ಕ್ರಾಂತಿ ಮಂತ್ರದ ಹರಿಕಾರ
ನಿಷ್ಕಪಟ ಮನದ ನೇತಾರ
ಉಕ್ಕಿಸಿದ್ದ ಯುವಮನದಿ
ಸ್ಪೂರ್ತಿ ಸಹಕಾರ

ಜೈ ಹಿಂದ ಜೈಕಾರ
ಜನಸಾಗರದಿ ಝೇಂಕಾರ
ಜನಮನದಿ ಅಳಿಯದೇ
ಜನಜನಿತ ನಿರಂತರ

ಸ್ವರಾಜ್ ಪಕ್ಷದ ಉದಯ
ನಿನ್ನ ತತ್ವದ ವಲಯ
ಬೆಳೆಸಿತ್ತು ಜನರಲ್ಲಿ
ಸ್ವಾತಂತ್ರ್‍ಯ ವೆಂಬ ಮತ್ತು ಬಲೆಯ
ಭುಗಿಲೆದ್ದ ಬೆಂಕಿಯದು
ಅಜಾದ ಹಿಂದ ಫೌಜ್
ಹೊರನಾಡ ನೆಲೆಯಲ್ಲಿ
ನಿನ್ನ ಜಯದ ಬೇಟೆಯಲಿ

ಕಂಚಿನ ಕಂಠಕ್ಕೆ ಮರುಳಾಗಿ
ಯುವ ಹೃದಯ ಮನದಿಂದ
ಮೊಳಗಿತ್ತು ಕರೆದು ‘ನೇತಾಜಿ’
ಅನ್ವರ್ಥಕದ ಬಿರುದು

ಉಗ್ರಾಗಾಮಿಯ ಗತ್ತು
ಪರಮವೈರಿಗೆ ಕುತ್ತು
ನಡೆದಿತ್ತು ತೆರೆಮರೆಯ
ಮರಣ ಮಸಲತ್ತು
ವಾಯುಯಾನದ ವೇಳೆ
ಪ್ರಾಣ ವಾಯುವ ಕೇಳೆ
ಮರಣ ದೈತ್ಯ
ಆದರೂ ಅದು ನಿಗೂಢ ಸತ್ಯ

*****

ನಾಗರೇಖಾ ಗಾಂವಕರ