ನೀವು ನಗೆ ದೀವಟಿಗೆಗಳನ್ನು ಖರೀದಿಸುತ್ತೀರಾ? ನೀವು ಚಿಗಿತ ಆಸೆಗಳನ್ನು ಖರೀದಿಸುತ್ತೀರಾ? ನೀವು ಕುಪ್ಪಳಿಸುವ ಕನಸುಗಳನ್ನು ಖರೀದಿಸುತ್ತೀರಾ? ಹಾಗದರೆ ನಮ್ಮಲ್ಲಿಗೆ ಬನ್ನಿ. ನಮ್ಮಲ್ಲಿ ಲಾಟರಿ ಟಿಕೇಟು ಮಾರುವ ಪುಟ್ಟ ಹುಡುಗರಿದ್ದಾರೆ. ಕಣ್ಣಲ್ಲೆ ಕ...

ಕೆಲವರದ್ದು: ಹೊಚ್ಚ ಹೊಸ ಹಸಿರುಟ್ಟ ಮೈತುಂಬ ಬೆಳ್ಳಿ ಮಲ್ಲಿಗೆಯ ಮುಡಿದ ನವಿರುಬಳ್ಳಿ ಹಲವರದ್ದು: ಮೈತುಂಬ ಮುಳ್ಳು ನಿಮಿರಿಸಿ ನಿಂತ ಮೈಲಿ ಮುಖದ ಪಾಪಸು ಕಳ್ಳಿ ಸುತ್ತ ಮುತ್ತಲೂ ಬಿಸಿ ತಾಗಿಸುವ ಬೆಂಕಿಕೊಳ್ಳಿ. *****...

ಅವ್ವ ತಾಯೆ ಅಬ್ಬೆ ಆಯೆ ಎತ್ತು ಬಿದ್ದಿಹ ಕೂಸನು | ತಾಯಿ ಸಿಕ್ಕಳು ದೇವಿ ಸಿಕ್ಕಳು ಮಾಯಿ ಸಿಕ್ಕಳು ನಿಜವತಿ ನೂರು ಕಾಲಾ ತೂರಿ ಬಂದಾ ಅವ್ವ ತಾಯಿ ಗುಣವತಿ ಯಾಕೆ ಹೆತ್ತಳು ಯಾಕೆ ಹೊತ್ತಳು ಯಾಕೆ ಬಿಟ್ಟಳು ಹೋದಳು ಎನಿತು ಅತ್ತರು ಎನಿತು ಕರೆದರು. ಎನಿ...

ಅದು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಗರದ ಬಹಳ ಹಳೆಯದಾದ ಅಭಿನಯ ರಂಗ ತಂಡವು ತನ್ನ ೨೫ನೇ ವರ್ಷದ ರಂಗ ವಾರ್ಷಿಕ ಉತ್ಸವದ ಅಂಗವಾಗಿ ತನ್ನ ರಂಗ ಕಲಾವಿದರು, ತನ್ನ ಗರ್ಭದ ರಂಗ ಕುಡಿಗಳಾದ ವಿಜಯ ಕಾಶಿ ಹಾಗೂ ಸಂಕೇತಕಾಶಿ, ನಾಡು ಕಂಡ ಪ್ರತಿಭಾವಂತ ...

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ ಹಾದು ಬಂದಿದ್ದೇನೆ ಬಡಿದು ರೆಕ್ಕೆ ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ ಮಾಗಿ ಮಲಗಿರುವ೦ಥ ಚಿತ್ತ ...

ದಿನಾ ಬರುವ ಪ್ಯಾಕೆಟ್ ಹಾಲಿನ ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ ಎದುರು ಮನೆಯ ಬಾಡಿಗೆ ಹುಡುಗರ ದಂಡು ಆಯಾ ಮಾಡುವ ಚಹಾಕ್ಕಾಗಿ ಕಾದು ಕುಳಿತಿದ್ದಾರೆ. ಮೂಲೆ ಮನೆಯ ಗೇಟಿಗೆ ಒರಗಿ ನಿಂತ ಅವ್ವಯಾಕೋ ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟ...

ವೃದ್ಧಾಶ್ರಮಕೆ ತಂದೆ ತಾಯಿಯರನು ಅಟ್ಟಿದ ಕಾರ್ಪೆಟ್ ಮನೆಗಳಲಿ ಏರ್‍ ಕಂಡೀಶನ್ ಕಾರುಗಳಲಿ ಭಕ್ಷ್ಯ ಬೋಜನಗಳ ಅಡುಗೆಮನೆಯಲಿ ನಾಯಿಗಳದದೆಷ್ಟು ದರ್ಬಾರು! ದೇವ ದೇವಾ ನಿನ್ನ ಮಹಿಮೆ ವಿಚಿತ್ರ ಕಾಣಾ!! *****...

1...3233343536...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....