
ಚಿಂತೆ ಏತಕೆ ಗೆಳತಿ? ಜೀವ ಭಾವ ಹೆಗಲ ಹೂಡಿ ನೋವು ನಲಿವ ಕೀಲ ಮಾಡಿ ಸಾಗುತಿಹುದು ಬಾಳಿನ ಗಾಡಿ ಮೇಲು ಕೀಳು ಎನುವುದುಂಟೆ? ಹಳಿದು ಉಳಿದ ಹಮ್ಮು ಉಂಟೆ? ಬದುಕೇ ಸಾವಿನ ಒಲೆಯ ಕುಂಟೆ ಇಷ್ಷ ಕಷ್ಟ ಯಾಕೆ ದೂರು? ಈ ಭೂಮಿ ನಾಲ್ಕು ದಿನದ ಊರ ತಾಳಿ ನಿಂತು ...
ಗುರು: “ಮೊಟ್ಟ ಮೊದಲ ಬಾರಿಗೆ ಕಿವಿಗಳನ್ನು ಆಪರೇಷನ್ ಮಾಡಿಸಿಕೊಂಡವರು ಯಾರು?” ಶಿಷ್ಯ:”ರಾಮಾಯಣ ಕಾಲದಲ್ಲಿ ಶೂರ್ಪನಖಿಯ ಕಿವಿಗಳನ್ನು ಕತ್ತರಿಸಲಾಯಿತು. ಅದೇ ಮೊಟ್ಟ ಮೊದಲ ಕೇಸು ಸಾರ್!” ***...
“ಲೋಕದ ಡೊಂಕು” ಸರಿಪಡಿಸದಿದ್ದರೆ ಅಲ್ಲಿ ಬಾಳುವುದೇ ಬಿಗಿಯಾಗುತ್ತದೆ. ಹತ್ತೂ ಕೆಲಸಗಳನ್ನು ಒತ್ತೆಯಿಟ್ಟು ಲೋಕದ ಡೊಂಕು ತಿದ್ದಬೇಕಾದುದು ಅತ್ಯವಶ್ಯ. ಅದ್ದರಿಂದ ಲೋಕದ ಡೊಂಕು ತಿದ್ದುವ ದಾರಿಯನ್ನು ಹೇಳಿಕೊಡಿರಿ” ಎಂದು ಸುಧಾರ...
ಊರ ದಾರಿಯಲಿವಳು ಒಯ್ಯಾರದಿಂದ ನೀರನ್ನು ಹೊರುತಿಹುದೆ ಬಲು ಚೆಂದ ಚೆಂದ ಆಕಾಶ ದಾರಿಯಲಿ ಗಾಂಭೀರ್ಯದಿಂದ ಮೋಡಗಳು ಹೋಗುತಿವೆ ನಾಚಿಕೆಯ ಅಂದ || ಹೂವಿನಂತಹ ಮೈಯ ಇವಳು ಮುಚ್ಚಿಹಳು ಹಚ್ಚನೆಯ ಸೀರೆಯಲಿ ಚೆಲುವ ಮೆರೆದಿಹಳು ಹದವಾದ ಮೈಯನ್ನು ನೆಲದಮ್ಮ ನಾ...
ಡಾ|| ರಾಮಮನೋಹರ ಲೋಹಿಯಾ ಅವರನ್ನು ಕುರಿತು ಬರೆಯುವಾಗ ಹೆಮ್ಮೆ ಎನಿಸುತ್ತದೆ. ಮ್ಶೆಮನಗಳು ಮುದಗೊಳ್ಳುತ್ತವೆ. ಅನ್ಯಾಯದ ಎದುರು ಸೆಟೆದು ನಿಲ್ಲುವ ಅವರ ಸ್ವಾಭಿಮಾನದ ವ್ಯಕ್ತಿತ್ವ ಕಣ್ಮುಂದೆ ಕಟ್ಟುತ್ತದೆ. ನಿಷ್ಠುರ ವಿಚಾರಗಳು ನೆಲೆಗೊಂಡ ಹಸನ್ಮುಖ,...
