ಆ ಕಾಲ ಅಳಿದಿಹುದು, ಮತ್ತೆ ಬಾರದು, ಮಗುವೆ.
ಮುಳುಗಿಹುದು ಮಂಜಾಗಿ ಚಿರಕು ಅಳಿದಿಹುದು.
ನಿನ್ನೆಯೆಡೆ ನೋಡುವೆವು
ಎದೆಗೆಟ್ಟು ಕಾಣುವೆವು-
ನಾನು ನೀನೂ ಕೂಡಿ- ಜೀವಕಾರ್ನದಿಯೊಳಗೆ
ಕಂಡ ಕನಸಾಸೆಗಳ ಮುರುಕು ರೂಪಗಳು
ಕಂಗೆಟ್ಟು, ಮಂಜಿಟ್ಟು ಮಸಕಿನಲಿ ಮುಳುಗಿಹುದು!
ನಾವೀರ್ವರೂ ಅಂದು ಕಂಡ ತೊರೆ ಹರಿಯುತಿದೆ.
ಅದರಲೆಗಳೆಂದಿಗೂ ಹಿಂದಿರುಗದಿಹವು!
ನಾವಿಲ್ಲಿ ಉಳಿದಿಹೆವು
ನೋವ ನಾಡಿನೊಳಿಹೆವು
ಜೀವನದ ಮುಂಜಾನೆ ನಸುಬೆಳಕು ಬೀಳುತಿರೆ
ಮಾಸಿ ಮಾಯವನಡೆವ ಇರುಳಿನೊಲವಿನ ಆಸೆ
ನೆನಪನುಳಿಸಲು ಉಳಿದ ಗೋರಿಗಳ ಹಾಗಿಹೆವು!
Shelley: That time is dead forever child
*****