ಕಿರಣಮಾಲೆ ಕೊರಳಲಿ
ತಳೆದ ದೇವನೆ
ನೀಡೋ ನಿಜ ದರ್ಶನ
ಹೇ ಭಾಸ್ಕರನೆ

ಜಗಜಗಿಸುವ ಕಿರಣಜಾಲ
ಹೊಳೆವ ಹೊನ್ನ ತಳಿಗೆ
ಬೆಳಗಿ ನಡುವೆ ನಿಂತಿದೆ
ಸರಿಸಿ ಸತ್ಯ ಮರೆಗೆ

ನಿಜವ ತಿಳಿವ ಹಂಬಲ
ತುಡಿದಿದೆ ಎದೆ ತುಂಬ,
ಸರಿಸಿ ಹೊನ್ನಿನಂಬುಗಳನು
ತೋರೋ ನಿಜಬಿಂಬ
*****