ಹೂವಿನ ಧ್ಯಾನ

ಕರುಣಾಮಯಿ ಹೂವು ಜಗತ್ತಿನ ಒಳಿತಿಗಾಗಿ ಧೇನಿಸುವುದು ಹೂವಿನ ಧ್ಯಾನವೆ ಧ್ಯಾನ ಅದು ಪರಿಮಳಿಸಿ ಲೋಕವ ವ್ಯಾಪಿಸುವುದು ಪರಿಮಳಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್‍ಗಮಿಸುವುದು ಹೂವಿಗೆ ಧ್ಯಾನವೇ ಜೀವನ ಮರಣವೂ ಹೂವಿಗೆ ಸಮಾನ. *****

ಬುದ್ಧ ವೈಭವ

ಎಲ್ಲ ಕೇಂದ್ರಗಳ ಕೇಂದ್ರ, ಎಲ್ಲ ಮೊಳಕೆಯ ಬೀಜ, ತನ್ನೊಳಗೆ ತಾನೆ ಮಾಗಿ ಸಿಹಿಯಾದ ಹಣ್ಣು ಈ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರದಾಚಿನವರೆಗೂ ತುಂಬಿಕೊಂಡ ಸವಿ ತಿರುಳು. ನಿನಗಿದೋ ವಂದನೆ. ನಿನ್ನ ಹೊಣೆ ಯಾರೂ ಹೊರದ,...

ಸರಕಾರದ ವಿರುದ್ಧ ನಾಯಕ

ಊರಲ್ಲೆಲ್ಲ ಹಾಹಾಕಾರ ಜನರ ಸ್ಥಿತಿ ಭೀಕರ ಹಾಗಿದ್ರೂನೂ ಹಾಕ್ತಾರಪೋ ಕುಂತರೆ ನಿಂತರೆ ಕರ ಎಂಥ ಸರಕಾರ! ಎಂಥ ಸರಕಾರ! ಇಂಥ ಸರಕಾರಕ್ಕೆ ಧಿಕ್ಕಾರ! ಬಿಸಿಲಿಗೆ ನಿಂತಿದೆ ಗಿಡ ಮರ ಕುಡಿಯೋ ನೀರಿಗು ಬರ ಅನ್ನ...

ಬುದ್ಧ ಮತ್ತು ಹೂವು

ಗರ್‍ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್‍ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****

ಬುದ್ಧ

ಕೇಳಿಸಿಕೊಳ್ಳುವವನಂತೆ ದೂರ ದೂರ ಬಹು ದೂರದ ಮೌನ... ಉಸಿರು ಬಿಗಿ ಹಿಡಿದು ಕಿವಿಗೊಟ್ಟರೂ ನಮಗೆ ಕೇಳದ ನಿಶ್ಯಬ್ಧ. ಅವನೊಂದು ನಕ್ಷತ್ರ. ಅಸಂಖ್ಯ ಬೃಹತ್ ತಾರೆಗಳು, ನಮ್ಮ ಕಣ್ಣಿಗೆ ಕಾಣದೆ, ಅವನ ಸುತ್ತುವರೆದಿದೆ. ಅವನೇ ಎಲ್ಲಾ....

ಜನ ನಾಯಕ

ಜನ ನಾಯಕ ನಡೆದಾಗ ಎಂಥಾ ನೆಲವೂ ನಡುಗುವುದು ಕಡಲಿನ ನೀರೂ ಬರಡುವುದು ಜನ ನಾಯಕ ಕುಳಿತಾಗ ಎಂಥಾ ಪೀಠವು ಕುಲುಕುವುದು ಸಿಂಹಾಸನವೂ ಅಲುಗುವುದು ಜನ ನಾಯಕ ನುಡಿದಾಗ ಎಂಥಾ ಸದ್ದೂ ಅಡಗುವುದು ಗುಡುಗು ಕೂಡ...

ದೇವರ ಹೂವು

ಶಿಕ್ಷೆ ಏನೆಂಬುದು ಹೂವಿಗೆ ತಿಳಿಯದು ತಾನೆ ರಕ್ಷಿಸಿಕೊಳ್ಳಲು ಹೂವು ಅರಿಯದು ಕತ್ತಿಯ ಅಲಗಿನಿಂದ ತಿವಿದರೂ ಹೂವು ತುಂಬು ನಗೆಯನ್ನೆ ಸುರಿಸುವುದು ಅಂತೆಯೆ ದೇವರೇ ಹೂವಿನ ಪಾಲನೆಗೆ ಪಣತೊಟ್ಟಿದ್ದಾನೆ ಚಿಟ್ಟೆಯಾಗಿ ಮರಿದುಂಬಿಯಾಗಿ ಸದಾ ಹೂದೋಟಗಳಲ್ಲಿ ನೆಲೆಸಿದ್ದಾನೆ...

ಸಂಜೆ

ಬಟ್ಟೆ ಬದಲಾಯಿಸುತ್ತಾ ಪ್ರಾಚೀನ ವೃಕ್ಷಗಳು ಎತ್ತಿಹಿಡಿದ ಉಡುಪನ್ನು ನಿಧಾನವಾಗಿ ಧರಿಸುವುದು ಸಂಜೆ. ನೋಡು: ನೀನು ನಿಂತಲ್ಲಿಂದ ಬಯಲು ಇಬ್ಬಾಗವಾಗಿದೆ, ಕಣ್ಮರೆಯಾಗುವವರೆಗೂ ಒಂದು ಕೆಳಗೆ ಸಾಗಿದೆ, ಇನ್ನೊಂದು ಮುಗಿಲಿಗೇರಿದೆ. ನೀನು ಎಲ್ಲಿಗೂ ಪೂರ್ತಿ ಸೇರಿದವನಲ್ಲ, ನಿಶ್ಯಬ್ದವಾಗಿ...

ಈಚಲ ಮರದಡಿ

ಈಚಲ ಮರದಡಿ ಈಶ್ವರ ಭಟ್ಟರು ಧೋತರ ಹರಡಿ ಕುಳಿತೇ ಬಿಟ್ಟರು ಆಕಡೆ ನೋಡಿ ಈಕಡೆ ನೋಡಿ ಮೊಗೆದೇ ಬಿಟ್ಟರು ಕುಡಿದೇ ಬಿಟ್ಟರು ಏನದು ಗಡಿಗೆ ಏನದರೊಳಗೆ ಓಹೋ ಹುಳ್ಳಗೆ ತಿಳಿಯಿತು ಮಜ್ಜಿಗೆ ನೋಡಿದರುಂಟು ಕೇಳಿದರುಂಟು...

ಹೂವುಗಳು

ಕಿಕ್ಕಿರಿದಿದ್ದವು ಮರದಲ್ಲಿ ಹೂವುಗಳು ಇಡೀ ಮರವು ಒಂದು ಹೂವು ಇಡೀ ಹೂದೋಟವು ಒಂದು ಹೂಗೊಂಚಲು ಇಡೀ ಭೂಮಂಡಲವು ಒಂದು ಹೂ ಬುಟ್ಟಿಯು ಹೂಭಾರಕ್ಕೆ ಪರಿಮಳಕೆ ಪಕ್ಕಾಗಿ ಹೂವಾಡಗಿತ್ತಿಯು ತೂಗಿರಲು- ನೋಡು... ಬ... ಎಂದವನ ಕರೆದೆ...