ಅವ್ವ ತಾಯೆ ಅಬ್ಬೆ ಆಯೆ
ಎತ್ತು ಬಿದ್ದಿಹ ಕೂಸನು |

ತಾಯಿ ಸಿಕ್ಕಳು ದೇವಿ ಸಿಕ್ಕಳು
ಮಾಯಿ ಸಿಕ್ಕಳು ನಿಜವತಿ
ನೂರು ಕಾಲಾ ತೂರಿ ಬಂದಾ
ಅವ್ವ ತಾಯಿ ಗುಣವತಿ

ಯಾಕೆ ಹೆತ್ತಳು ಯಾಕೆ ಹೊತ್ತಳು
ಯಾಕೆ ಬಿಟ್ಟಳು ಹೋದಳು
ಎನಿತು ಅತ್ತರು ಎನಿತು ಕರೆದರು.
ಎನಿತು ಕಾಲಕೆ ಹೋದಳು

ಇಂದು ಬಂದೆಯ ಬಂದು ನಿಂದಯ
ನಾನೆ ತಾಯಿ ಎಂದೆಯ
ಕಲಿಯ ಕಾಲಕೆ ಬಲಿಯ ಕಾಲಕೆ
ಕಲ್ಪಕಾಲಕೆ ಕರೆದೆಯ
*****