Home / ಕಥೆ / ಕಾದಂಬರಿ / ವಾಗ್ದೇವಿ – ೨೫

ವಾಗ್ದೇವಿ – ೨೫

ವೇದವ್ಯಾಸ ಉಪಾಧ್ಯನು ವೃಥಾ ಸರ್ಕಾರದ ವರೆಗೆ ಹೋಗಿ ಕಪ್ಟ ಪಟ್ಟನೆಂಬ ವಿಷಾದದಲ್ಲಿರುವಾಗ ಬಾಲಮುಕುಂದಾಚಾರ್ಯನು ಅವನನ್ನು ಕರೆಸಿ ಶಾಂತಿಪುರ ಮಠದಿಂದ ಸ್ಥಾಪಿಸೋಣಾದ ಸಂಸ್ಕೃತ ಪಾಠಶಾಲೆಯಲ್ಲಿ ಉಪಾಧ್ಯಾಯನಾಗಿ ನೇಮಿಸಿ ಪತ್ನಿ ಸಮೇತ ಅಲ್ಲಿಯೇ ವಾಸಿಸಿಕೊಂಡಿರಲಿಕ್ಕೆ ಅನುಕೂಲ ಮಾಡಿಕೊಟ್ಟನು. ಭೀಮಾಚಾರ್ಯನನ್ನು ಬಾಲಮುಕುಂದನು ಕೆಲವು ದಿವಸಗಳ ಪರಿಯಂತರ ತನ್ನಲ್ಲಿ ನಿಲ್ಲಿಸಿಕೊಂಡು ಔತಣಾದಿಗಳಿಂದ ತೃಪ್ತಿಪಡಿಸಿ ಊರಿಗೆ ಕಳುಹಿಸಿಕೊಟ್ಟನು. ಇವರೊಳಗಿನ ಸ್ನೇಹವು ಹೆಚ್ಚುತ್ತಾ ಬಂದುದರಿಂದ ಭೀಮಾಚಾರ್ಯನು ಆಗಾಗ್ಯೆ ಶಾಂತಿಪುರಕ್ಕೆ ಬರುವದೂ ಅವರಿಬ್ಬರೂ ಅಸರೂಪವಾಗಿ ಕುಮುದಪುರಕ್ಕೆ ಹೋಗಿ ಭೀಮಾ ಚಾರ್ಯನು ಬಹಿರಂಗವಾಗಿಯೂ ಬಾಲಮುಕುಂದನು ಗುಪ್ತವಾಗಿಯೂ ವಾಗ್ದೇವಿಯನ್ನು ಕಂಡು ಅವಳು ಅವರವರ ಮೇಲೆ ಇಟ್ಟ ಭಾವಕ್ಕನುಗುಣ ವಾಗಿ ಅವಳಿಂದ ಸತ್ಯಾರ ನಡೆಯುವ ರೂಢಿಬಿತ್ತು. ಭೀಮಾಚಾರ್ಯನು ಚಂಚಲನೇತ್ರರ ಕೂಡೆ ಹೆಚ್ಚು ಬಳಿಕೆ ಮಾಡಿಕೊಂಡು ಅವರ ವಿಶ್ಟಾಸಿಯಾ ದನು. ವೇದವ್ಯಾಸ ಉಪಾಧ್ಯನು ಮಾಡಿದ ಮನವಿಯ ಪ್ರಕರಣದಲ್ಲಿ ತಾವು ಜಯಿಸಿದೆನೆಂಬ ಸಂತೋಷದಿಂದ ಚಂಚಲನೇತ್ರರೂ ವಾಗ್ದೇವಿಯೂ ನಿತ್ಯವೂ ಪುಷ್ಟಿಯಾಗುತ್ತಾ ಬಂದರು.

