
ಬಹಳ ದಿನಗಳಿಂದ ಈ ಕಣ್ಣುಮುಚ್ಚಾಲೆ ಆಟ ನಡೆಯುತ್ತಿದೆ!
ಒಂದು ಮೊಟ್ಟೆಯಲ್ಲಿ ಸುಮಾರು ನಾಲ್ಕು ಗ್ರೇನುಗಳಷ್ಟು ಕೊಲೆಸ್ಟರಾಲ್ ಇರುತ್ತದೆ. ಕೊಲೆಸ್ಟರಾಲ್‌ನ ಇಷ್ಟು ಅಧಿಕ ಪ್ರಮಾಣದಿಂದ ಅಧಿಕ ರಕ್ತದೊತ್ತಡ, ಹೃದಯ ಮತ್ತು ಮೂತ್ರಪಿಂಡದ ರೋಗಗಳು, ಪಿತ್ತಕೋಶದಲ್ಲಿ ಕಲ್ಲು ಮುಂತಾದ ರೋಗಗಳು ಕಾಣಿಸಿಕೊಳ್ಳಬಹುದೆಂದು ವಿಜ್ಞಾನ ಹೇಳುತ್ತದೆ.
ಆದರೆ “ನ್ಯಾಷನಲ್ ಎಗ್ ಕೋ-ಆರ್ಡಿನೇಶನ್ ಕಮಿಟಿ” (ಎನ್.ಇ.ಸಿ.ಸಿ)ಯ ಪ್ರಕಾರ ಮೊಟ್ಟೆಯಲ್ಲಿ ಉತ್ಕೃಷ್ಟ ದರ್ಜೆಯ ಪ್ರೋಟೀನುಗಳು ಮತ್ತು ಫಾಸ್ಫೋರಸ್‌ಗಳಿವೆ. ಸ್ಪುಟವಾದ ದೃಷ್ಠಿ ಮತ್ತು ಆರೋಗ್ಯಕರ ತ್ವಚೆಗೆ ಬೇಕಾಗುವ ವಿಟಮಿನ್ ‘ಎ’, ಉತ್ತಮ ಜೀರ್ಣಶಕ್ತಿ ಮತ್ತು ಬಲಿಷ್ಠ ಸ್ನಾಯುಗಳಿಗೆ ಅಗತ್ಯವಾದ ವಿಟಮಿನ್ ‘ಬಿ’, ಗಟ್ಟಿಯಾದ ಎಲುಬುಗಳಿಗಾಗಿ ವಿಟಮಿನ್ ‘ಡಿ’ ಮತ್ತು ರಕ್ತಕ್ಕೆ ಅಗತ್ಯವಿರುವ ಕಬ್ಬಿಣದ ಸತ್ವ ಇವೆಲ್ಲವೂ ಮೊಟ್ಟೆಯಲ್ಲಿರುವುದಾಗಿ ಅದು ಪ್ರಚಾರ ಮಾಡುತ್ತಿದೆ. “ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ”. “ಸಂಡೆ ಹೋ ಯಾ ಮಂಡೇ, ರೋಜ್ ಖಾನ ಏಕ್ ಅಂಡೆ” ಎಂಬ ಘೋಷಣೆಗಳೊಂದಿಗೆ ಪದೇ ಪದೇ ದೂರದರ್ಶನ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತುಗಳ ಮೂಲಕ ಮೊಟ್ಟೆಯನ್ನು ತಿನ್ನುವಂತೆ ಪ್ರಚೋದಿಸುತ್ತಿದೆ!
ಎರಡರಲ್ಲಿ ಯಾವುದನ್ನು ನಂಬುವುದು? ಇದು ಜನಸಾಮಾನ್ಯರನ್ನು ಗೊಂದಲಕ್ಕೆ ಈಡುಮಾಡಿದೆ. ಅತ್ತ ನುಂಗಲೂ ಆಗದೆ ಇತ್ತು ಉಗುಳಲೂ ಆಗದೆ ಗಂಟಲಲ್ಲೇ ಉಳಿಯುವ ಸ್ಥಿತಿ. ಇದರ ರಹಸ್ಯವನ್ನು ಬಿಡಿಸುವವರ್‍ಯಾರು?
*****
- ಮಾನವ ಶರೀರ : ವಿಸ್ಮಯಗಳ ಆಗರ - January 18, 2021
- ಜಗತ್ಪ್ರಸಿದ್ಧ ಚೀನೀ ಕಲೆ ಬೋನ್ಸಾಯ್ - January 4, 2021
- ಸಕ್ಕರೆಯೂ ಸಿಹಿ ವಿಷ: ಯಾವಾಗ? - December 21, 2020