ಹಾಡುವುದು ಕೋಗಿಲೆ ತನ್ನ ಆಶೆಯಂತೆ
ಹಾಡೆ ಕೋಗಿಲೆಯ ಭಾಷೆಯಂತೆ

ಅರಳುವುದು ಹೂವು ತನ್ನ ಆಶೆಯಂತೆ
ಪರಿಮಳವೆ ಹೂವಿನ ಭಾಷೆಯಂತೆ

ಉರಿಯುವುದು ಬೆಂಕಿ ತನ್ನ ಆಶೆಯಂತೆ
ಬೆಳಕೆ ಬೆಂಕಿಯ ಭಾಷೆಯಂತೆ

ಬೀಸುವುದು ಗಾಳಿ ತನ್ನ ಆಶೆಯಂತೆ
ಮರ್ಮರವೆ ಗಾಳಿಯ ಭಾಷೆಯಂತೆ

ಹೊರಳುವುದು ಭೂಮಿ ತನ್ನ ಆಶೆಯಂತೆ
ಹಗಲಿರುಳೆ ಭೂಮಿಯ ಭಾಷೆಯಂತ

ಹರಿಯುವುದು ನದಿ ತನ್ನ ಆಶೆಯಂತೆ
ಕಲಕಲವೆ ನದಿಯ ಭಾಷೆಯಂತೆ

ಬೆಳೆಯುವನು ಚಂದಿರ ತನ್ನ ಆಶೆಯಂತೆ
ಬೆಳುದಿಂಗುಳೆ ಚಂದಿರನ ಭಾಷೆಯಂತೆ

ನಲಿಯುವುದು ಜೀವ ತನ್ನ ಆಶೆಯಂತೆ
ಆಶಯ ಬದುಕಿನ ಭಾಷೆಯಂತೆ.
*****