ಆಬಾಚಾರ್ಯನಿಗೆ ಕೂಳಿನ ಪ್ರಸಂಗವಲ್ಲದೆ ಇನ್ನೊಂದು ಮನಸ್ಸಿಗೆ ಹತ್ತುವಹಾಗಿಲ್ಲ. ತಮ್ಮಣ್ಣ ಭಟ್ಟನೂ ಭಾಗೀರಧಿಯೂ ಮಗಳ ಪುಣ್ಯದಿಂದ ಸುಖದಲ್ಲಿದ್ದರು. ವೆಂಕಟಪತಿ ಆಚಾರ್ಯನು ತನ್ನ ಯಜಮಾನನಮೇಲೆ ಬಂದು ನಿವಾರಣೆಯಾದ ಸಂಕಷ್ಟ ಬಹು ಸಣ್ಣದು. ಇನ್ನು ಮುಂದೆ ಏನೇನ ವಾಂತರ ಬರುವದೋ ಎಂಬ ದೀರ್ಫಾಲೋಚನೆಯಲ್ಲಿ ಕಾಲದ ಸಂಜ್ಞೆಗ ಳನ್ನು ನಿರೀಕ್ಷಿಸುತ್ತಾ ಇದ್ದನು. ವೇದವ್ಯಾಸ ಉಪಾಧ್ಯನ ಹೆಂಡತಿಯ ಚಿಂತೆಯು ರವಷ್ಟೂ ಕಡಿಮೆಯಾಗಲಿಲ್ಲಾ. ಶಾಂತಿಪುರ ಮಠದಲ್ಲಿ ಪತಿಗೆ ಜೀವನೋಪಾಯ ದೊರಕಿದ ಆನಂದವು ಅವನಿಗೆ ಬಂದ ಅನ್ಯಾಯವಾದ ಅಸಜಯದಿಂದ ಹುಟ್ಟಿದ ವ್ಯಾಕುಲದಿಂದ ಭಗ್ನವಾಯಿತು. ಬಹಿಷ್ಕಾರದಲ್ಲಿದ್ದ ಶಿಷ್ಯರು ಚಂಚಲನೇತ್ರರಿಗೆ ಪಾದಾಕ್ರಾಂತರಾಗಿ ಅಪರಾಧವನ್ನು ಕೊಟ್ಟು ಶುದ್ಧಪತ್ರಿಕೆ ಪಡಕೊಂಡರು. ವಾಗ್ದೇವಿಯ ಮೇಲೆ ಕವನ ಕಟ್ಟಿದ ಕೆಲವು ದುರ್ಜನರು ಬಹು ಪ್ರಯಾಸದಿಂದ ಪುನೀತರಾದರು. ಆ ಮೇಲೆ ಅವರು ವಾಗ್ದೇವಿಯ ಮುಖವನ್ನು ಕಣ್ಣೆತ್ತಿ ನೋಡಲರಿಯದೆ ಲಜ್ಜಾ ಭಂಡ ರೆನ್ನಿಸಿಕೊಂಡರು. ತಿಪ್ಪಾಶಾಸ್ತ್ರಿಯು ವೆಂಕಟಪತಿ ಆಚಾರ್ಯನ ದೊಡ್ಡಮಿತ್ರ ನಾಗಿಯೂ ವಾಗ್ದೇವಿಯ ಮೆಚ್ಚಿನ ಜೋಯಸನಾಗಿಯೂ ಸುಖದಿಂದ ಕಾಲ ಕ್ಷೇಪ ಮಾಡಿಕೊಂಡಿದ್ದನು. ವೇದವ್ಯಾಸನು ಮಾಡಿದೆ ಗಡಿಬಿಡಿಯು ನಿರ ರ್ಥಕವಾದ ವರ್ತಮಾನ ಸಿಕ್ಕಿದಾಕ್ಷಣ ತಿಪ್ಪಾಶಾಸ್ತ್ರಿಯು ವಾಗ್ದೇವಿಯನ್ನು ಕಂಡು, ಏನೇ ವಾಗೀ! ನನ್ನ ಪ್ರವಾದ ನೆರವೇರಿತಷ್ಟೇ, ಎಂದಾಗ ನಿಮ್ಮ ಜೋತಿಷ್ಯ ಎಂದಾದರೂ ಸಟೆಯಾಗುವದುಂಟೇ, ಎಂದು ಅವಳು ಅವನನ್ನು ಹೊಗಳಿ ಕಾಫಿನೀರನ್ನೂ ರೊಟ್ಟಿಯನ್ನೂ ಯಥೇಚ್ಛಕೊಟ್ಟು ತನ್ನ ಕೃತಜ್ಞತೆ ಯನ್ನು ಸಮರ್ಪಿಸಿದಳು.

