
ನಡೆದಿದೆ ಪೂಜಾರತಿ ವಿಶ್ವದೇಹಿಗೆ ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೆ, ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿವೆ ಚಂದನವನ ಚಾಮರ ಬೀಸುತಲಿದೆ ಪರಿಮಳ, ಭೂಕಂಠದಿ ಹೊಮ್ಮಿದೆ ಹಕ್ಕಿ ಕಲರವ ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ ರಾಶಿರಾಶಿ ಬಣ್ಣದ...
ದಾರಿಯು ಇನಿತಾದರು ಕಳೆದಿಲ್ಲ, ದೂರದ ಊರಿನ ಸುಳಿವೇ ಇಲ್ಲ, ಹಸುರು ಬಯಲುಗಳೊ ಬಾಳಿನೊಳಿಲ್ಲ, ಇರುಳಾಗಲೆ ಕವಿದಿದೆ, ಗೆಳತಿ! ರವಿ ಮುಳುಗಿದನದೋ ದುಗುಡದ ಕಡಲಲಿ, ಮೋಡದ ದಿಬ್ಬಣ ಆಗಸದೊಡಲಲಿ ಅಬ್ಬರಿಸಿದೆ, ಭಯ ತುಂಬುತ ಸಿಡಿಲಲಿ ಇರುಳಾಗಲೆ ಕವಿದಿದೆ, ...













