ಹಿಂಬಾಲಿಸಿ
ಅತ್ತ, ಇತ್ತ ನೀ ತಿರುಗಿದತ್ತ, ಹೊರಳಿದತ್ತ, ಹರಿದತ್ತ
ಆಸೆಬುರುಕ ಕಣ್ಣಲ್ಲಿ
ಹತ್ತು ಹಲವು ಕೋನಗಳಲ್ಲಿ ಚಿತ್ರ ಎತ್ತಿಕೊಳ್ಳುತ್ತ
ಸಂಧಿಗಾಗಿ ಹೊಂಚುತ್ತ
ಬರ ಸೆಳೆಯೆ ಹುನ್ನಾರ ಹೂಡುತ್ತ
ನೆವ ಸವದಲ್ಲಿ ತಾಕುತ್ತ
ಅಲ್ಲಿ ಇಲ್ಲಿ ಮುಟ್ಟುತ್ತ
ನೀನು, ನೋವ ನಟಿಸಿ, ಮುಖ ಕಿವುಚಿ
ಹುಸಿ ಮುನಿಸ ತೋರುತ್ತ, ದೂಕುತ್ತ
ಬೇಕಾಗಿ ತಪ್ಪಿಸಿ ಓಡಾಡುತ್ತ,
ಚಿಟುಗು ಮುಳ್ಳಾಡಿಸಿ ತುಸು ತುಸುವೇ ಕೆರಳಿಸುತ್ತ
ತೊಡರಿದರೆ, ಅಡರಿ ಬಂದರೆ
ಗದರಿಸುವ ಮೋಜು ನೋಡುತ್ತ
ಸುಖದ ಕಾವ ಸವಿಯುತ್ತ, ಹಂಚುತ್ತ
ನಿನ್ನ ಸುತ್ತ ಮುತ್ತ ತಿರುಗುವ ಚಿತ್ರ
ನನಗೆ ಬಲು ಆಪ್ತ.
*****