ದಿನ ನಿತ್ಯದ ತಿರುಗುವ ಪುಟಗಳಲ್ಲಿ
ಎಲ್ಲ ಗೊತ್ತಂತಿದ್ದರೂ
ಅದೇಕೋ ದಿನನಿತ್ಯದ ಬದುಕು
ಹೊಸದು, ಬೇರೆ ಬೇರೆ
ಅನುಭವ ಎನ್ನಲೇ?
ವಯಸ್ಸೆನ್ನಲೇ?
ಎಲ್ಲ ಅರ್ಥಗಳಲ್ಲೂ ಇದೆಲ್ಲ ಒಂದೆ
ಇಡುವ ಪ್ರತಿ ಹೆಜ್ಜೆ ಪ್ರತಿ ಉಸುರಿಗೆ
ನೆರಳು ಬೆಳಕಿದೆ
ಸಮುದ್ರದಾಳದಷ್ಟು ಹುದುಗಿರುವ
ಜೀವನ ಪುಟಗಳಲ್ಲಿಯ ಅನುಭವ
ಅರ್ಥೈಯಿಸಿಕೊಳ್ಳುವಲ್ಲಿಯೇ
ನೆರಳು ಬೆಳಕು ಶೂನ್ಯವಾಗುತ್ತದೆ.
ಮತ್ತೆ ಅದೇ ಹೊಸದಿನ ಹೊಸ ಪುಟ
ಶೂನ್ಯದ ಮುಂದೊಂದು ಶೂನ್ಯ-
ಕೂಡುತ್ತಲೇ ಹೋಗುತ್ತದೆ ಕಳೆಯುವುದೆಂದು
ವಯಸ್ಸು ಕಳೆದಂತಯೇ?
ಪರಿಸರ ಕೊಚ್ಚಿಕೊಂಡ ಮೇಲೆಯೇ?
ಎಂದು…..
*****