ಅಧ್ಯಾಯ ಹದಿನಾರು ಆಚಾರ್ಯರೂ, ರನ್ನಳೂ ಸುದ್ದಿಯನ್ನು ತಿಳಿದು ಗಾಬರಿಗಾಬರಿಯಾಗಿ ಆಶ್ರಮಕ್ಕೆ ಓಡಿಬಂದರು. ಆಚಾರ್ಯರು ನೋಡುತ್ತಾರೆ. ಯತಿ ಇನ್ನಾರೂ ಅಲ್ಲ. ಶಾಂಭವಾನಂದ. ಅಲ್ಲಿ ಆಚಾರ್ಯರನ್ನು ಕಂಡು ಅವರಿಗೂ ಆಶ್ಚರ್ಯವಾಯಿತು. “ಇದೇನು ಶಾಮಣ್ಣ ; ಇಲ್...

ಎಷ್ಟು ಗ್ರಂಥಗಳ ಓದಿದರೇನು ಪುರಾಣ ವೇದ ಪಠಿಸದರೇನು ಅಂತರಂಗ ಶುದ್ಧವಾಗಿರದೆ ಬಾಳಿಗೆ ಇನ್ನೊಂದು ಅರ್ಥವೇನು ಕಾಮಕ್ರೋಧ ಮನದಿ ಅಳಿದಿಲ್ಲ ಹೆರವರು ನನ್ನವರೆಂಬದು ತಿಳಿದಿಲ್ಲ ನಿತ್ಯವೂ ಸ್ವಾರ್ಥಗಳಲಿ ತೇಲಿ ನಿಸ್ವಾರ್ಥದ ಅರ್ಥವೇ ತಿಳಿದಿಲ್ಲ ಜನ ಮೆಚ್...

ಆದಿನ ನಮ್ಮೂರ ಬಯಲಿನಲ್ಲಿ ನಡೆಯಲಿತ್ತು ತಾಳಮದ್ದಲೆ ಚಿಕ್ಕಮಕ್ಕಳಿಂದ ವೃದ್ಧರವರೆಗೂ ಎಲ್ಲರ ಗಮನ ಅತ್ತಲೆ ತಾಳ ಮದ್ದಲೆಯ ಬಗೆಗೆ ಊರವರ ಪಿಸುಮಾತು ನನಗೂ ಆಸೆ ಹುಟ್ಟಿತು ತಾಳ ಮದ್ದಲೆ ಕೇಳುವ ಕುರಿತು ಆಸೆಯಿಂದ ಹಿಡಿದೆ ತಾಳ ಮದ್ದಲೆ ನಡೆಯುವ ಬಯಲಿನ ಹ...

ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ ಪ್ರಾಕೃತದ ಸ್ಮೃತಿಯಂತೆ ಹೋದಲ್ಲಿ ಬರುವ ತಾಳೆ ಮರವೇ ದಾರಿಯುದ್ದಕ್ಕೂ ಜತೆಗಾರ ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ ಯಾಕಿಲ್ಲ ಪ್ರಮಾಣ ಹಾಗೂ ವ್ಯಾಕರಣ ನಿನ್ನ ತಾಡಪತ್ರಗಳ ನಿಗೂಢ ಸಂಜ್ಞೆಗಳಲ್ಲಿ ಕೇವಲ ಗೆರೆಗಳ...

ಜಡಜಡವನೆಳದಾಡಿ ಮನಮನವ ತಾಗಿಸುತ ಕರ್ಮದೊಡ್ಡಿನೊಳಿಹವ ನೂನೂಗುತಿರುವ ಜೀಯ ನಿಮ್ಮ ಹಸಾದರೆಂಬರುರವಟೆಯೊಳಗೆ ಸಾಗುವರಸರ ವಿಭವದುತ್ಸವದ ತೆರವ ಕಂಡು ಕುಶಲವ ಪಡದ ಕಂಗಳಿವು ಹೊಂಗುವುವು ತುರೀಯೋಪಾಂತ್ಯದೊಳು ವಿವರಿಸುತಲಿರುವ ಯಾತ್ರಿಕರ ಕಾಣುತ್ತ,-ಹಗುರಾದ...

ಧರ್ಮದ ಠೇಕೆದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು. ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು. ಧರ್ಮದ ರಾಜಕೀಯದಲ್ಲಿ ಅಧರ್ಮದ ಕತ್ತಿ ಝಳಪಿಸುವ ಗುಜರಾತನು ಕಣ್ಣಾರೆ ಕಂಡಿದ...

ಬೆಂಗಳೂರೆಂಬ ದೊಡ್ಡ ಪಟ್ಟಣದಲ್ಲಿ ಬಲು ದೊಡ್ಡ ಮಠವಿತ್ತು. ಒಂದು ದಿನ ಒಬ್ಬ ಸನ್ಯಾಸಿ ಮಠದೊಳಕ್ಕೆ ಐದಾರು ಶಿಷ್ಯರೊಂದಿಗೆ ಗೂಳಿ ನುಗ್ಗಿದಂತೆ ನುಗ್ಗಿ ಬಂದ, ಮಠದಲ್ಲಿದ್ದವರೆಲ್ಲ ಗಾಬರಿಯಾದರು. “ಸ್ವಾಮಿಗಳೆ ತಾವು ಯಾರು? ನಿಮಗ್ಯಾರು ಬೇಕಾಗಿ...

ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ...

1...1819202122...110

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...