ನಾನು ಕನಸುಗಳ ಕಾಣುವುದು ಬಿಟ್ಟಿದ್ದೇನೆ ಯಾಕೆಂದರೆ ಕನಸಿನ ಲೋಕವೇ ನನ್ನದಾಗಿದೆ. ಎಳೆ ಬಿಸಿಲು ಬಿಂಬಿಸುವ ಸೂರ್ಯನ ಕೆಂಪಡರಿದ ನೀಲ ಬಾನತುಂಬ ದಿನಾಲು ಬೆಳ್ಳಕ್ಕಿಗಳು ಹಾರುತ್ತಿವೆ. ಮನೆಯ ಮುಂದಿನ ಪುಟ್ಟ ಗಿಡಗಳಲಿ ಹೂವರಳಿ ದಿವ್ಯ ಮೌನದಲಿ ದಿನಾಲೂ ...

ಹಸಿರ ಬಾಂದಳದ ನಡುವೆ ನಸುನಾಚಿದ ನೇಸರದಾಗೆ ಉಷೆಯ ಬೆಡಗಿನಂದದಲಿ ಚಿತ್ತಾರವೆಸಗೆ ಮೂಡಿಹುದು ಕನ್ನಡ ಹೊಸತನದ ಸೆಲೆಯಲಿ ಕೆಳೆಯಾಗಿ ನಿಲುವುವಂದದಿ ಛಲವೆಸೆದ ಸೊಬಗ ನೆಲೆ ವಸುಮತಿಯ ಬೆರೆತ ಭಾವದಾ ಸುಧೆಯಾಗಿ ಮೂಡಿಹುವುದು ನೋಡ ಕನ್ನಡ ಬಾಳೆಗರಿಮೆಯ ಪರಿವ...

ದೇವರ ತಾಣವೆಲ್ಲಿ! ಎಂದು ಅರಸುತ್ತ ಪಯಣವಿದು ಸಾಗುತ್ತಿದೆ ದೇವರೆಡೆಗೆ ಬದುಕು ಇದು ಭವಪಾಶದತ್ತ ಸಾಗುವಾಗ ಆತ್ಮವಿದು ವಾಲುತ್ತಿದೆ ತನ್ನ ಒಡೆಯನಡೆಗೆ ಸುಖ ಸುಖ ಸುಖವೆಂದು ಅನವರತವು ಹೋರಾಡುತ್ತಿರುವೆ ಆಸೆಗಳೊಂದಿಗೆ ನೀನು ಆಸೆಗಳೆ ನಿನ್ನ ಮೃತ್ಯ ಕೂಪ...

ರಾಮರಾಯನು ಪ್ರತಿನಿತ್ಯವೂ ಶಂಕರರಾಯನ ಕಾ ಗದವನ್ನೆ ನಿ ರೀ ಕ್ಷಿಸುತ್ತಿದ್ದನು. ಮಾಧವನು ರಾಂಪುರದಿಂದ ಪುನಹೆಗೆ ಹೋದಮೇಲೆ ೧೦-೧೨ ದಿನಗಳವರೆಗೂ. ನೋಡಿದರೂ ಉತ್ತರ ಬರಲಿಲ್ಲ. ಅನಂತರ ಒಂದು ತಗಾದೆಯ ಕಾಗದವನ್ನು. ಬರೆದು ಟಪ್ಪಾ ಲಿಗೆ ಹಾಕಿದಮೇಳೆ ಏನೋ ...

ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇ...

೧ ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ ನೆನಹು ನಿಡುಸುಯಿಲುಗಳ ಕರೆಯುತಿದೆಯೆ? ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ! ೨ ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ ಎಳಗಲ್ಲಗಳ ...

ಕೆಟ್ಟು ಒಳ್ಳೆಯವನು ಎಂದೆನಿಸಿಕ್ಕೊಳ್ಳುವುದಕಿಂತ ಪೆಟ್ಟುತಿಂದು ಜಾಣನಾಗುವುದಕ್ಕಿಂತ | ಹಾಗೆಯೇ ಎನ್ನ ಒಳ್ಳೆಯವನೆಂದೆನಿಸು ಛೀ…ಥೂ ಎಂದೆನಿಸದೆ ಎನ್ನ ನೀ ಬೆಳೆಸು|| ಕೆಟ್ಟಮೇಲೆ ಬುದ್ಧಿ ಬರುವುದಕ್ಕಿಂತ ಕೈಸುಟ್ಟಮೇಲೆ ಅರಿವುಮೂಡುವುದಕ್ಕಿಂತ...

ಯಾರ ಜೊತೆ ಆಡಲಿ? ಯಾರ ಜೊತೆ ಮಾತಾಡಲಿ? ಕಾಲಿಟ್ಟ ಕಡೆಯಲ್ಲಿ ಹುಟ್ಟುತಿವೆ ಗೋಡೆಗಳು! ಗೋಡೆಗಳ ತಡಕಿದರೆ ಕಿಟಕಿ ಕಂಡಿಗಳಿಲ್ಲ ಎತ್ತ ಸುತ್ತಿದರೂ ಇಲ್ಲಿ ಬಾಗಿಲುಗಳೇ ಇಲ್ಲ! ಸಾಲು ಗೋಡೆಗಳಲ್ಲಿ ನೋವು ತುಂಬಿದ ನಾವು ಕೂಗಿ ಕರೆದರೂ ಇಲ್ಲಿ ಉತ್ತರವೇ ಇಲ...

ಯಾರಿವರು ಈ ನಂಜನಗೂಡು ತಿರುಮಲಾಂಬಾ ? ಇವರೇ ಹೊಸಗನ್ನಡ ಸಾಹಿತ್ಯದ ಮೊದಲ ಕವಯತ್ರಿ, ಕಾದಂಬರಿಗಾರ್ತಿ, ಪತ್ರಕರ್ತೆ, ಪ್ರಕಾಶಕಿ ಏನೆಲ್ಲಾ. ಅಬ್ಬಾ! ೧೯ನೇ ಶತಮಾನದ ಅಂತ್ಯದಲ್ಲಿಯೇ ಒಬ್ಬ ಹೆಣ್ಣುಮಗಳು ಇಷ್ಟೆಲ್ಲಾ ಮಾಡಲು ಅವಕಾಶವಿತ್ತೆ? ಅನ್ನಿಸುವುದ...

ಮಳೆರಾಯ ನೀ ಅಡಗಿರುವಿ ಎಲ್ಲಿ? ಕೇಳಿ ನಮ್ಮಯ ಮಾತು ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ. ಅಲ್ಲೇನ್ ಮಾಡುವಿ ಕೂತು ರೈತರು ಬಿತ್ತನೆ ಮಾಡಿ ಮುಗಿಯಿಸಿ ಪೈರನು ಕಾಯುವ ದಿನ ನೀರಲಿ ಆಡುವ ಬಯಕೆ ನಮ್ಮದು ಹಸಿರು ಬೆಟ್ಟ ನೋಡೆನು ಕುಡಿಯುವ ನೀರಿಗೆ ಬಂದಿದೆ ಕ...

1...3637383940...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...