ಸಂತೋಷವೇ ಯೌವನ. ಯೌವನ ಕಾಲದಲ್ಲಿ ಸಂತೋಷವು ಪ್ರಾಪ್ತ ವಾದರೆ ಮತ್ತೆ ಹೇಳಲೇಕೆ? ಯೌವನವೂ ಸಂತೋಷವು ಒಗುಮಿಗೆಯಾಗಿ ವಾಗ್ದೇವಿಯಲ್ಲಿ ಪ್ರವರ್ಧಮಾನವಾಗಿ ಅವಳ ಮುಖ ಕಾಂತಿಯೂ ಅಂಗೋ ಪಾಂಗಗಳ ಪ್ರಪುಲ್ಲತೆಯೂ ಕೇವಲ ಜರೆ ಬಂದೊದಗಿದ ನರನ ಮನಸ್ಸಿಗೂ ಚಾಂಚಲ್ಯ ಉಂಟುಮಾಡುವವುಗಳಾದುವು. ನಿತ್ಯವೂ ಇವಳ ಮೈ ಸೊಬಗು ಆಬಾಲವೃದ್ಧರ ಕಣ್ಣಿಗೂ ರಂಜಿತವಾಗುತ್ತಾ ಬಂತು. “ಏನವ್ಪಾ! ಇವಳನ್ನು ನೋಡಿಬಿಟ್ಟರೆ ರೋಮಾಂಛವಾಗುತ್ತದೆ.” ಎಂದು ಕೆಲವರು ಹೇಳತೊಡಗಿ ದರು. “ಇವಳಿಗೆಲ್ಯಾರದೂ ದೃಷ್ಟಿ ತಗಲಿ ಒಂದಕ್ಕೊಂದು ಆಗಲಿಕ್ಕಿಲ್ಲವಷ್ಟೇ” ಎಂದು ಇನ್ನೂ ಕೆಲವರು ಹೇಳಿದರು. ಆದರೆ ಅನುಭವವುಳ್ಳ ಸ್ತ್ರೀರು ವಾಗಿಗೆ ಗರ್ಭೋತ್ಪತಿಯಾಗಿದೆ ಎಂದು ತೋರುತ್ತೆ. ಆಗಲಿ ಅಪ್ಪಾ, ಆಗಲೀ. ಚಿನ್ನದ ಹಾಗಿರುವ ಹುಡುಗಿ, ಬಲು ಮೋಹನಾಂಗಿ ಅವಳಲ್ಲಿ ಪುತ್ರೋತ್ಸವ ವಾಗಲಿ” ಎಂದು ಹೇಳಿದರು. ಭಾಗೀರಧಥಿಗೆ ಈ ಮರ್ಮವು ಮೊದಲೇ ಗೊತ್ತಾಗಿತ್ತು.ವಾಗ್ದೇವಿ ಅನಕ ತಾನು ಗರ್ಭಿಣಿಯಾದ ಹರುಷವನ್ನು ಅನು ಭವಿಸುವುದರಲ್ಲೇ ಬಿದ್ದಳು.

