ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ ರಕ್ತ ಉಕ್ಕಿ, ಶಕ್ತಿ ಮಿಕ್ಕಿ ಕೋಡಿಯೊಡೆದು ಓಡಲಿ ಕಾಮ ಮೋಹ ಸಿರಿಯು ಸ್ವಾರ...

ಕಿರಣಮಾಲೆ ಕೊರಳಲಿ ತಳೆದ ದೇವನೆ ನೀಡೋ ನಿಜ ದರ್ಶನ ಹೇ ಭಾಸ್ಕರನೆ ಜಗಜಗಿಸುವ ಕಿರಣಜಾಲ ಹೊಳೆವ ಹೊನ್ನ ತಳಿಗೆ ಬೆಳಗಿ ನಡುವೆ ನಿಂತಿದೆ ಸರಿಸಿ ಸತ್ಯ ಮರೆಗೆ ನಿಜವ ತಿಳಿವ ಹಂಬಲ ತುಡಿದಿದೆ ಎದೆ ತುಂಬ, ಸರಿಸಿ ಹೊನ್ನಿನಂಬುಗಳನು ತೋರೋ ನಿಜಬಿಂಬ *****...

ಅವ್ವನ ಸೀರೆ ಮಡಚಲಾರೆ ಅಪ್ಪನ ರೊಕ್ಕ ಎಣಿಸಲಾರೆ ಏನದು? ನೀ ಹೇಳು….. ನೀ ಹೇಳು ಸೀಟಿಗಂಟಿಸಿ ಕೂರಿಸಿದ್ದ ಗಲಾಟೆ ಮಕ್ಕಳು ಮುಖ ಕಿವುಚಿ ಪ್ರಶ್ನೆ ಮರೆಸಲು ಕಪ್ಪು ಆಕಾಶದಲ್ಲಿ ಎಷ್ಟೊಂದು ಹೊಳೆಯುವ ತಾರೆಗಳು ನೋಡಮ್ಮ ಮೇಲೆ ಮೇಲೆರಲಿ ನಮ್ಮ ವಿಮ...

ಜೀವದ ಹಕ್ಕಿ ಪಲ್ಲವಿಸುತಿದೆ ಬಿರಿ ಬಿರಿದ ಕೊರಳಿನಿಂದ, ಅಲೆವ ಮೋಡಗಳ ಕೈ ಬೀಸಿ ತಡೆಯುತಿದೆ ಅನುಪಲ್ಲವಿಗೆ ದೈನ್ಯದಿಂದ ||ಪ|| ಮೌನ ಮೌನದ ಮಾತಿನ ಮಾತನು ಮೀರಿನಿಂತ ಕೂಗು, ನಿನದ ನಿನದದ ಬಾಳ ತರಂಗದ ತಂತುತಂತಿನಾ ಕೊರಗು | ಚಿಂದಿ ಚಿಂದಿಯ ಹಸಿರು ವಸ...

ನಾನಿಲ್ಲಿ ಸುಮ್ಮನೆ ಬೀಳುವ ಮಳೆಯ ಹನಿಗಳಿಗೆ ಪರಿತಪಿಸುತಿರುವೆ ಮಾತಿಲ್ಲದೆ ಮಿಂಚು ಸುಳಿಗೆ ಹರಿದಾಡುವ ಪರಿಗೆ ಭಯಪಡುತಿರುವೆ ಆರ್ಭಟದ ಗುಡುಗಿನ ಸಪ್ಪಳಗೆ ಬಡಿದುಕೊಳ್ಳುವ ಎದೆ ಕುಸಿಯುತಿದೆ ನಿನ್ನ ನೆನಪಿನಲಿ. ಎಲ್ಲ ದಿಕ್ಕುಗಳಿಂದ ಗಾಳಿ ಹೊತ್ತು ತಂ...

ಆ ಕಾಲ ಅಳಿದಿಹುದು, ಮತ್ತೆ ಬಾರದು, ಮಗುವೆ. ಮುಳುಗಿಹುದು ಮಂಜಾಗಿ ಚಿರಕು ಅಳಿದಿಹುದು. ನಿನ್ನೆಯೆಡೆ ನೋಡುವೆವು ಎದೆಗೆಟ್ಟು ಕಾಣುವೆವು- ನಾನು ನೀನೂ ಕೂಡಿ- ಜೀವಕಾರ್ನದಿಯೊಳಗೆ ಕಂಡ ಕನಸಾಸೆಗಳ ಮುರುಕು ರೂಪಗಳು ಕಂಗೆಟ್ಟು, ಮಂಜಿಟ್ಟು ಮಸಕಿನಲಿ ಮು...

ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ ಸಹ ಉದ್ಯೋಗಿಗಳಿಂದ ...

ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ ಕನ್ನಡ ನಾಡಿನ ಜಲನೆಲ ತಮಗೆಲ್ಲ ಕಲ್ಪವೃ...

1...2526272829...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....