ಮೆಲ್ಲ ಮೆಲ್ಲ ಬರುವ ನಲ್ಲ ಬಾಲೆ ಜಡೆಯ ಬಾಚಿಕೊ ||ಪಲ್ಲ|| ಅವನು ಬರುವ ಬಂದೆ ಬರುವ ಏನು ತರುವ ನೋಡಿಕೊ ನಿನ್ನ ಮುಡಿಯ ಉಡಿಯ ನಡೆಯ ನಿನಗೆ ನೀನೆ ಮಾಡಿಕೊ ||೧|| ಮಧುರ ಗಲ್ಲ ಬೆವರ ದಂತೆ ಗಂಧ ಲೇಪ ತೀಡಿಕೊ ತುಟಿಯ ರಂಗು ತೀರದಂತೆ ರಸದ ರಂಗು ತುಂಬಿಕೊ...

ಅವನೊಬ್ಬ ಸೋಂಬೇರಿ, ಸತ್ತ ಕೋತಿಯ ಶವ ಅವನ ಹೊಟ್ಟೆ ಹಸಿವಿಗೆ ಅಧಾರ ಮಾಡಿಕೊಳ್ಳುತ್ತಾನೆ. ಬಿಳಿಯ ಬಟ್ಟೆಯ ಮೇಲೆ ಕೋತಿಯ ಶವವಿಟ್ಟು ಅದಕ್ಕೆ ಅರಿಶಿನ, ಕುಂಕುಮ, ಹೂವಿಟ್ಟು “ಶವ ಸಂಸ್ಕಾರ ಮಾಡಬೇಕು ಕಾಣಿಕೆ ಹಾಕಿ” ಎಂದು ಬಾಯಿ ಒಣಗಿಸಿಕ...

ಹಸಿವಿನ ಮುಖವಾಡ ಮುಖವೇ ಎನಿಸುವಷ್ಟು ಸಹಜ ಕಲಾತ್ಮಕ, ಅವಿವೇಕಿ ರೊಟ್ಟಿಗೆ ಅರಿಯಲು ಆಗಿಯೇ ಇಲ್ಲ ಯಾವುದು ನಿಜ ಯಾವುದು ನಾಟಕ. ಹಸಿವಿನ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ಕೇಳಿಯೇ ರೊಟ್ಟಿ ಮಂತ್ರಮುಗ್ಧ. *****...

ಬಾರೋ ವಸಂತ ಬಾರೋ || ಬರಿದಾದ ಈ ಮನಕೆ ಮುದವ ನೀ ನೀಡಲು| ಬಾರೋ ವಸಂತ ಬಾರೋ ಈ ವಸುಂಧರೆಯ ನವ ವಧುವಾಗಿಸೆ ರೇಷಿಮೆ ನವ ವಸ್ತ್ರವಾಗವಳ ಸಿಂಗರಿಸೆ|| ಕಾದಿರುವೆ ನಿನಗಾಗೆ ಹಂದರವ ಅಣಿಮಾಡಿ| ಆಲಿಸಲು ಕುಳಿತಿರುವೆ ಕೋಗಿಲೆಯ ಗಾನ ಇಂಚರವ, ಹೂ ದುಂಭಿಗಳ ಝ...

ಸಭೆ, ಸಮಾರಂಭಗಳಿಗೆ ಬಂದವರಿಗೆ ಬಗೆಬಗೆಯ ಪಾಕಗಳನ್ನು ಬಡಿಸಲಾಗುತ್ತದೆ. ಅಲ್ಲಿನ ವಿಶೇಷ ತಿಂಡಿಗಳಾದ ಜಿಲೇಬಿ, ಲಡ್ಡುಗಳು ಆಕರ್ಷಕವಾಗಿ ಕಾಣಲು ಮೆಟಾನಿಲ್ ಎಲ್ಲೋ, ಲೆಡ್ ಕ್ರೋಮೈಟ್, ರೋಡಾಮೈನ್ ಮುಂತಾದ ಬಣ್ಣಗಳನ್ನು ಅನಧಿಕೃತವಾಗಿ ಉಪಯೋಗಿಸಲಾಗುತ್ತ...

ಬೆಳಕೀವ, ಬದುಕೀವ, ಎಲ್ಲ ಜೀವ ದೊಳಗಣ ಜೀವ, ಸೂರ್‍ಯ ದೇವನೆ ತಾ ಬಿಸಿಯಾಗಿ ಬಲು ಬತ್ತಿಸುವ ನೀರ ಹೊತ್ತಿಸುವ ಹಸುರ ಬಾಳಿನೊಳು ನೋವಿರದ ನಲಿವು ಕೊಡುವೊಡೆ ಸೋಲುತಿಹ ದೇವನೊಲವಿನೊಳಿಪ್ಪೆನ್ನ ಮಾತೇನು ? – ವಿಜ್ಞಾನೇಶ್ವರಾ *****...

ಆ ಹಕ್ಕಿ ಈ ಹಕ್ಕಿ ಯಾವುದೋ ಒಂದು ತಿರುವಿನಲ್ಲಿ ಸಿಕ್ಕಿ ಮೊದಲ ನೋಟದ ಮಾತ್ರದಲಿ ಮನಸು ಕೊಟ್ಟುಕೊಂಡು ತಮ್ಮದೇ ಆದೊಂದು ಗೂಡನ್ನು ಎಬ್ಬಿಸುವ ಕನಸನ್ನು ಕಾಣುತ್ತ ಸಂಭ್ರಮದಿ ಓಲಾಡತೊಡಗಿದ್ದವು. ಮತ್ತೊಂದು ತಿರುವಿನಲಿ ಮುನಿದ ಪರಿಸರದೆದುರು ಜೀವದಾಟವು...

ರಾಜಕೀಯ ಮುಖಂಡರು ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ ಕಷ್ಟ ಸುಖಗಳನ್ನು ವಿಚಾ...

ಅವನು ಹಾಗೆಯೆ ಮಾತಿನಿಂದ ಮೈಥುನದವರೆಗೆ ಎಲ್ಲವೂ ಹಿತಮಿತ ತೂಕದ ವ್ಯವಹಾರ ಅರವತ್ತರ ಇಳಿವಯಸ್ಸಿನಲ್ಲೂ ಕಪ್ಪನೆಯ ಒತ್ತಾದ ಕೂದಲು ಉಬ್ಬರಿಸದ ಹೊಟ್ಟೆ ಸಂಯಮ ಫಲ ಇವನದು ಆತಿಯೆ ಆಡಂಬರ ಮೋಸ ದಗಾ ವಂಚನೆಯಲಿ ಹೆಚ್ಚು ಗೊಂದಲವಿಲ್ಲ ತುಂಬಿದ ಸಂಸಾರ ಹೆಣ್ಣು...

1...9596979899...111

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....