Home / ಲೇಖನ / ಇತರೆ / ದೊಡ್ಡವರು ಸಣ್ಣವರಾಗುವುದೇಕೆ?

ದೊಡ್ಡವರು ಸಣ್ಣವರಾಗುವುದೇಕೆ?

ಪ್ರಿಯ ಸಖಿ,
ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ.
ದೊಡ್ಡವರು ಸಣ್ಣವರಾಗುವುದು
ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ
ತಮೆಗೆಲ್ಲ ಗೊತ್ತಿದೆ ಎಂದು ತಿಳಿದುಕೊಂಡಾಗ
ತಮ್ಮ ನಂತರ ಮುಂದೆ
ಪ್ರಲಯವೇ ಎಂದು ಭಾವಿಸಿದಾಗ
ಸಾಮಾನ್ಯವಾಗಿ ಹಿರಿಯರು ನಮ್ಮ ಕಾಲದಲ್ಲಿ ಹೀಗಿತ್ತು ನಮ್ಮ ಕಾಲವೇ ಚೆನ್ನ, ಕಾಲ ಕೆಟ್ಟು ಹೋಯ್ತು, ಮುಂದೆ ಭವಿಷ್ಯವೇ ಕಾಣುತ್ತಿಲ್ಲ ಇತ್ಯಾದಿ ಮಾತನಾಡುತ್ತಿರುತ್ತಾರೆ. ಹಾಗೆಂದು ಬದಲಾವಣೆಯೇ ಇಲ್ಲದೇ ಇರಲು ಬದುಕು ನಿಂತ ನೀರಲ್ಲ. ಈ ದೊಡ್ಡವರು ಹಿಂದೊಮ್ಮೆ ಚಿಕ್ಕವರಾಗಿದ್ದರು ಆಗಲೂ ಅವರ ಹಿರಿಯರು ಇವರನ್ನು ಇದೇ ಮಾತುಗಳಿಂದ ಚುಚ್ಚುತ್ತಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ತಾವೆಲ್ಲ ಎಲ್ಲವನ್ನೂ ಮಾಡಿಬಿಟ್ಟಿದ್ದೇವೆ,  ಬದುಕಿನಲ್ಲಿ ಎಲ್ಲವೂ ನೋಡಿದ್ದೇವೆ. ನಮಗೆ ಪ್ರಪಂಚದ ಆಗು ಹೋಗುಗಳೆಲ್ಲ ತಿಳಿದಿದೆ, ತಮ್ಮ ನಂತರ ಮುಂದೆ ಬದುಕೆಂಬುದಕ್ಕೆ ಅರ್ಥವೇ ಇಲ್ಲ ಎಂದು ಕಿರಿಯರನ್ನು ತಾತ್ಸಾರದಿಂದ ಕಾಣಲಾರಂಭಿಸಿದಾಗ, ದೊಡ್ಡವರು ಸಣ್ಣವರಾಗುತ್ತಾ ಹೋಗುತ್ತಾರೆಂದು ಕವಿ ಹೇಳುತ್ತಾರೆ. ನಂತರ, ಮುಂದುವರಿಯುತ್ತಾ ಹೀಗೆ ಪ್ರಶ್ನಿಸುತ್ತಾರೆ.
ನಿಮ್ಮ ನಂತರ ಬೀಜ ಮೊಳೆಯುವದಿಲ್ಲವೇ ಸ್ವಾಮಿ?
ಸಸಿ ಬೆಳೆಯುವುದಿಲ್ಲವೇ?
ಸೂರ್ಯ ಮೇಲೆದ್ದಾಗ ನೀರು
ಥಳಥಳಿಸುತ್ತ ಹೊಳೆಯುವುದಿಲ್ಲವೇ?
ರವಿಬಿಂಬ ಕಣ್ಣುಗಳ ಕುಕ್ಕುವುದೇ ಇಲ್ಲವೇ?
ಸಖಿ, ಬದುಕು ಎಲ್ಲಿಯೋ ಒಂದು ಕಡೆ ನಿಂತುಹೋಗುವುದಿಲ್ಲ. ಅದು ನಿರಂತರವಾಗಿ ಚಲಿಸುತ್ತಲೇ ಇರುತ್ತದೆ. ಹಾಗೇ ಹೊಸತೆನ್ನುವುದೂ ಇಲ್ಲಿ ಅನಿವಾರ್ಯ. ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗೆ ಹೊಂದಿಕೊಂಡು ಕಾಲನೊಂದಿಗೇ ಮುಂದೆ ಹೋಗುವವನು ವಿವೇಚನಾ ಶೀಲನೆನಿಸಿಕೊಳ್ಳುತ್ತಾನೆ. ಅದು ಬಿಟ್ಟು ನನ್ನ ಕಾಲದ್ದೇ ಸರಿ ಮುಂದಿನ ಬದುಕು ಸರಿಯಲ್ಲ ನಾನು ನಿಂತಲ್ಲೇ ನಿಂತಿರುತ್ತೇನೆ ಎಂದರೆ ಕಾಲ ಅವನನ್ನು ಹಿಂದೆ ತಳ್ಳಿ ತಾನು ಮುಂದೋಡುತ್ತದೆ! ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...