ಕೆಲವು ದಿನಗಳ ಪರಿಯಂತರ ನೆರೆಕೆರೆಯ ಸ್ತ್ರೀಯರು ಭಾಗೀರಥಿಯ ಬಿಡಾರಕ್ಕೆ ಬಂದು ವಾಗ್ದೇವಿಯನ್ನು ಕಂಡು ಊಟಪಾಠಗಳಲ್ಲಿ ಇಡಬೇಕಾದ ಜಾಗ್ರತೆಯನ್ನು ತಿಳಿಸಿ ಅವಳನ್ನು ಹರಸಿದರು. ಭಾಗೀರಥಿಗೆ ವೀಳ್ಯದೆಲೆಯ ಖರ್ಚು ಸ್ವಲ್ಪ ಹೆಚ್ಚಾದರೂ ಸಮಯ ಕಳೆಯಲಿಕ್ಕೆ ಅನುಕೂಲವಾಯಿತು. ವಾಗ್ದೇವಿಯ ಇಷ್ಟಮಿತ್ರರೆಲ್ಲರೂ ಅವಳಿಗೆ ಗರ್ಭವಾದುದಕ್ಕಾಗಿ ಸಂತೋಷ ಪಟ್ಟರು. ಹೊಟ್ಟಕಿಚ್ಚಿನ ಹೆಂಗಸರು ಚಿಟುಕು ಮುರಿದರು. ವೆಂಕಟಪತಿ ಆಚಾರ್ಯನು ಈ ವಿದ್ಯಮಾಣವನ್ನು ಹೆಂಡತಿಯ ಪರಿಮುಖ ತಿಳಿದು ತಲೆ ದೂಗಿದನು. ಮುಂದೆ ಅನರ್ಥಕ್ಕೆ ಹೇತು ಹುಟ್ಟುವ ಕಾಲವು ತಾನು ನಿರೀಕ್ಷಿ ಸಿದಂತೆಯೇ ಬಂತೆಂದು ಚಿಂತೆ ತಾಳಿದನು. ಚಂಚಲನೇತ್ರರು ಅದನ್ನು ಕೇಳ ದಾಗಲೇ ಭಯದಿಂದ ನಡುಗಿದರು. ಆದಿಯಲ್ಲಿ ವೆಂಕಟಪತಿ ಆಚಾರ್ಯನು ಹೇಳಿದ ಬುದ್ಧಿ ಮಾತುಗಳನ್ನು ತಿರಸ್ಕರಿಸಿದ್ದಲ್ಲವಾದರೆ ಮುಂದೆ ಅಪಖ್ಯಾತಿ ಬರುವ ಹಾಗಿತ್ತೇನು? ಈಗ ಪಶ್ಚಾತ್ತಾಪ ಪಡುವದು ಬರೇ ವ್ಯರ್ಧವೇ. ಹೀಗೆಂದು ಸ್ತಬ್ಧರಾದರು.

ಬಯಕೆ ಕೂಳಿನ ಗೌಜು ಹತ್ತಿತು. ಪ್ರಥಮತ ಗಂಡನ ಕಡೆಯಿಂದ ಸೀಮಂತಪ್ರಸ್ತವಾಗಬೇಕಷ್ಟೆ. ಅದಕ್ಕೆಬೇಕಾದ ಸನ್ನಾಹಗಳೆಲ್ಲ ವೆಂಕಟಪತಿ ಆಚಾರ್ಯನು ಮಾಡಿಕೊಟ್ಟನು. ಮುರ್ಹೂತವಿಟ್ಟ ದಿವಸ ಆಬಾಚಾರ್ಯನು ಜರಿ ಅಂಚಿನ ದೊಡ್ಡ ಥೋತ್ರ ಉಟ್ಟು ಗುಲಾಬಿ ಬಣ್ಣದ ರೇಷ್ಮೆ ಸಾಗು ಸುತ್ತಿಕೊಂಡು ಹೂವಿನ ಶಾಲು ಹೊದ್ದುಕೊಂಡು ಕೈಗೆ ತೋಳುಸರಿಗೆ ಬಾಜಿ ಬಂದ ಸೊಂಟಕ್ಕೆ ಚಿನ್ನೃದ ನೇವ ಕಿವಿಗೆ ಫಳಫಳನೆ ಹೊಳೆಯುವ ಗಾಳಿ ವಂಟಿ ಹತ್ತು ಬೆರಳುಗಳಿಗೂ ಉಂಗುರಗಳನ್ನು ಸೇರಿಸಿ ಇಷ್ಟಮಿತ್ರರ ಗಡಣ ದಲ್ಲಿ ಚೀನಿ ವಾದ್ಯ, ಊರು ವಾದ್ಯ, ಬ್ಯಾಂಡ್‌ ಇತ್ಯಾದಿ ಕರ್ಣರಂಜಕ ವಾದ್ಯ ಘೋಷದಿಂದ ದಿಬ್ಬಣಮಾಡಿಕೊಂಡು ಪ್ರಸ್ತದ ಚಪ್ರಕ್ಕೆ ಬಂದನು. ಅಲ್ಲಿ ಹೆಂಗಸರು ಗುಂಪು ಕೂಡಿರುತ್ತಿದ್ದರು. ಮುಹೂರ್ತವು ತಪ್ಪಿ ಹೋಗ ದಂತೆ ನೇಮಿಸಲ್ಪಟ್ಟಗಳಿಗೆಯಲ್ಲಿ ಮದವಳತಿಯ ಶಿರದಲ್ಲಿ ಪುಷ್ಪವನ್ನು ಇಟ್ಟು ಕಟ್ಟು ಕಟ್ಟಳೆ ಲೋಪವಿಲ್ಲದೆ ನಡೆಸಿದರು. ಗಂಡ ಹೆಂಡರಿಗೆ ಆರತಿ ಎತ್ತಿ ದರು. ಈ ಸಂಭ್ರಮವನ್ನು ನೋಡಲಿಕ್ಕೆ ಬಂದ ಅನೇಕರು ““ಆಬಾಚಾರ್ಯನು ಒಂದು ಲೆಕ್ಕದಲ್ಲಿ ಪುಣ್ಯವಂತನೇ ಸರಿ” ಎಂದರು. ಇಷ್ಟು ಒಳ್ಳೆಯ ಗಂಡನು ಸಿಕ್ಕ ಬೇಕಾದರೆ ಹೆಂಡತಿಯು ಹದಿನಾಲ್ಕು ವರುಷ ತಪಸ್ಸು ಮಾಡಬೇಕಾ ಗುವದೆಂದು ಮಕ್ತೆ ಕೆಲವರೆಂದರು. ಅವರವರಿಗೆ ಬೇಕಾದ ಹಾಗೆ ಹಲವರು ಆಡಿಕೊಂಡರು. ಊಟಕ್ಕೆ ಎಲೆಹಾಕಿತು. ಷಡ್ರಸಾನ್ಸ ಭೋಜನ ಬಗೆಬಗೆಯ ಕಜ್ಜಾಯಗಳನ್ನೂ ಸಕ್ರೆ ಭಕ್ಷಗಳನ್ನೂ ಯಥೇಷ್ಟವಾಗಿ ಬಳಸಿದರು. ಉಂಡ ವರೆಲ್ಲಾ ಸಂಪೂರ್ಣ ತೃಪ್ತಿಹೊಂದಿ ಗರ್ಭಿಣಿಯು ಸುಖಮುಖಿಯಾಗಿ ಗಂಡು ಬಾಲನನ್ನು ಹೆರಲೆಂದು ಆಶೀರ್ವದಿಸಿ ಹೊರಟರು. ಆಬಾಚಾರ್ಯನ ಸ್ನೇಹಿತರಲ್ಲಿ ಗುಪ್ತ ಕುಚೋದ್ಯಗಾರ ಶ್ರೀನಿವಾಸನೆಂಬ ಹುಡುಗನು– “ಆಚಾರ್ಯರೇ, ತಮ್ಮ ಪುಣ್ಯ ಬೇಗನೇ ಮಗನನ್ನು ಹೆಗಲ ಮೇಲೇರಿಸಿ ಕೊಂಡು ಕುಣಿದಾಡುವ ಸುಖವು ತಮಗೆ ಸಿಕ್ಕುವುದು.” ಎಂದು ಹಲ್ಲುಕಿರಿದನು. ಅದೇನು ಅದ್ಭುತವೇ? ಪ್ರಪಂಚದಲ್ಲಿ ನಡಿಯುವವಾಡಿಕೆ ಯಲ್ಲವೇ? ಎಂದು ಆಬಾಚಾರ್ಯನು ಹಾಸ್ಯವದನ ಮಾಡಿದನು. ಈ ವಿನೋದಕರವಾದ ಹಗಲು ಗಂಡನ ಅಂದಿನ ಶೃಂಗಾರವನ್ನು ನೋಡಿ ಅನೇಕ ಹೆಂಗಸರೂ ಗಂಡಸರೂ ಮನಸ್ಸಿನಲ್ಲಿಯೇ ನಕ್ಳು ಹಾಸ್ಯಮಾಡಿದರು.

