ಚೆನ್ನೆಯರಿಗೆ ನೀಡಿ ಚೆನ್ನೆಮಣೆ
ಚೆನ್ನೆಯರು ಚೆನ್ನೆಯಾಡುವುದು ಚಂದ

ಕನ್ನೆಯರಿಗೆ ನೀಡಿ ಕನಕಾಂಬರ
ಕನ್ನೆಯರು ಹೂ ಮುಡಿಯುವುದು ಚಂದ

ಕುಮುದೇರಿಗೆ ನೀಡಿ ಪರಿಮಳದ ಪನ್ನೀರ
ಕುಮುದೇರಿಗೆ ಪನ್ನೀರ ಬಿಂದು ಚಂದ

ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ
ಮಕ್ಕಳು ಸಕ್ಕರೆ ತಿನ್ನುವುದು ಚಂದ

ನೀರಲ್ಲಿ ಇಳಿಸಿರಿ ಕಾಗದದ ದೋಣಿಗಳ
ಕಾಗದದ ದೋಣಿಗಳು ಸಾಗುವುದು ಚಂದ

ಆಕಾಶದಿ ಹಾರಿಸಿ ಗಾಳಿ ಪಟವ
ಗಾಳಿಗೆ ಗಾಳಿ ಪಟ ಹಾರುವುದು ಚಂದ

ದೇವರಿಗೆ ಉರಿಸಿ ಗುಟ್ಟದ ದೀಪ
ಗುಟ್ಟದ ದೀಪ ಉರಿಯುವುದು ಚಂದ

ಅಮ್ಮನಿಗೆ ತನ್ನಿ ಹೊಸ ಸೀರೆಯ
ಅಮ್ಮ ಹೊಸ ಸೀರೆಯುಟ್ಟರೆ ಚಂದ

ಅಪ್ಪನಿಗೆ ತನ್ನ ಹೊಸ ಅಂಗಿಯ
ಅಪ್ಪ ಹೊಸ ಅಂಗಿ ತೊಟ್ಟರೆ ಚಂದ

ಹೊಸ್ತಿಲಿಗೆ ರಂಗೋಲಿ ಚಿತ್ರವ ಹಾಕಿ
ಹೊಸ್ತಿಲಿಗೆ ರಂಗೋಲಿ ಚಿತ್ರವು ಚಂದ

ಹಾಲು ಕರೆದ ಮೇಲೆ ಗೋವಿಗೆ ವಂದಿಸಿ
ಗೋವಿಗೆ ವಂದಿಸಿದರೆ ಹಾಲು ಚಂದ

ದೇವರ ಕಂಡರೆ ನಕ್ಕು ಮಾತಾಡಿಸಿ
ನಕ್ಕು ಮಾತಾಡಿಸಿದರೆ ಮೊಗಕೆ ಚಂದ

ನಕ್ಕು ಮಾತಾಡಿಸಿದರೆ ದೇವರಿಗೆ ಚಂದ
*****