ಅವನೊಬ್ಬ ಸೋಂಬೇರಿ, ಸತ್ತ ಕೋತಿಯ ಶವ ಅವನ ಹೊಟ್ಟೆ ಹಸಿವಿಗೆ ಅಧಾರ ಮಾಡಿಕೊಳ್ಳುತ್ತಾನೆ. ಬಿಳಿಯ ಬಟ್ಟೆಯ ಮೇಲೆ ಕೋತಿಯ ಶವವಿಟ್ಟು ಅದಕ್ಕೆ ಅರಿಶಿನ, ಕುಂಕುಮ, ಹೂವಿಟ್ಟು “ಶವ ಸಂಸ್ಕಾರ ಮಾಡಬೇಕು ಕಾಣಿಕೆ ಹಾಕಿ” ಎಂದು ಬಾಯಿ ಒಣಗಿಸಿಕೊಂಡು ಅಂಗಲಾಚಿ ಬೇಡುತ್ತಾನೆ. ಒಂದು ಗಂಟೆಯೊಳಗೆ ಕಾಣಿಕೆಯಿಂದ ಜೋಬು ತುಂಬುತ್ತದೆ. ಕೋತಿಯ ಶವವನ್ನು ಅನಾಥವಾಗಿ ಬಿಟ್ಟು ಹೋಟಲಿಗೆ ಹೋಗಿ ಬಿರಿಯಾನಿ ತಿಂದು ತೇಗುತ್ತಾನೆ.
*****