ಗಂಡನ ಲೆಕ್ಕದ ಸೀಮಂತವಾದ ಮೇಲೆ ತಂದೆ ತಾಯಿಗಳು ಮಗಳಿಗೆ ಆದಷ್ಟು ಆಡಂಬರದಿಂದ ದಿವ್ಯವಾದ ಬಯಕೆಯ ಕೂಳು ಹಾಕಿದರು. ಬಳಿಕ ನೆಂಟರಿಷ್ಟರು ನೆರೆಕೆರೆಯವರು ವಾಗ್ದೇವಿಯ ಗೌರವಕ್ಕೆ ಯೋಗ್ಯವಾದ ಔತಣಕೊಟ್ಟು, ಶೀರ ಕುಪ್ಪಸ ಉಡುಗೊರೆ ಮಾಡಿ ಅವಳ ಪ್ರೀತಿಯನ್ನು ಗಳಿಸಿಕೊಂಡರು. ವೆಂಕಟಪತಿ ಆಚಾರ್ಯನು ತನ್ನ ಒಡತಿಯನ್ನು ಪತ್ನಿಯ ಪರಿಮುಖ ಮನೆಗೆ ಕರೆಸಿ ನೂರಾರು ರೂಪಾಯಿ ವೆಚ್ಚಮುಟ್ಟಸಿ, ದಿವ್ಯ ಔತಣದಿಂದ ಸಂತೃಪ್ತಿಪಡಿಸಿ, ಊಚುತರದ ವಸ್ತ್ರಾಲಂಕಾರವನ್ನು ಉಚಿತ ವಾಗಿಕೊಟ್ಟು, ತಕ್ಕೈಸಿದನು. ಮಠದ ಹಂಗೀಕರೆಲ್ಲರೂ ಅವಳನ್ನು ಯಥಾನು ಶಕ್ತಿ ಉಪಚಾರಗಳಿಂದ ಮಾನಿಸಿದರು. ತಿಪ್ಪಾಶಾಸ್ತ್ರಿಯು ಇಪ್ಪತ್ತು ಬಗೆಯ ಪಲ್ಯ, ಎರಡು ಬಗೆ ಹುಳಿ, ಎರಡು ಬಗೆ ತೊವೆ. ನಾಲ್ಕು ಬಗೆ ಸಾರು, ಲೆಕ್ಕ ಮಿತಿ ಇಲ್ಲದ ಸಕ್ರೆ ಭಕ್ಷ, ಚಿತ್ರಾನ್ನ, ಕೇಸರಿಭಾತ್‌, ವಿವಿಧ ಕಜ್ಜಾಯ, ಐದು ಬಗೆಯ ಪಾಯಸ, ಯಳಚಿತ ಸಣ್ಣಕ್ಕಿ ಅನ್ನ ಇತ್ಯಾದಿ ಸ್ವಾದವುಳ್ಳ ಪಕ್ವಗಳಿಂದ ತನ್ನ ಬಾಲಾಪ್ಯದ ಗೆಳತಿಯನ್ನು ದಣಿಸಿದನು. ಅವನು ಮಾಡಿದ ಉಡುಗೊರಯು ಸಾಮಾನ್ಯವಾದುದಲ್ಲ. ಸೀಮಂತ ಪ್ರಸ್ತವಾ ದಂದಿನಿಂದ ಪ್ರಸೂತವಾಗುವ ದಿನದ ಪರಿಯಂತ ಅವಳಿಗೆ ಔತಣಕ್ಕೆ ಕರೆ ಬರುವ ಚಂದ ನೋಡಿ ಸಾಕಾಯಿತು. ಗರ್ಭವತಿಯ ಔತಣದ ಹೇತುವಿ ನಿಂದ ಅನೇಕ ಶ್ರ್ರೀಯರು ಅವಳ ಸಂಗಡ ಹೊಟ್ಟೆ ತುಂಬಾ ಉಂಡು ದಣಿ ದರು. ಶ್ರೀಪಾದಂಗಳವರು ದಿನೇ ದಿನೇ ವಾಗ್ದೇವಿಯ ಗರ್ಭಧಾರಣೆಯ ಕುರಿತು ಚಿಂತಾಕ್ರಾಂತರಾದರೂ ಕೊನೆಗೆ ವ್ಯಸನಪಡುವುದು ಹುಚ್ಚುತನ ವೆಂದು ನೆನೆಸಿ, ಅವಳ ಮನಸಾಭೀಷ್ಟವನ್ನು ದೇವರ ಪೂರೈಲೆಂದು ಶುದ್ಧ ಮನಸ್ಸಿನಿಂದ ದೇವರನ್ನು ಬೇಡಿಕೊಂಡರು.

*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...