ಪ್ರೀತಿಪಾತ್ರರು ಸತ್ತಾಗೆಲ್ಲ
ನನ್ನೊಳಗಿನ ಚೈತನ್ಯದ
ಕಣವೊಂದು ಸುಟ್ಟು ಬೂದಿಯಾಗುತ್ತದೆ.
ನನ್ನವನು ಮೈಮರೆತು
ಮಲಗಿದ್ದರೂ
ಕಳವಳಿಸುತ್ತಾ
ಎದೆಬಡಿತ ಆಲಿಸುತ್ತೇನೆ.
ನನಗನ್ನಿಸುತ್ತದೆ
ಯಾರೋ ಹೊಂಚು
ಹಾಕುತ್ತಿದ್ದಾರೆ ಬೆನ್ನಹಿಂದೆ.