ಭಾರತ ದೇಶದ ತೊಂಡು ದನಗಳಿಗೆ

ಭಾರತ ದೇಶದ ತೊಂಡು ದನಗಳಿಗೆ
ಕರ್ನಾಟಕವೇ ಪ್ರೀತಿಯು
ಇಲ್ಲಿಯ ಹುಲ್ಲು ನೀರು ಕಂಡರೆ
ಎಲ್ಲಿಲ್ಲದ ಸಂಪ್ರೀತಿಯು
ಆದರೆ ಏಕೊ ಕನ್ನಡ ಎಂದರೆ
ಅವುಗಳಿಗಿನ್ನು ಅಪಥ್ಯವು
ಇಂತಹ ರೋಗಕೆ ಮದ್ದು ಯಾವುದು?
ತಿಳಿಯಬೇಕು ಇಂದು ನಾವು

ಕರ್ನಾಟಕಕೆ ಗೋಡೆಗಳಿಲ್ಲ
ಇರುವುದು ಕೂಡ ಬೇಡ
ಇರುವ ಗೋಡೆಗಳೆ ಬಿದ್ದರೆ ಸಾಕು
ಹೊಸ ಗೋಡೆಗಳು ಬೇಡ
ಇಂತಹ ಬಯಲಲಿ ಮೇಯುತ್ತಲಿವೆ
ಮೇಯಲಿ, ಅವಕಿವೆ ಹೊಟ್ಟೆ
ಆದರೆ ತಲೆಗೆ ಮಿದುಳು ಬೇಡವೆ?
ಬೇಡವೆ ಕನ್ನಡ ಅವಕೆ!

ಕರ್ನಾಟಕದಲೆ ಹುಟ್ಟಿ ಬೆಳೆದಿವೆ
ಇಲ್ಲಿಯ ಅನೇಕ ರಾಸುಗಳು
ಗಾಳಿಯಷ್ಟೆ ಕನ್ನಡವನು ಉಂಡಿವೆ
ಇವುಗಳ ಶ್ವಾಸ ಕೋಶಗಳು
ಆದರೂ ಏಕೊ ಕನ್ನಡ ಎಂಬುದು
ಇವುಗಳಿಗೂ ಸಹ ಅಪರಿಚಿತ
ಇವುಗಳ ರೋಗಕ್ಕಿನ್ನೊಂದು ಮದ್ದು
ನೀಡಬೇಕಿದೆ ಉಚಿತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಹರಿ
Next post ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…