ಕನ್ನಡ ರಕ್ಷಿಸ ಬನ್ನಿರೋ

ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ
ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ

ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ
ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ
ಕನ್ನಡ ನಾಡಿನ ಜಲನೆಲ ತಮಗೆಲ್ಲ
ಕಲ್ಪವೃಕ್ಷ ನಾಡು ನುಡಿಯೇ ರಕ್ಷಿಸೋಣ ಬನ್ನಿರೋ

ಕನ್ನಡವೆಂಬ ವಿದ್ಯಾ ಮಂದಿರಲ್ಲಿ ಕುಳಿತು
ಕನ್ನಡಿಗನೆಂಬ ಗುರುವಿನೊಂದಿಗೆ ನಲಿಯುತ್ತ
ಕನ್ನಡವ ಓದು-ಬರಹ ಕಲಿಯಲು ಬನ್ನಿರೋ
ಓ ಕನ್ನಡಿಗರೆ ಓಡೋಡಿ ಬನ್ನಿರೋ

ಕರ್ನಾಟಕ ರಾಜ್ಯದಲ್ಲಿ ಕನ್ನಡವ ಅರಿತು
ಕನ್ನಡ ಭಾಷೆಗೆ ರಕ್ಷಿಸಲು ಮುಂದೆ ಬನ್ನಿರೋ
ಕನ್ನಡಿಗರ ಮನಮನದೂದ್ದಕ್ಕೂ ಕನ್ನಡ ಕಹಳೆ
ಕನ್ನಡವೇ ಉಸಿರಾಗಿಸೋಣ ಬನ್ನಿರೋ

ಜಾತಿ ಮತ ಪಂಥ ಭೇದವ ಮರೆತು
ಕನ್ನಡಕ್ಕಾಗಿ ಹೋರಾಟಕೆ ಹೊರಾಡ ಬನ್ನಿರೋ
ದೇಶದೂದ್ದಕ್ಕೂ ಕನ್ನಡವೆಂಬ ಕಹಳೆ
ಮೊಳಗಿಸಲು ಓ ಪ್ರೀಯ ಕನ್ನಡಿಗರೆ ಬನ್ನಿರೋ

ಕನ್ನಡ ತಾಯಿ ನುಡಿಯೇ ಮಧುರ
ಕನ್ನಡವೇ ಸುಲಭ ಕನ್ನಡವೇ ಸುಂದರ
ಕನ್ನಡಾಂಬೆಯ ತವರು ಕರ್ನಾಟಕವೇ
ಎಂದು ಆತ್ಮ ಸ್ಥೈರ್ಯದಿ ಸಾರಿ ಹೇಳ ಬನ್ನಿರೋ

ಕನ್ನಡವೇ ನಮ್ಮ ನಿಮ್ಮೆಲ್ಲರ
ಉಸಿರಾಗಿಸೋಣ ಬನ್ನಿರೋ ಬೇಗ ಬನ್ನಿರೋ
ಓ ಕನ್ನಡಾಭಿಮಾನಿಗಳೆ ಬನ್ನಿರೋ
ಕನ್ನಡಾಂಬೆಗೆ ನಮೋ ಹೇಳ ಬನ್ನಿರೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದುಕ
Next post ಅವನ ಹೆಸರಲ್ಲಿ

ಸಣ್ಣ ಕತೆ

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…