5.1 ಯಕ್ಷಗಾನದ ತಾಳಗಳು ಮತ್ತು ಹೆಜ್ಜೆಗಳು ದೃಶ್ಯ ಕಾವ್ಯವಾದ ಯಕ್ಷಗಾನದಲ್ಲಿ ಆಂಗಿಕ ಮತ್ತು ವಾಚಿಕ ಎರಡೂ ಮುಖ್ಯ ವಾಗುತ್ತವೆ. ಆಂಗಿಕವೆಂದರೆ ಅಂಗಗಳಿಂದ ರಸಾಭಿವ್ಯಕ್ತಿ ಎಂದರ್ಥ. ಅದರಲ್ಲಿ ನೃತ್ಯ ಮತ್ತು ಅಭಿನಯ ಎರಡೂ ಸೇರಿರುತ್ತದೆ. ವಾಚಿಕವೆಂದರ...
ಇತ್ತೀಚಿನ ದಿನಗಳಲ್ಲಿ ಅಕ್ಕಿಕಾಳಿನ ಮೇಲೆ, ಕೂದಲೆಳೆಯ ಮೇಲೆ ಸೂಕ್ಷ್ಮಆಯುಧಗಳಿಂದ ಅಕ್ಷರಗಳನ್ನು ಬರೆಯುವವರಿದ್ದಾರೆ. ಕೆಂಬ್ರೀಡ್ಜ್ನ ಕೆವೆಂಡೀಶ್ ಪ್ರಯೋಗಾಲಯದ ವಿಜ್ಞಾನಿಗಳು ಇನ್ನು ಮುಂದಕ್ಕೆ ಸಾಗಿ ಒಂದು ಶುಭಾಷಯ ಪತ್ರವನ್ನು ಸಿದ್ಧಪಡಿಸಿದರು. ...
ಯಾವುದು ಸಿಹಿಯೋ ಯಾವುದು ಕಹಿಯೋ ನೀನಿಲ್ಲದೆ ರುಚಿ ಎಲ್ಲಿ? ಯಾವುದು ಸ್ವರವೋ, ಯಾವುಮ ಶ್ರುತಿಯೋ ನೀನಿಲ್ಲದೆ ಅರಿವೆಲ್ಲಿ? ಸುತ್ತ ಇದ್ದರೂ ನದಿ ವನ ಕಾಡು ಆ ಚೆಲುವಿಗೆ ನಾ ಕುರುಡ; ನೀನಿದ್ದರೆ ಮರುಭೂಮಿಯಾದರೂ ಅಮೃತಕೆ ಹಾರುವ ಗರುಡ. ಎಲ್ಲಿದೆ ರುಚಿ...
ಆತ ಅ ರಾತ್ರಿ ಚೆನ್ನಾಗಿ ಕುಡಿದು ದಾರಿಯಲ್ಲಿ ಮನೆಕಡೆಗೆ ಬರುತ್ತಲಿದ್ದ. ತೂರಾಡಿಕೊಂಡು ಬರುತ್ತಿದ್ದ ಅವನನ್ನು ನೋಡಿ ನಾಯಿಗಳು ಬೊಗಳಲು ಆರಂಭಿಸಿದವು. ಭಯಗೊಂಡವನು ಹತ್ತಿರವಿದ್ದ ಮನೆಯೊಂದರ ಬಾಗಿಲು ಬಡಿದ, ‘ಯಾರು?’ ಒಳಗಿನಿಂದ ಹೆಂಗ...
“ಹಿರಿಯರಾರು-ಕಿರಿಯರಾರು ಎಂಬುದನ್ನು ತಿಳಕೊಳ್ಳುವದಕ್ಕೆ ತವಕಪಡುತ್ತಿರುವೆವು. ದಯೆಯಿಟ್ಟು ಆ ವಿಷಯವನ್ನು ವಿವರಿಸಬೇಕು.” ಎಂದು ಜೀವಜಂಗುಳಿಯೊಳಗಿನ ಒಂದು ಜೀವವು ವಿನಯಿಸಿಕೊಂಡಿತು. ಸಂಗಮಶರಣನು ತನ್ನ ಪ್ರಜ್ಞೆಯನ್ನು ಒಂದಿಷ್ಟು ಆಳದ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













