ಪ್ರಾರ್ಥನೆ

ನೀವು ನಗೆ ದೀವಟಿಗೆಗಳನ್ನು
ಖರೀದಿಸುತ್ತೀರಾ?
ನೀವು ಚಿಗಿತ ಆಸೆಗಳನ್ನು
ಖರೀದಿಸುತ್ತೀರಾ?
ನೀವು ಕುಪ್ಪಳಿಸುವ ಕನಸುಗಳನ್ನು
ಖರೀದಿಸುತ್ತೀರಾ?
ಹಾಗದರೆ ನಮ್ಮಲ್ಲಿಗೆ ಬನ್ನಿ.
ನಮ್ಮಲ್ಲಿ ಲಾಟರಿ ಟಿಕೇಟು
ಮಾರುವ ಪುಟ್ಟ ಹುಡುಗರಿದ್ದಾರೆ.
ಕಣ್ಣಲ್ಲೆ ಕಟ್ಟಿ ಹಾಕುತ್ತಾರೆ.
ಪ್ರೀತಿಯಿಂದ ಅಂಟಿಕೊಳ್ಳುತ್ತಾರೆ.
ಆಸೆ-ಕನಸುಗಳನ್ನು ಹರವಿ
ಬೆಲೆ ಮಂಡಿಸುತ್ತಾರೆ.
ಒಂದು ರೂಪಾಯಿ ತೆತ್ತು ಖರೀದಿಸಿದರೆ
ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತಾರೆ.
ಶುಭ ಹಾರೈಸುತ್ತಾ ಬೀಳ್ಕೊಡುತ್ತಾರೆ.

ಅಂತೆಯೆ…
ಒಮ್ಮೆ ನಮ್ಮಲ್ಲಿಗೆ ಬನ್ನಿ.
ನಮ್ಮ ಹುಡುಗರ ತುಟಿಯಂಚಿನ
ನಗೆಯನ್ನು ಖರೀದಿಸಿ.
ನಮ್ಮ ಹುಡುಗರ ಕಣ್ಣಂಚಿನ
ಕನಸುಗಳನ್ನು ಖರೀದಿಸಿ.
ನಮ್ಮ ಹುಡುಗರ ಮೋರೆಯಲ್ಲಿ
ಚಿಗಿತ ಆಸೆಗಳನ್ನು ಖರೀದಿಸಿ.
ನಮ್ಮ ಹುಡುಗರ ನಾಳೆಗಳನ್ನು
ನಿಮ್ಮ ಜೇಬುಗಳಲ್ಲಿ
ಭದ್ರಪಡಿಸಿ ಸಂರಕ್ಷಿಸಿ.


Previous post ಮನಸ್ಸು
Next post ಕ್ರಾಂತಿ ಹರಿಕಾರ ಸುಭಾಷ ಚಂದ್ರ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…