡೆಯುವವರು ಸಾಕ್ಷ್ಯ ಹೇಳಿದುದರ ಮೇಲೆ ಇವನ ಮೇಲೆ ಅಪರಾಧವು ಸ್ಪಿರಪಟ್ಟಿತು. ಇವನು ತನ್ನ ಹಣವನ್ನೂ ಮೇಣದ ಬತ್ತಿಯ ಕೊಳವೆಗಳನ್ನೂ ಹೂತಿಡಲು ಬೈರಿ ಪಟ್ಟಣದ ಬಳಿಯ ಅರಣ್ಯಕ್ಕೆ ಹೋಗು ತಿದ್ದನೆಂಬುದು ಅವರಿಗೆ ಗೊತ್ತಿರಲಿಲ್ಲ.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮ
Next post ಕೋಲು ಪದ (ವರಾ ಬೇಡ್ತ್ಯಲಾ ದಾರವಾಡಿ)

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys