Month: May 2017

#ವಿಜ್ಞಾನ

ಸ್ಮಾರ್ಟ್ ಫೋನ್‌ಗಳು

0

ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ ಇದು ಸಂಪರ್ಕ ಮತ್ತು ಸಂಘಟನೆ ಎರಡನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿದೆ. ಅಮೇರಿಕಾ ಸೇರಿದಂತೆ ಯೂರೋಪಿನ ಹಲವಾರು ರಾಷ್ಟ್ರಗಳ ಗಮನ […]

#ಹನಿಗವನ

ಸಂಸಾರಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಸಂಸಾರಿಯಾಗುವ ಮೊದಲು ಮುಕ್ತಕ ಸಂಸಾರಿಯಾಗೆ ಚಂದ ಬಂಧ ಪ್ರಾಸ ಪ್ರಯಾಸ ಆಟ ಆಯಾಸ *****

#ಕವಿತೆ

ಹೆದ್ದಾರಿಗುಂಟ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು” ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ ಸ್ವಲ್ಪ ನೆಮ್ಮದಿಯಾಗಿ ಮಲಗಲೂ ಎಂದು ಮುಂದಿನ ಸೀಟಿನಲ್ಲಿಯೇ ಕುಳಿತದ್ದು ಗೊತ್ತಲ್ಲ ನಿಮಗೂ ಹಿಂದಿನ ಸೀಟು ಎಬ್ಬೆಬ್ಬಿಸಿ ಒಗೆಯುವದೆಂದು ನಮ್ಮ ಡ್ರೈವರು ತುಂಬಾ […]

#ಕವಿತೆ

ಯಾರದೀ ಮಗು?

0

ಮಗು, ನೀನು ಹುಟ್ಟುವ ಮೊದಲು ನಾನಿನ್ನು ಹಾಲುಗಲ್ಲದ ಹುಡುಗಿ! ಆಡುತ್ತ ಸಂಜೆಯ ನೆರಳಾಗಿ ಬೆಳೆದೆ ದಂಡಗೆ ಮೂಡುವ ಸೂರ್ಯ ನಿಂತು ನೋಡಿ ಬೆರಗಾದ ನಾಚಿ ಕೆಂಪಾದ ಒಂದು ದಿನ ‘ದೊಡ್ಡವಳಾದೆ’ ದೇವರ ಹೆಸರಲ್ಲಿ ‘ದಾಸಿಯಾದೆ’. ಕತ್ತಲಿಗೆ ಸಿಂಗಾರಗೊಂಡು ಪ್ರತಿದಿನವೂ ಮುತ್ತೈದೆಯಾದೆ ಮಗು, ನೀನು ಹುಟ್ಟಿದಾಗ ತಾಯಿಯಾದೆ ನೀನೊಮ್ಮೆ ಶಾಲೆಗೆ ಸೇರುವಾಗ ಊರು ಮಾತಾಡುವಾಗ ತಂದೆಯ ಹೆಸರು…? […]

#ಕವಿತೆ

ನಿನಗಾಗೇ ಕಾಯುತಿರುವೆ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು ನನಗೇ ನಾ ತಿಳಿಯಲರಿದು ತಿಳಿಸಿ ಹೇಳು ಬಾ; ಪಾಲಾಗಿಹ ಕಾಳು ನಾನು ದೂರ ಉಳಿದ ಬೇಳೆ ನೀನು ಕೂಡಿ ಅರ್ಥ […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೨೨

0

ಕಣ್ಣಿಗೊಂದು ಕಣ್ಣಲ್ಲ ಕಣ್ಣೊಳಗೆ ಕಣ್ಣು. ಇದನರಿಯದ ಜಗಕೆ ಜೀವನವದು ಮಣ್ಣು. *****

#ಸಣ್ಣ ಕಥೆ

ಕೊನೆಯ ಮಜಲು

0
ಆಚಂಟ ಹೈಮವತಿ
Latest posts by ಆಚಂಟ ಹೈಮವತಿ (see all)

ನಿವೃತ್ತ ಜೀವನ ಇಷ್ಟು ವಿಕಾರವಾಗಿರುತ್ತೆ – ಅಂತ ನಾನು ಊಹಿಸಲೇ ಇಲ್ಲ. ಹೊತ್ತು ಹೋಗದೆ… ಏನು ಮಾಡಬೇಕೋ ಗೊತ್ತಾಗದೇ, ಮಾತನಾಡುವವರು ಯಾರೂ ಇಲ್ಲದೇ… ಎಲ್ಲಾ ಅಯೋಮಯ ಅನಿಸುತ್ತಿದೆ. ಉದ್ಯೋಗದಲ್ಲಿ ಇರೋ ದಿನಗಳ ದಿನಚರ್ಯೆಯನ್ನು ಬದಲಿಸಿ ಹೊಸ ಕಾರ್ಯಕ್ರಮ ಪಟ್ಟಿಗೆ ಹಾಕಿಕೋಬೇಕು – ಅಂತ ಅನಿಸುತ್ತಿದೆ. ಹಳೇ ದಿನಗಳ ನಡೆತೆಯ ವೇಗಕ್ಕೆ ಬ್ರೇಕ್ ಅಗ್ತಾ ಆಗ್ತಾ ಇದೆ! […]

