ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ...

ನೆನಪಿಸಿಕೊಳ್ಳಿ ರೆಡಿಂಗ್‌ನಿಂದ ಬ್ರೌಟನ್‌ವರೆಗಿನ ನಮ್ಮ ಯಾತ್ರೆಯನ್ನು. ಇಂಗ್ಲೆಂಡ್ ಮುಗಿದು ವೇಲ್ಸ್ ಮೊದಲಾಗುತ್ತಲೆ ಬದಲಾದ ಹವೆಯನ್ನು. ಬ್ರೌಟನ್ ಪಬ್ಬಿನಲ್ಲಿ ಸಂಜೆ ಕೈಗೊಂಡ ಮದ್ಯಪಾನ–ತಟಕ್ಕನೆ ಆರಂಭವಾದ ಬ್ಯಾಂಡಿಗೆ ತಾಳ ಹಾಕುತ್ತ ನೀವು...

ಅತಿ ಜರೂರು ಕರೆ ಓಗೊಟ್ಟು ನಡೆಯಲೇ ಬೇಕು ದೂಡಲಾಗದು ಮುಂದೆ ಹೇಳಲಾಗದು ನೂರು ನೆಪ ಅವ ದೂರ್ತನೆಂದರೂ ಬದುಕಿಗೆ ಬಾರದಿರೆ ಸಾಕೆಂದರೂ ದುತ್ತೆಂದು ಹೆಗಲೇರಿ ತಳ್ಳಿ ಬಿಡುವ ಕೂಪಕ್ಕೆ ಮುಗ್ಧ ಎಸಳುಗಳ ಕೂಡ ಕೊಚ್ಚಿ ಹಾಕುವ ಕ್ರೂರ ಕಣ್ಣೀರ ಧಾರೆಗೂ ಆರ್ತನ...

ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮ...

ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು, ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ ಇತ್ತು. ಪ್ರಾಯಶಃ ಚೆನ್ನಾಗಿ ಸ್ನಾನ ಮಾಡಿ ಬಿಳೀ ಬೆಳ್ಳಕ್ಕಿಯಂತಾಗಿ ಬಿ...

ಬೆಳಕು ಚಿಮ್ಮಿತು ಬೆಳ್ಳಿ ಹಾಡಿತು. ದಿವ್ಯ ಬಾಗಿಲು ತೆರೆಯಿತು || ಎಡದ ಕಡಲಿನ ನಿಬಿಡ ಒಡಲಲಿ ಜ್ಯೋತಿ ತೆಪ್ಪವು ತೇಲಿತು ತೆರೆಯ ಹೊರೆಯಲಿ ನೊರೆಯ ನೆಲೆಯಲಿ ಆತ್ಮದೀಪವ ತೂರಿತು ಮುಗಿಲ ಬಾಂಡಿಯ ಕರಿಯ ಕಂಠವ ಮಿಂಚು ಕಿರಣದಿ ತೊಳೆಯಿತು ದೂರ ದಂಡೆಯ ಕರ...

ತುಳುನಾಡು ರಮಣೀಯವಾದ ಪವಿತ್ರ ಕ್ಷೇತ್ರ ಇದನ್ನು “ಲ್ಯಾಂಡ್ ಆಫ್ ಟೆಂಪಲ್ಸ್” ಎಂದು ಕರೆಯಲಾಗಿದೆ. ಜಲ-ನೆಲ-ಗಾಳಿ-ಮಳೆ ಜನೋಪಯೋಗಕ್ಕಾಗಿ ವಿಪುಲವಾಗಿ ಲಭ್ಯವಿರುವ, ವನ ಸಂಪತ್ತು, ಕೃಷಿ, ಅನೇಕ ಬಗೆಯ ಮನೋಹರವಾದ ಫಲ-ಪುಷ್ಪಗಳಿಂದ ಸಮೃದ್ಧ...

ನಿನಗೆ ಅರವತ್ತಾಯಿತಾ ಎಂದದ್ದು ‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ ಸಣ್ಣಗೆ ಬೆಚ್ಚಿದೆ ಒಳಗೆ, ಯಾರು ಕೇಳಿದ್ದು ಹಾಗೆ ? ಜೊತೆಗಿದ್ದ ಅಳಿಯನ ? ಮಗನ ? ಅಥವಾ ಸಿನಿಮಾ ರೇಸು ಕಾರು ಬಾರು ಎಂದು ಸದಾ ಜೊತೆಗೆ ಪೋಲಿ ಅಲೆಯುವ ಅವನ ಗೆಳೆಯನ ? ಏನು ಕೇಳಿದರ...

1...2627282930...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....