ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ
ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ
ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ
ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ
ರಕ್ತ ಉಕ್ಕಿ, ಶಕ್ತಿ ಮಿಕ್ಕಿ ಕೋಡಿಯೊಡೆದು ಓಡಲಿ
ಕಾಮ ಮೋಹ ಸಿರಿಯು ಸ್ವಾರ್ಥ್ಯವೆಲ್ಲ ಭಸ್ಮಮಾಡಲಿ
ಎನ್ನ ಮನವು ವಿಷಯ ಬಲೆಗೆ ರಾಮಬಾಣವಾಗಲಿ
ನಾವು ನೀವು ಒಂದೇಯಂಬ ಕ್ರಾಂತಿಕಹಳೆ ಊದಲಿ
*****


















