Home / Poem

Browsing Tag: Poem

ಆಗು ಯೋಗಿ ಸಹಜ ಯೋಗಿ ಕರ್ಮ ನಿರ್ಮಲ ರಸ‌ಋಷಿ|| ಆಗು ಅಚಲಾ ವಿಚಲದಾಚೆಗೆ ಚಿತೆಯ ಚಂಚಲ ಚಲ್ಲು ನೀ ಮನವೆ ರೋಗಾ ಮನವೆ ರಾಗಾ ಸಗ್ಗ ನರಕದ ಸರಿಗಮಾ ಮದ್ಯಪಾನಾ ವಧ್ಯ ಗಮನಾ ಧಮ್ರ ಧೂಮದ ದರ್ಪಣಾ ಹಾಲುಜೇನಿನ ಹೊಟ್ಟೆ ಕೊಳಗಕೆ ಕೊಳೆತ ವಿಷಗಳ ತರ್ಪಣಾ ನನಗೆ ...

ಉರಿಬಿಸಿಲಲ್ಲಿ ಗಾಣದ ಸುತ್ತ ಜೀಕುತ್ತಿದೆ ಮುದಿ ಎತ್ತು; ಬತ್ತಿದ ಕಣ್ಣು ಕತ್ತಿನ ಹುಣ್ಣು ನೊಣ ಮುಸುರುತ್ತಿವೆ ಸುತ್ತೂ: ಬಳಲಿದೆ ಕಾಲು ಎಳೆದಿವೆ ಭಾರ ಬೆನ್ನಿಗೆ ಬೆತ್ತದ ಪಾಠ, ಎದುರಿಗೆ ಮಠದಲಿ ಬಸವ ರಥೋತ್ಸವ ಸಿಹಿಸಿಹಿ ಭಕ್ಷ್ಯದ ಊಟ! * * * ಬಸ್...

ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****...

ಬಣ್ಣಬಣ್ಣ ಮುಗಿಲ ಮೈತುಂಬ ಹೂವರಳಿದ ಸಿರಿಸಂಜೆ ಮೋಡದಂಚಿಗೆ ಜರಿಯ ಅಂಚು ಮೆದು ಮಲ್ಲಿಗೆ ಅಂಗಳದ ಮೂಲೆಯಲಿ ಸೂಸಿದ ಕಂಪು ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ. ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ ಮೊಗ್ಗಾಗಿ ತಿಳಿಗಾಳಿ ತೀಡಿ ಕೈಯಿಂದ ಮನಸ್ಸಿಗೆ ತೇ...

ಚಂದ್ರಿ, ನನಗ ಗೊತ್ತಿಲೇನು ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ ದಾಳಿಂಬ ಹಲ್ಲು, ಸಂಪಿಗೆ ಮೂಗು ಮೀನಿನ ಕಣ್ಣು, ಬಿಲ್ಲು ಹುಬ್ಬ ಹಾವಿನ ಹೆಡೆ, ಸೂಚಿಪರ್ಣಿ ಎದೆ, ಇನ್ನೂ ಏನೇನೋ ಏನೇನೋ…. ಅದರ ಖರೇನ – ದಾಳಿಂಬ, ಸಂಪಿಗೆ, ಮೀನು ಬಿಲ್...

ಹೇಗೆ ಹೋಗುತಿದೆ ನೋಡಿ ಸೋಮವಾರದ ಗಾಡಿ ಸುತ್ತಾಡಿ ಗಲ್ಲಿ ಗಲ್ಲಿ ಒಡೆದು ದಾಮರ ಜಲ್ಲಿ ಗುರುತುಗಳು ವಕ್ರ ವಕ್ರ ತುಳಿದಲ್ಲಿ ಭಾರೀ ಚಕ್ರ ಕಾಣಿಸುವುದೇಕ ಪಾತ್ರ ಕಣ್ಣುಗಳು ಅನೇಕ ಮಾತ್ರ ಮಾತಿಗೆ ಮಾತು ಜೋತು ನಿಂತಿರುವುದು ಸೇತು ಅಲ್ಲಿ ಹೊಳೆ ಇಲ್ಲಿ ಹ...

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು. ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ- ನೆಲ ನುಡಿಯ ಬಲ್ಮೆಗೆ ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ. ಹೊಂಬಣ್ಣವೆಂದು ಕನ್ನಡವ ಮೆಲ್ಲುತ್ತ ಹಾಡಿದರು ಕುಡಿಯುತ್ತ ತೇಗಿದರು ಕನ್ನಡದಲೇ ಮಿಂದರು ಜನಪದರು ಕಾಯಕ...

ಪ್ರೀತಿಪಾತ್ರರು ಸತ್ತಾಗೆಲ್ಲ ನನ್ನೊಳಗಿನ ಚೈತನ್ಯದ ಕಣವೊಂದು ಸುಟ್ಟು ಬೂದಿಯಾಗುತ್ತದೆ. ನನ್ನವನು ಮೈಮರೆತು ಮಲಗಿದ್ದರೂ ಕಳವಳಿಸುತ್ತಾ ಎದೆಬಡಿತ ಆಲಿಸುತ್ತೇನೆ. ನನಗನ್ನಿಸುತ್ತದೆ ಯಾರೋ ಹೊಂಚು ಹಾಕುತ್ತಿದ್ದಾರೆ ಬೆನ್ನಹಿಂದೆ....

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...