ಬಂದ ಅಗೋ ಮರಿಯಾನೆ ಬಣ್ಣದ ಹೂವೀಣೆ ಇಂಥ ಚಿಣ್ಣ ಇನ್ನೊಬ್ಬನ ಜಗದಲಿ ನಾ ಕಾಣೆ ನೀರಿರಲಿ ನೆಲದಲ್ಲೇ ಈಜುವ ಈ ಧೀರ, ಬೆಣ್ಣೆಯೇನು ಮಣ್ಣನ್ನೂ ಚಪ್ಪರಿಸುವ ಪೋರ! ಕರೆದೆಲ್ಲಾ ಹೆಣ್ಣುಗಳ ಉಡಿಗೇರುವ ಮಾರ, ಜಾಜಿಗಿಂತ ಹಗುರ ಈ ಹೂಗೆನ್ನೆ ಪೋರ. ನಕ್ಕನೊ ಇವ ...

ಕಂಗಳ ಮುಂದೆ ಮಾಣಿಕವಿದ್ದು, ಕಾಣಲರಿಯರಯ್ಯ. ಬಾಗಿಲ ಮುಂದೆ ಹಾಲಸಾಗರವಿದ್ದು, ಒರತೆಯ ನೀರಿಗೆ ಹಾರುವರಂತೆ, ಕಂಗಳ ಮುಂದೆ ಮಹಾಶರಣಿನಿದ್ದು, ಕತ್ತಲೆ ಎನಲೇಕೆ? ಇನ್ನು ಬೇರೆ ಲಿಂಗವನರಸಿಹೆನೆನಲೇಕೋ ಆ ಮಹಾಶರಣ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***...

ಇಲ್ಲಿಯವರೆಗೆ ನಿರೋಧ-ನಿಷೇಧಗಳ ಹಿಡಿತ-ಬಿಗಿತಗಳ ‘ಋಣ’ ಮಾರ್ಗದಲ್ಲಿ ನಡೆದದ್ದಾಯಿತು ಹುಲಿಯ ಮೈ ಬೋಳಿಸಿ ಆಕಳ ಮಾಡುವ ಯತ್ನ ನಡೆಯಿತು ಆಟಗುಳಿ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು ಸ...

ಪ್ರಿಯ ಸಖಿ, ನೀನು ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯವನ್ನು ನೋಡಿರಬಹುದು. ಎಲ್ಲ ದೇವಾಲಯಗಳಂತೆ ಅದೊಂದು ದೇವಾಲಯ ಅದರಲ್ಲೇನು ವಿಶೇಷ ಎಂದು ಕೊಳ್ಳುತ್ತೀದ್ದೀಯಾ? ಈ ದೇವಾಸ್ಥಾನದ ಅನಂತ ಪದ್ಮನಾಭಮೂರ್ತಿ ಶೇಷಶಯನವಾಗಿದ್ದು ಅದು ಹದಿನೆಂಟ...

ಅದೇ ಮೊದಲನೆಯ ಸಲ ಸೀರೆ ಉಟ್ಟು ಮಾಂಗಲ್ಯಕಟ್ಟಿಸಿಕೊಂಡ ಹುಡುಗಿ- ಮದುವೆ ಮುಗಿಸಿ ಬಿಟ್ಟುಹೊರಡುವ ತಂದೆತಾಯಿಯರ ಅಗಲಿಕೆಯ ನೋವಿಗೆ ಅರಿಯದೇ ಕಣ್ಣೀರು ತುಂಬಿದ್ದು ಬಿಕ್ಕುತ್ತ ಸೆರಗಂಚಿನಿಂದ ಕಣ್ಣೊರಸಿಕೊಳ್ಳುವ ಮದುವಣಗಿತ್ತಿ- ಕಂಪ್ಯೂಟರ್ ಮೇಲೆ ಕೈಚಳ...

ನಾವೇನು ಮಾಡೋಕಾಗತ್ತೆ ಎಂದರೆ ಕೆಲಸ ಹೇಗೆ ಗಿಟ್ಟಿಸಿಕೊಂಡಿರಿ? ಮನೆ ಹೇಗೆ ಕಟ್ಟಿಸಿಕೊಂಡಿರಿ? ಮಕ್ಕಳನ್ನು ಹೇಗೆ ಅಮೇರಿಕೆಗೆ ಕಳಿಸಿದಿರಿ? ಒಂದು ದಿನ ಸಮೀಪ ಭರ್‍ರೆಂದು ಧಾವಿಸಿಹೋದ ಕಾರು ನಮ್ಮಿಬ್ಬರ ಮೇಲೂ ರಾಡಿ ಎರಚಿದ್ದು ನೆನಪಿಲ್ಲವೆ? ನಂತರ ನೀ...

ಆಕಾಶದಲ್ಲಿ ಕಾಲು ಇಳಿಬಿಟ್ಟು ನೀರಲ್ಲಾಡಲು ಹೋದ ಸೂರ್ಯ ಜಾರಿ ಸಂಜೆ ಸಮುದ್ರದೊಳಕ್ಕೆ ಬಿದ್ದವನನ್ನು ಮೀನುಗಳೆಲ್ಲಾ ಸೇರಿ ಮೇಲಕ್ಕೆತ್ತಲು ಪಾಪ ಬೆಳಗಿನವರೆಗೂ ಕಷ್ಟಪಡಬೇಕಾಯಿತು. *****...

ಚುಮು ಚುಮು ಬೆಳಗು, ಅರೆ ಕತ್ತಲೆ ಅರೆ ಬೆಳಕು. ಹಕ್ಕಿಗಳ ಚಿಲಿಪಿಲಿ ಸ್ವರ. ಇಂತಹ ಮುಂಜಾವುಗಳೆಂದರೆ ಅತ್ಯಂತ ಪ್ರಿಯವಾದದ್ದು ನೀಲಾಗೆ. ಎಲ್ಲರೂ ಮಲಗಿದ್ದರೂ ತಾನೊಬ್ಬಳೇ ಎದ್ದು ಮನೆಯ ಮುಂದೆ ದಿನಕ್ಕೊಂದು ರಂಗೋಲಿ ಇರಿಸಿ, ಅದನ್ನೊಮ್ಮೆ ಕಣ್ತುಂಬಿಕೊ...

1...56789...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...