ಹಸಿರ ಬಾಂದಳದ ನಡುವೆ
ನಸುನಾಚಿದ ನೇಸರದಾಗೆ
ಉಷೆಯ ಬೆಡಗಿನಂದದಲಿ
ಚಿತ್ತಾರವೆಸಗೆ ಮೂಡಿಹುದು ಕನ್ನಡ

ಹೊಸತನದ ಸೆಲೆಯಲಿ
ಕೆಳೆಯಾಗಿ ನಿಲುವುವಂದದಿ
ಛಲವೆಸೆದ ಸೊಬಗ ನೆಲೆ
ವಸುಮತಿಯ ಬೆರೆತ ಭಾವದಾ
ಸುಧೆಯಾಗಿ ಮೂಡಿಹುವುದು ನೋಡ ಕನ್ನಡ

ಬಾಳೆಗರಿಮೆಯ ಪರಿವೆ
ಸಪ್ತಪದಿ ಕಲೆಯ ರಂಗೋಲಿ
ಎಳೆ‍ಎಳೆಯಾಗಿ ಚುಕ್ಕು
ಅಂದದ ರೂಪದಲಿ ಸುರುಳಿ ಸುತ್ತ
ಗಾದಿಯಲಿ ಮೂಡಿಹುವುದು ನೋಡ ಕನ್ನಡ
*****