ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೀ ಹುಳ ಹುಪ್ಪಡಿಗಳೇ ಹಾದಿಹೋಕರೆ ಇದು ನಿಮ್ಮೆದೇ Royal Palace ಯಾವ ಅಭ್ಯಂತರವಿಲ್ಲದೆ ವಿಶ್ರಮಿಸಿ ಉಪಹರಿಸಿ. Excuse Brokers *****...

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್...

ದೇವರು ಮಾಡಿರುವ ಮನುಷ್ಯರೇ! ಮನುಷ್ಯರು ಮಾಡಿರುವ ದೇವರೇ! ನಿಮ್ಮ ಹೆಸರೇನು? ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು “ಕೆಲಸಕ್ಕೆ ಬಾರದ ಓದು! ನಿಮ್ಮ ಬುದ್ಧಿಗಳೆಲ್ಲಾ ಹಾಳಾಗಿ ಹೋಗುತ್ತಿವೆ. ನೀವೆಲ್ಲಾ ಬರೀ ಬೌದ್ಧರು.&#8...

ನಮ್ಮ ಮನೆಯ ಪುಟ್ಟ ಬೆಕ್ಕು ಬಿರ್ಜು ಅದರ ಹೆಸರು ಭಾಳ ಇಷ್ಟ ಬಿರ್ಜೂಗೆ ಗಟ್ಟಿ ಹಾಲು ಮೊಸರು. ಬಿರ್ಜುಗಿದೆ ಗಾಜುಗಣ್ಣು ಗೋಲಿಯಂತೆ ಫಳ ಫಳ, ಅದರ ಬಣ್ಣ ಸೇಬಿನ್ಹಣ್ಣು ರೇಶ್ಮೆಯಂತೆ ಥಳ ಥಳ, ಮಲಗಿದ್ದರೆ ಪುಟ್ಟ ಹುಲಿ ಓಡುತಿದ್ರೆ ಚೂಪು ಇಲಿ ರಾತ್ರಿ ಇ...

ಇದೊಂದು ಕೈಲಾಸಂ ರವರ ಜೋಕು: ಒಬ್ಬ ಹುಡುಗ ಜಗುಲಿಯ ಮೇಲೆ ಕುಳಿತು ಅಳುತ್ತಾ ಇದ್ದ. ಶ್ಯಾನುಭೋಗರು ಅವನನ್ನು ನೋಡಿ “ಯಾಕೋ ಮಗು ಅಳುತ್ತಾ ಇದ್ದೀಯಾ?” ಕೇಳಿದರು. “ನಮ್ಮಪ್ಪ ಸುತ್ತಿಗೇಲಿ ಗೋಡೆಗೆ ಮಳೆ ಹೊಡೆಯುತ್ತಾ ಇದ್ದಾಗ ಗುರ...

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗವ ಬಿಟ್ಟು, ನಡಿದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟ ಕೂಟ ಜಗದಾಟ ಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯ ಅಪ್ಪಣಪ್ರಿಯ ...

ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ ಆ ಬಿಳಿಮಹಲಿನ ಹೂಹಾಸಿಗೆಯೊಳು ಉರುಳಾಡಿ ದಣಿಯಿತು ಕಗ್ಗಲ್ಲ ಹರಳು ಈ ಸೆರೆಗುಡಿದ, ಸೆರಗ ಹಿಡಿದ, ಭಂಗಿ ಸೇದಿ, ಮಾಂಸ ಭುಂಜಿಸಿದ ದೇಹದೊಳ...

ಚಿತ್ರದುರ್ಗ ಅಂದರೆ ಜನತೆಯ ಕಂಗಳ ಮುಂದೆ ಮೂಡಿ ಬರುವ ವ್ಯಕ್ತಿಗಳು ಗಂಡುಗಲಿ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಸುಮಾರು ೧೩ ಮಂದಿ ಪಾಳೆಗಾರರು ದುರ್ಗವನ್ನಾಳಿದರೂ ನಾಡಿನ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದವರು ಮಾತ್ರ ಇಬ್ಬರೆ. ದುರ್ಗದ ...

ದೇವರು ಪ್ರತ್ಯಕ್ಷವಾಗಿ ಮೂರು ವರ ಕೇಳಲು ಬೇಡುವೆನು ಬಾಳ ಹಸನ ಮಾಡು ಬಡ‘ವರ’ ದೈವ ಅನುಗ್ರಹವ ಕೊಡು ಸುರ‘ವರ’, ಕಲ್ಯಾಣ ಮಸ್ತು ಕೈ ಹಿಡಿದು ವಧು‘ವರ’! *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....