ಮೆಲ್ಲ ಮೆಲ್ಲ ಬರುವ ನಲ್ಲ

ಮೆಲ್ಲ ಮೆಲ್ಲ ಬರುವ ನಲ್ಲ
ಬಾಲೆ ಜಡೆಯ ಬಾಚಿಕೊ ||ಪಲ್ಲ||

ಅವನು ಬರುವ ಬಂದೆ ಬರುವ
ಏನು ತರುವ ನೋಡಿಕೊ
ನಿನ್ನ ಮುಡಿಯ ಉಡಿಯ ನಡೆಯ
ನಿನಗೆ ನೀನೆ ಮಾಡಿಕೊ ||೧||

ಮಧುರ ಗಲ್ಲ ಬೆವರ ದಂತೆ
ಗಂಧ ಲೇಪ ತೀಡಿಕೊ
ತುಟಿಯ ರಂಗು ತೀರದಂತೆ
ರಸದ ರಂಗು ತುಂಬಿಕೊ ||೨||

ಬರುವನೆಂದ ಮೇಲೆ ಬರುವ
ನಿನ್ನ ನೀನು ನೋಡಿಕೊ
ನಿಲುವು ಗನಡಿ ನಿಂತು ನೋಡಿ
ಅಂಜದಂತೆ ಆಡಿಕೊ ||೩||

ಬಂದ ಗಳಿಗೆ ಜಾರದಂತೆ
ತೆರೆದ ಕಣ್ಣು ತೀಡಿಕೊ
ಬಂದ ನಲ್ಲ ಹೋಗದಂತೆ
ಎದೆಯ ಗುಡಿಯು ಕೂಡಿಕೊ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರ್‍ದಯಿ
Next post ಕಣ್ಣಿಗೆ ಬಿದ್ದು

ಸಣ್ಣ ಕತೆ