#ಕವಿತೆ

ತಿಂಡಿ ಲೆಕ್ಕ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಇಡ್ಳಿ ಯಾರಿಗೆ ಬೇಕು ಇಡ್ಳಿ? ಅಣ್ಣನಿಗೆ ಹತ್ತು ನಂಗೊಂದಿಪ್ಪತ್ತು ಒಟ್ಟಾರೆಷ್ಟು ಇಡ್ಳಿ? ಒಟ್ಟಾರೆ ಮೂವತ್ತು ಇಡ್ಳಿ ಕಣ್ ಕಣ್ ಬಿಟ್ಟು ಉದ್ದಿನ ಹಿಟ್ಟು ಯಾರಿಗೆ ಬೇಕು ದೋಸೆ? ಅಣ್ಣನಿಗಿಪ್ಪತ್ತು ನಂಗೊಂದು ಮೂವತ್ತು ಒಟ್ಟಾರೆಷ್ಟು ದೋಸೆ? ಒಟ್ಟಾರೆ ಐವತ್ತು ದೋಸೆ ಊತದ್ದಾಯ್ತು ಬಾತದ್ದಾಯ್ತು ಯಾರಿಗೆ ಬೇಕು ಊತಪ್ಪ? ಅಣ್ಣನಿಗೆ ಮೂವತ್ತು ನಂಗೊಂದು ನಲುವತ್ತು […]

#ಜನಪದ

ನಮ್ಮೂರ ಹೋಳಿ ಹಾಡು – ೧

0
ಎನ್ ಎಂ ಗಿರಿಜಾಪತಿಯವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದವರು.ತಂದೆ ದಿ|| ಎನ್ ಎಂ ಸೋಮಶೇಖರಸ್ವಾಮಿ, ತಾಯಿ ಶ್ರೀಮತಿ ಎನ್ ಎಂ ವಿಶಾಲಾಕ್ಷಮ್ಮ,.ಗಿರಿಜಾಪತಿಯವರು ಎಂ. ಎ., ಬಿ. ಇಡಿ., ಪದವಿ ಪೂರೈಸಿದ್ದು, ಪಿ. ಎಚ್‌ಡಿ., ವ್ಯಾಸಂಗ ಮಾಡುತ್ತಿದ್ದಾರೆ.

ಮುಂಬೈನ ಬಿ.ಎ.ಎ.ಆರ್‍.ಸಿ. ಯವರಿಂದ ವಿಜ್ಞಾನ ಪ್ರಬಂಧಕ್ಕೆ ಗೌರವ ಪುರಸ್ಕಾರ. ‘ಮೃತ್ಯು ಸಂಝೀವಿನಿ’ ನಾಟಕ ಹಸ್ತಪ್ರತಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಅಂಡ್ ಇಂಡಸ್ಟ್ರಿಯಲ್ ಮ್ಯೂಸಿಯಂನಿಂದ ಗೌರವ ಪುರಸ್ಕಾರ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಗೌರವ ದೊರೆತಿವೆ.

ಕೃತಿಗಳ ವಿವರ:

ಕವನ ಸಂಕಲನ:
ತಾಯಿ ಭಾರತಿ ಸುತೆ ಕನ್ನಡತಿ
ಭಾವನದಿಯ ದಂಡೆಯ ಮೇಲೆ...
ಆಮ್ಲ ಮಳೆ

ಕಥಾ ಸಂಕಲನ:
ನಾವು ನಮ್ಮವರು

ಮಕ್ಕಳ ನಾಟಕ:
ಅಪಾಯದ ಗಂಡೆ

ಸದ್ಭೋದಾಮೃತ ಶತಕ
ಕನ್ನಡ ವ್ಯಾಕರಣ ಮತ್ತು ಭಾಷಾ ರಚನೆ
ವಚನ ರತ್ನತ್ರಯರು
ಕಾವ್ಯ ಪರಿಕರಗಳು
ವಚನ ಚಿಂತಾಮಣಿ
ಕನ್ನಡ ಛಂದಸ್ಸಂಪದ
ಕನ್ನಡ ಛಂದೋದರ್ಪಣ
ಕನ್ನಡ ಭಾಷಾಲೋಕ
ಅಮೃತ ತರಂಗಿಣಿ
ಬೆಳಕಿನ ಹೆಜ್ಜೆಗಳು
ಪ್ರಾಚೀನ ಭಾರತೀಯ ಕಥಾ ಸಾಹಿತ್ಯ
ನಮ್ಮೂರ ಹೋಳಿ ಹಾಡು
*****
ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)

ಹೋಳಿಯ ಹಬ್ಬ ವಿಶಾಲದ ಪದಗಳ ಕೇಳಿರಿ ಜನರೆಲ್ಲಽ| ಬಾಲಕರೆಲ್ಲರೂ ಕೋಲಾಟವ ಪಿಡಿದೇಳುವ ಶೃತಿ ಸೊಲ್ಲಽ||ಪ|| ದಕ್ಷವತೀಶನು ದಕ್ಷಬ್ರಹ್ಮ ತಾ ತನ್ನ ಪ್ರೀತಿ ಸುತೆಯುಽ ಸಾಕ್ಷಾತ್ ವರ ವಿರೂಪಾಕ್ಷನಿಗಿತ್ತ ನುಪೇಕ್ಷದಿ ಸಲಿಸುವೆಯಽ||೧|| ಮನದೊಳರಿದು ದಕ್ಷನು ಶಿವ ತನ್ನಯ ಮನೆಯಳಿಯನೆಂದು ಘನಗರ್ವದಿ ಶಿವನನು ಕರೆಯ ಪೋದನು ಕೈಲಾಸಕಂದು||೨|| ಭೂತೇಶನು ತಿಳಿದಾತನ ಗರ್ವವ ಮಾತಾಡಿಸಲಿಲ್ಲಽ ಖ್ಯಾತಿಲಿ ದಕ್ಷನು ತಾ ತಿಳಿಯದೆ […]