ಹಸಿವೆ-ನೀರಡಿಕೆಯಲಿ
ಜೀವಂತ ಹೆಣವಾಗುತ
ವಂಚನೆಗೆ ಬಲಿಯಾಗಿ
ಬಳಲುತ… ಬಿದ್ದಿಹರು

ಜಾತಿ-ಧರ್ಮಗಳ-ಭೇದದಲಿ
ದ್ವೇಷ-ಬೆಸೆದು ಭಗ್ನಗೊಳಿಸುತ…
ಬಾಂಧವ್ಯದ ಹಸಿರು ಬಳ್ಳಿಯ
ಕಡಿದು ಬರಡುಗೊಳಿಸಿಹರು

ತಾಳ್ಮೆ-ನೋವುಂಡ ಜೀವಕ್ಕೆ
ಸಹನೆ-ಮೀರಿದ ಬದುಕಿಗೆ
ಕೊನೆ ಹೇಗಾದರೇನು…
ಮಿತಿ ಎಲ್ಲೆಂದು ಕೇಳರು

ಪ್ರೀತಿ-ವಾತ್ಸಲ್ಯಗಳ…
ನಾಚಿಕೆ ಕೋಟೆ ಬಿರಿದು
ಬಿರುಗಾಳಿ ಬೆಂಕಿಯುಗುಳುತ
ಶತ ಶತಮಾನವುಂಡ ದೌರ್ಜನ್ಯ-ನೋವು
ಕಟ್ಟಿಹಾಕಲು ಎದೆಸೆಟೆಸಿ ನಿಂತ ನಮ್ಮವರ

ನೋವಿನ ಕೂಗಿಗೆ ನಕ್ಸಲೈಟೆನ್ನುತ
ತುಳಿತದಿ ನೊಂದು ಮೇಲೇಳುವ ಬದುಕಿಗೆ
ಬೆಂಕಿಯಿಡುತ ಕೊಚ್ಚುವ
ರಕ್ತಾಸುರ… ಬೀಜಾಸುರರು… ನಾವು.

***