ಮುಡಿಯ ಸಿಂಗರಿಸಿದ
ಹೂವುಗಳು….
ಕೆನ್ನೆಯ ನುಣುಪಾಗಿಸಿದ
ಬಣ್ಣಗಳು…
ಮೂಗನು ಸೆಳೆದ
ಸುಗಂಧಗಳು…
ನಾಲಗೆಯ ಮುದಗೊಳಿಸಿದ
ರಸಗಳು…
ಕಿವಿಯ ತಣಿಸಿದ
ಸ್ವರಗಳು…
ಕಣ್ಣನು ಅರಳಿಸಿದ
ನೋಟಗಳು…
ಎಲ್ಲಿ ಹೋದವೋ?
ಎಣ್ಣೆ ತೀರಿದೆ
ಎಂದು ತೋರುವುದು…
ಬೆಂಕಿಯ ಕರುಣೆ
ಬತ್ತಿ
ಮತ್ತೂ ಉರಿಯುವುದು.
*****
ಮುಡಿಯ ಸಿಂಗರಿಸಿದ
ಹೂವುಗಳು….
ಕೆನ್ನೆಯ ನುಣುಪಾಗಿಸಿದ
ಬಣ್ಣಗಳು…
ಮೂಗನು ಸೆಳೆದ
ಸುಗಂಧಗಳು…
ನಾಲಗೆಯ ಮುದಗೊಳಿಸಿದ
ರಸಗಳು…
ಕಿವಿಯ ತಣಿಸಿದ
ಸ್ವರಗಳು…
ಕಣ್ಣನು ಅರಳಿಸಿದ
ನೋಟಗಳು…
ಎಲ್ಲಿ ಹೋದವೋ?
ಎಣ್ಣೆ ತೀರಿದೆ
ಎಂದು ತೋರುವುದು…
ಬೆಂಕಿಯ ಕರುಣೆ
ಬತ್ತಿ
ಮತ್ತೂ ಉರಿಯುವುದು.
*****